CBSE board exam 2023: ವಿದ್ಯಾರ್ಥಿಗಳಿಗಾಗಿ ಮಹತ್ವದ ಮಾಹಿತಿ
CBSE Board Exam 2023: ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ, ಪರೀಕ್ಷೆ ತಯಾರಿ ನಡೆಸಲು ಇಲ್ಲಿದೆ ಮಹತ್ವದ ಮಾಹಿತಿ:ಪರೀಕ್ಷೆಯ ದಿನಾಂಕ ಇನ್ನೂ ಪ್ರಕಟವಾಗದಿದ್ದರು ಕೂಡ ಪರೀಕ್ಷೆಗೆ ಸಿದ್ಧವಾಗುವಂತೆ ಈಗಾಗಲೇ, ಶಾಲೆಗಳಿಗೆ ಸೂಚನೆಯಲ್ಲಿ ತಿಳಿಸಲಾಗಿದೆ. ಸದ್ಯದಲ್ಲೇ ದಿನಾಂಕವೂ ಪ್ರಕಟವಾಗಲಿದ್ದು, 10 ಮತ್ತು 12 ನೇ ತರಗತಿಗಳಿಗೆ 2023 CBSE ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ ಮತ್ತು ಮಾರ್ಚ್ 2023ರಲ್ಲಿ ನಡೆಸಲಾಗುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಇತ್ತೀಚಿನ ಸುತ್ತೋಲೆಯ ಪ್ರಕಾರ ಮಂಡಳಿಯು ಶಾಲೆಗಳಿಗೆ (School) ಸೂಚನೆಗಳನ್ನು ನೀಡಿದ್ದು, ಫೆಬ್ರವರಿ 15 ರಿಂದ ಮೇ ವರೆಗಿನ CBSE ಬೋರ್ಡ್ ಪರೀಕ್ಷೆಗಳ (Exam) ನಡೆಸುವಿಕೆ ಮತ್ತು ಮೌಲ್ಯಮಾಪನಕ್ಕಾಗಿ ಸಮಯದ ಈ ಕುರಿತು ಇನ್ನಷ್ಟು ಮಾಹಿತಿ (Information) ನೀಡಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಬೋರ್ಡ್ ಪರೀಕ್ಷೆಗಳು 2023 ಅಂದರೆ ಮುಂದಿನ ವರ್ಷ ಫೆಬ್ರವರಿಯಿಂದ ಪ್ರಾರಂಭವಾಗಲಿದ್ದು, CBSEಬೋರ್ಡ್ ಪರೀಕ್ಷೆ 2023ರ 10 ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಗಳ ದಿನಾಂಕ ಪಟ್ಟಿ ಶೀಘ್ರದಲ್ಲೇ ತಿಳಿಯಲಿದೆ.
ಈಗಾಗಲೇ, CBSE ವಿವಿಧ ಅಂಗಸಂಸ್ಥೆ ಶಾಲೆಗಳಿಗೆ ಸೂಚನೆಯನ್ನು ಕಳುಹಿಸಿದ್ದು, CBSE ಬೋರ್ಡ್ ಪರೀಕ್ಷೆಗಳ ದಿನಾಂಕ CBSE ಬೋರ್ಡ್ ಪರೀಕ್ಷೆಗಳು 2023 ಅನ್ನು ಫೆಬ್ರವರಿ ಮತ್ತು ಮಾರ್ಚ್ 2023 ರಲ್ಲಿ ನಡೆಸಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಹಾಗಾಗಿ, ಆ ಸೂಚನೆಯಂತೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅದಾದ ನಂತರ ಮೌಲ್ಯಮಾಪನ ಹಾಗೂ ಫಲಿತಾಂಶ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ.ಪರೀಕ್ಷೆಗಳು ಅಥವಾ ಮೌಲ್ಯಮಾಪನ ಸಂಬಂಧಿತ ಚಟುವಟಿಕೆಗಳ ಅನುಷ್ಠಾನದ ಸಮಯದಲ್ಲಿ ಯಾವುದೇ ಅಡೆತಡೆಗಳನ್ನು ತಪ್ಪಿಸಲು ಶಾಲೆಗಳು 2023 ಫೆಬ್ರವರಿ 15 ರಿಂದ ಮೇ 1, 2023 ರವರೆಗೆ ಶಾಲಾ ಆವರಣದಲ್ಲಿ ಯಾವುದೇ ನಿರ್ಮಾಣ ಅಥವಾ ನವೀಕರಣ ಕಾರ್ಯವನ್ನು ನಡೆಸಬಾರದು ಎಂಬ ಕುರಿತಾಗಿ ಸುತ್ತೋಲೆ ಹೊರಡಿಸಿದೆ.
ಇದಲ್ಲದೆ, ಸಿಬಿಎಸ್‌ಇ ಹೇಳಿದ ಅವಧಿಯಲ್ಲಿ ಯಾವುದೇ ರಜೆಯನ್ನು ಮಂಜೂರು ಮಾಡಬೇಡಿ ಎಂದು ಶಾಲೆಗಳಿಗೆ ಸೂಚನೆಯನ್ನು ಸಹ ನೀಡಲಾಗಿದೆ. ಆರೋಗ್ಯದ ಸಮಸ್ಯೆ ಇದ್ದರೂ ಸಹ ಸರಿಯಾದ ವೈದ್ಯಕೀಯ ಕಾರಣಗಳೊಂದಿಗೆ ಸಮರ್ಥಿಸದ ಹೊರತು ರಜೆ ನೀಡುವಂತಿಲ್ಲ ಎಂದು ಹೇಳಲಾಗಿದೆ.ಈಗಾಗಲೇ ಹಂಚಿಕೊಂಡ ಮಾಹಿತಿಯ ಅನ್ವಯ ,CBSE 10, 12 ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಮತ್ತು ಮೇ 15, 2023 ರೊಳಗೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಲು ಯೋಜಿಸಿದೆ ಎಂದು ಅಂದಾಜಿಸಲಾಗಿದೆ.
ಟೈಮ್‌ಲೈನ್ ಮತ್ತು ವೇಳಾಪಟ್ಟಿಯನ್ನು ಅನುಸರಿಸಿ, 10 ನೇ ತರಗತಿಯ CBSE ಫಲಿತಾಂಶಗಳು 2023 ಎಂದು ನಿರೀಕ್ಷಿಸಲಾಗುತ್ತಿದ್ದು, ಮೇ 12 2023 ರ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಸಂಪೂರ್ಣ ದಿನಾಂಕ ಶೀಟ್‌ಗಾಗಿ, ಮಂಡಳಿಯು ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಸುತ್ತೋಲೆಯಲ್ಲಿ ಯಾವುದೇ ನಿಖರ ದಿನಾಂಕಗಳನ್ನು ಉಲ್ಲೇಖಿಸಲಾಗಿಲ್ಲ. ಆದರೆ, ನವೆಂಬರ್ ಅಂತ್ಯದೊಳಗೆ ತಿಳಿಸಲಾಗುತ್ತದೆ ಎಂದು ಅಂದಾಜಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳು ತಮ್ಮ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಬೇಕಾಗಿದ್ದು ಸದ್ಯದಲ್ಲೇ ವೇಳಾಪಟ್ಟಿ ಕೂಡ ಬಿಡುಗಡೆಯಾಗಲಿದೆ.