ಪುತ್ತೂರು ಹಿಂದೂ ಯುವತಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಸಿದ್ದತೆ | ಇದೊಂದು ಲವ್‌ಜಿಹಾದ್ ಎಂದ ಹಿಂದೂ ಸಂಘಟನೆ

ಪುತ್ತೂರು: ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಪುತ್ತೂರು ಮೂಲದ ಯುವತಿಯೊಬ್ಬಳನ್ನು ಮುಸ್ಲಿಂ ಯುವಕನೊಬ್ಬ ವಿವಾಹವಾಗುವುದಾಗಿ ಬೆಂಗಳೂರಿನ ವಿವಾಹ ನೋಂದಣಿ ಕಚೇರಿಯಲ್ಲಿ ಅಳವಡಿಸಿರುವ ಆಕ್ಷೇಪಣಾ ಸಲ್ಲಿಸಲು ಮಾಹಿತಿ ಇರುವ ನೋಟೀಸ್‌ವೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.

 

ಪುತ್ತೂರು ಮೂಲದವರಾಗಿದ್ದು ಇದೀಗ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಅಕ್ಷತಾ ಕೆ. ಅವರು ಬೆಂಗಳೂರಿನ ನ್ಯಾಪನಹಳ್ಳಿ ನಿವಾಸಿ ಶೇಖ್ ಮಹಮ್ಮದ್ ಸಲೀಮ್ ಅವರನ್ನು ವಿವಾಹ ಆಗುವುದಾಗಿ ಬೆಂಗಳೂರಿನ ವಿವಾಹ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಿವಾಹ ನೋಂದಣೆ ಕಚೇರಿಯಲ್ಲಿ ವಿವಾಹಕ್ಕೆ ಅವಕಾಶ ನೀಡುವ ಮೊದಲು ಯಾರಿಂದಲಾದರೂ ಆಕ್ಷೇಪಣೆ ಇದೆಯೇ ಎಂಬ ಕುರಿತು 30 ದಿನದ ನೋಟೀಸ್ ಅನ್ನು ಕಚೇರಿಯಲ್ಲಿ ಅಳವಡಿಸಿದ್ದರು. ಆ ನೋಟೀಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಹಿಂದೂ ಸಂಘಟನೆಗಳು ಇದೊಂದು ಲವ್‌ಜಿಹಾದ್ ಎಂದು ಆರೋಪಿಸಿದ್ದಾರೆ.

Leave A Reply

Your email address will not be published.