Bharti Airtel : ತಿಂಗಳ ರೀಚಾರ್ಜ್‌ ಹೆಚ್ಚಿಸಿದ ಏರ್‌ ಟೆಲ್‌ | ಎಷ್ಟು ? ಶೀಘ್ರವೇ ದೇಶಾದ್ಯಂತ ಜಾರಿ

ಟೆಲಿಕಾಮ್ ದೈತ್ಯ ಕಂಪನಿ ಭಾರತಿ ಏರ್ಟೆಲ್ , 4G ಸೇವೆಯಿಂದ 5G ಸೇವೆ ನೀಡಲು ಮುಂದಾಗಿದ್ದು, ಮನರಂಜನೆಯ ಜೊತೆಗೆ ಕೆಲಸವನ್ನು ನಿರ್ವಹಿಸಲು ಎಲ್ಲ ಟೆಲಿಕಾಮ್ ಸರ್ವೀಸ್ ಗಳು 5ಜಿ ಸೇವೆಯ ಮೂಲಕ ಅಪ್ಗ್ರೇಡ್ ಮಾಡುತ್ತಿದೆ. ಇದೀಗ ಭಾರ್ತಿ ಏರ್​ಟೆಲ್ ರೀಚಾರ್ಜ್ ಪ್ಲಾನ್ ಒಂದನ್ನು ಹರಿಯಾಣ ಮತ್ತು ಒಡಿಶಾಗಳಲ್ಲಿ ಜಾರಿಗೊಳಿಸಿದ್ದು, ಮುಂದಿನ ಕೆಲ ದಿನಗಳಲ್ಲಿ ದೇಶದಾದ್ಯಂತ ವಿಸ್ತರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಹೊಸ ಯೋಜನೆ ಜಾರಿಗೆ ಬಂದರೆ ಏರ್ಟೆಲ್ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಿದೆ.

 

ಹೌದು!!ಹರಿಯಾಣ ಮತ್ತು ಒಡಿಶಾ ವಲಯಗಳಲ್ಲಿ 28 ದಿನಗಳ ಅವಧಿಯ ಕನಿಷ್ಠ ರಿಚಾರ್ಜ್ (Minimum Recharge) ದರವನ್ನು ಭಾರ್ತಿ ಏರ್​ಟೆಲ್(Bharti Airtel) ಶೇಕಡಾ 57ರಷ್ಟು ಹೆಚ್ಚಿಸಿದ್ದು, 155 ರೂ.ಯನ್ನು ನಿಗದಿ ಮಾಡಿದ್ದು, ಈ ಕುರಿತು ಕಂಪನಿಯ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ.99 ರೂ. ಮೊತ್ತದ ಕನಿಷ್ಠ ರಿಚಾರ್ಜ್ ದರವನ್ನು ಏರ್​ಟೆಲ್ ಸ್ಥಗಿತಗೊಳಿಸಿದ್ದು, ಈ ಯೋಜನೆಯಡಿ 200 ಎಂಬಿ ಡೇಟಾ, ಸೆಕೆಂಡ್​ಗೆ 2.5 ರೂ. ನಂತೆ ಕರೆ ಸೌಲಭ್ಯ ನೀಡಲಾಗಿತ್ತು. ಇದೀಗ ಇದರ ಬದಲಿಗೆ ಈಗ ಹರಿಯಾಣ ಹಾಗೂ ಒಡಿಶಾದಲ್ಲಿ 155 ರೂ.ಗೆ 28 ದಿನಗಳ ವ್ಯಾಲಿಡಿಟಿ, 1 ಜಿಬಿ ಡೇಟಾ, ಅನಿಯಮಿತ ಕರೆ ಹಾಗೂ 300 ಎಸ್‌ಎಂಎಸ್ ಸೌಲಭ್ಯ ಇರುವ ಪ್ಲಾನ್ ಅನ್ನು ಪರಿಚಯಿಸಲಾಗಿದೆ.

155 ರೂ.ಗಿಂತ ಕಡಿಮೆ ಮೊತ್ತದ ಎಲ್ಲ ಪ್ಲಾನ್​ಗಳನ್ನು ಏರ್​ಟೆಲ್ ಶೀಘ್ರದಲ್ಲೇ ರದ್ದುಪಡಿಸುವ ಸಾಧ್ಯತೆ ದಟ್ಟವಾಗಿದ್ದು, ತಿಂಗಳ ಪ್ಲಾನ್​ನೊಂದಿಗೆ ಎಸ್​ಎಂಎಸ್​ ಬೇಕಾದರು ಕೂಡ ಗ್ರಾಹಕರು 155 ರೂ. ರಿಚಾರ್ಜ್ ಮಾಡಬೇಕಾಗುತ್ತದೆ ಎನ್ನಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆಗಾಗಿ, ‘ಪಿಟಿಐ’ ಸುದ್ದಿಸಂಸ್ಥೆಯು ಭಾರ್ತಿ ಏರ್​ಟೆಲ್​ಗೆ ಇ-ಮೇಲ್ ಸಂದೇಶ ಕಳುಹಿಸಿದ್ದು, ಉತ್ತರಕ್ಕಾಗಿ ಕಾಯುತ್ತಿದೆ.

ಏರ್​ಟೆಲ್ ಹರಿಯಾಣ ಮತ್ತು ಒಡಿಶಾದಲ್ಲಿ ಹೊಸ ಪ್ಲಾನ್ ಅನ್ನು ಪ್ರಯೋಗದ ಅನ್ವಯ ಪರಿಚಯಿಸಿದ್ದು, ರಾಜ್ಯಗಳಲ್ಲಿ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ನೋಡಿಕೊಂಡ ಬಳಿಕ, ಮುಂದಿನ ನಿರ್ಧಾರ ಕೈಗೊಳ್ಳುವ ತಂತ್ರಗಾರಿಕೆ ರೂಪಿಸುವ ಸಾಧ್ಯತೆ ದಟ್ಟವಾಗಿದೆ.

99 ರೂ. ಪ್ಲಾನ್​ನಲ್ಲಿ 99 ರೂ. ಟಾಕ್​ಟೈಮ್, 200 ಎಂಬಿ ಡೇಟಾ 28 ದಿನಗಳ ಅವಧಿಯ ಪ್ರಯೋಜನ ದೊರೆಯುತ್ತಿತ್ತು. ಇದೀಗ 155 ರೂ. ಪ್ಲಾನ್​ನಲ್ಲಿ 1 ಜಿಬಿ ಡೇಟಾ ಜತೆಗೆ 300 ಎಸ್​​ಎಂಎಸ್ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಕನಿಷ್ಠ ರಿಚಾರ್ಜ್ ದರದಲ್ಲಿ ಶೇಕಡಾ 57ರಷ್ಟು ಹೆಚ್ಚಳ ಮಾಡಿದಂತಾಗಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್​ನ ವಿಶ್ಲೇಷಕರು ಸಂಜೇಶ್ ಜೈನ್ ಹಾಗೂ ಆಕಾಶ್ ಕುಮಾರ್ ಹೇಳಿದ್ದಾರೆ.

ಈ ಹಿಂದೆ ಕೂಡ ಏರ್​ಟೆಲ್ ಈ ರೀತಿಯ ಪ್ರಯೋಗ ನಡೆಸಿದ್ದು, ಕನಿಷ್ಠ ರಿಚಾರ್ಜ್ ದರವನ್ನು ಆಯ್ದ ವಲಯಗಳಲ್ಲಿ 79 ರೂ.ನಿಂದ 99 ರೂ.ಗೆ ಏರಿಕೆ ಮಾಡಿತ್ತು.ಆ ಬಳಿಕ ದೇಶದಾದ್ಯಂತ ಅನುಷ್ಠಾನ ಮಾಡಲಾಗಿತ್ತು.

ಸದ್ಯದ ಮಾರುಕಟ್ಟೆಯ ಸ್ತಿತಿಗತಿಯಲ್ಲಿ ಟಾರಿಫ್ ಹೆಚ್ಚಳಕ್ಕೆ ಮುಂದಾದ ಮೊದಲ ಕಂಪನಿ ಏರ್​ಟೆಲ್ ಆಗಿದ್ದು , ಇದಕ್ಕೆ ಉಳಿದ ಕಂಪನಿಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಾಗಿದ್ದು, ನಿರೀಕ್ಷಿತ ಬೆಂಬಲ ಸಿಗದೇ ಹೋದಲ್ಲಿ ಏರ್​ಟೆಲ್ ಮತ್ತೆ ಕನಿಷ್ಠ ರಿಚಾರ್ಜ್ ದರವಾದ 99 ರೂ. ಪ್ಲಾನ್​ ಅನ್ನು ಮರುಸ್ಥಾಪಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.