ಫೋನ್ ನಲ್ಲಿ ಮಾತಾಡಬೇಡ ಎಂದಿದ್ದೇ ತಡ, ಬ್ಲೇಡ್ ನಿಂದ ಕೊಯ್ದೇ ಬಿಟ್ಟಳು ನವವಧು ಗಂಡನ ಮರ್ಮಾಂಗ !

ಗಂಡ‌ ಹೆಂಡತಿಯ ಮಧ್ಯೆ ಜಗಳವಾಗುವುದು ಸಾಮಾನ್ಯ ಎಂದು ಹಲವು ಜನ ಹೇಳುತ್ತಾರೆ. ಕೆಲವೊಮ್ಮೆ ಅದು ಕ್ಷುಲ್ಲಕ ಕಾರಣಕ್ಕಾಗಿ ಇರಬಹುದು ಅಥವಾ ತುಂಬಾ ಸೀರಿಯಸ್ ಆಗಿಯೂ ಇರಬಹುದು. ಆದರೆ ಇಲ್ಲೊಬ್ಬಳು ಹೆಂಡತಿ ಗಂಡ ನೀನು ಫೋನಲ್ಲಿ ಮಾತಾಡಬೇಡ ಎಂದು ಹೇಳಿದ್ದಕ್ಕೆ ಆತನ ಮರ್ಮಾಂಗವನ್ನೇ ಕಟ್ ಮಾಡಿದ್ದಾಳೆ.

 

ಹೌದು, ಕ್ಷುಲ್ಲಕ ಜಗಳಕ್ಕಾಗಿ ಮಹಿಳೆಯೊಬ್ಬಳು ಗಂಡ ಮಲಗಿದ್ದಾಗ ಆತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ ಘಟನೆ ರಾಜಸ್ಥಾನದ ಬರ್ಮ‌್ರನಲ್ಲಿ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಫೋನ್‌ನಲ್ಲಿ ಮಾತನಾಡಬೇಡ ಎಂದು ಗಂಡ ಹೇಳಿದ ಕಾರಣಕ್ಕಾಗಿ ಸಿಟ್ಟಾಗಿದ್ದ ಹೆಂಡತಿ, ರಾತ್ರಿ ಗಂಡ ಮಲಗಿದ್ದ ವೇಳೆ ಆತನ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಧೋರಿಮನ್ನ ಪೊಲೀಸ್ ಠಾಣೆ ವ್ಯಾಪ್ತಿಯ ಬಲಿಸ‌ ಗ್ರಾಮದಲ್ಲಿ ನಡೆದಿದೆ.

ತಾನು ಮಲಗಿದ್ದ ವೇಳೆ ಪತ್ನಿ ಫೋನ್‌ನಲ್ಲಿ ಯಾರದೋ ಜೊತೆ ಮಾತನಾಡುತ್ತಿದ್ದು, ಇದರಿಂದ ನನ್ನ ನಿದ್ರೆಗೆ ಭಂಗ ಆಗುತ್ತಿತ್ತು. ಪೋನ್ ಕಟ್ ಮಾಡುವಂತೆ ನಾನು ಹೇಳುತ್ತಿದ್ದೆ. ಈ ವಿಚಾರವಾಗಿಯೇ ನಮ್ಮ ನಡುವೆ ಗಲಾಟೆ ನಡೆದಿತ್ತು ಎಂದು ಗಂಡ ಹೇಳಿದ್ದಾನೆ. ಆದರೆ ಗಂಡನ ಈ ಮಾತಿನಿಂದ ಕುಪಿತಗೊಂಡ ಹೆಂಡತಿ ಮಾತಿನಿಂದ ಸಿಟ್ಟಾಗಿದ್ದ ಹೆಂಡತಿ, ಆತ ಮಲಗಿದ್ದ ವೇಳೆ ಬ್ಲೇಡ್‌ನಿಂದ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ಈ ವೇಳೆ ಆತ ನೋವಿನಿಂದ ಚೀರಾಟ ಮಾಡುತ್ತಿದ್ದಾಗ ಕುಟುಂಬದವರು ಸ್ಥಳಕ್ಕೆ ಆಗಮಿಸಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಕೇವಲ ಆರು ತಿಂಗಳ ಹಿಂದೆ ಇವರಿಬ್ಬರ ವಿವಾಹವಾಗಿತ್ತು. ವಿವಾಹವಾದ ದಿನದಿಂದಲೂ ಇವರಿಬ್ಬರ ಸಂಸಾರದಲ್ಲಿ ಸಮಸ್ಯೆಗಳೇ ಕಾಣಿಸಿಕೊಂಡಿದ್ದವು.

ಇಷ್ಟು ಮಾತ್ರವಲ್ಲದೇ ಕೆಲ ತಿಂಗಳ ಹಿಂದೆ ಪತಿಯ ವಿರುದ್ಧವೇ ಆಕೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿ, ಕೇಸು ಹಾಕಿದ್ದಳು. ಈ ಘಟನೆ ಕುರಿತು ಮಾತನಾಡಿರುವ ಬಾರ್ಮರ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನರ್ಪತ್‌ಸಿಂಗ್ ಜೈತಾವತ್, ಯಾವುದೇ ಕ್ರಮ ಕೈಗೊಳ್ಳುವ ಮೊದಲು ನಾವು ಪತಿಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಎರಡೂ ಕಡೆಯಿಂದ ತನಿಖೆ ನಡೆಸಲಾಗುತ್ತಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 1 ರಂದು ಈ ಘಟನೆ ನಡೆದಿತ್ತು. ಇಲ್ಲಿಯವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ, ಚೇತರಿಸಿಕೊಂಡ ಕಾರಣ ಮಂಗಳವಾರ ಪತ್ನಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. 21 ವರ್ಷದ ಗೋಮರಮ್ ಬಲಿಸಾರ್‌ನ ನಿವಾಸಿಯಾಗಿದ್ದು, 19 ವರ್ಷದ ಕನ್ನು ದೇವಿಯನ್ನು ವಿವಾಹವಾಗಿದ್ದ. ಆಕೆ ಸನವಾದಾ ಬಾರ್ಮ‌್ರನ ಗ್ರಾಮದವಳು. ಗೋಮರಮ್ ವೃತ್ತಿಯಲ್ಲಿ ರೈತನಾಗಿದ್ದ. ಗದ್ದೆಯಲ್ಲಿನ ಶೆಡ್‌ನಲ್ಲಿ ಮಲಗಿದ್ದ ವೇಳೆ, ಬ್ಲೇಡ್‌ನಿಂದ ಆತನ ಮರ್ಮಾಂಗವನ್ನು ಪತ್ನಿ ಕತ್ತರಿಸಿದ್ದಾಳೆ.

ಪತ್ನಿ ಕುನ್ನು ದೇವಿಗೆ ಈ ಮದುವೆ ಇಷ್ಟವಿಲ್ಲದೇ ಇರುವುದೇ ಈ ಕೃತ್ಯ ಮಾಡಲು ಪ್ರೇರಣೆ ಆಗಿದೆ ಎನ್ನಬಹುದು. ಆಕೆಗೆ ಡೈವೋರ್ಸ್ ಪಡೆಯುವ ಬಯಕೆ ಇತ್ತು. ಆದರೆ, ಆಕೆಯ ಮನೆಯವರು ನಿನ್ನ ಗಂಡ, ನಂಪುಸಕನಾಗಿದ್ದರೆ ಮಾತ್ರವೇ ಡೈವೋರ್ಸ್ ಪಡೆಯಬಹುದು ಎಂದಿದ್ದರು. ಅದಕ್ಕಾಗಿ ಆಕೆ ಗಂಡ ಮರ್ಮಾಂಗವನ್ನೇ ಕತ್ತರಿಸುವ ಪ್ಲ್ಯಾನ್ ಮಾಡಿದ್ದರು. ಆತ ನಪುಂಸಕನಾದಲ್ಲಿ ಸುಲಭವಾಗಿ ಡೈವೋರ್ಸ್ ಪಡೆಯಬಹುದು ಎನ್ನುವು ಗುರಿ ಆಕೆಯದ್ದಾಗಿತ್ತು. ಆದರೆ ಮುಂದೆ ಈ ಪ್ರಕರಣ ಏನಾಗಬಹುದು ಎಂದು ಕೋರ್ಟ್ ನಿರ್ಧಾರ ಮಾಡುತ್ತೆ ಎನ್ನಬಹುದು.

Leave A Reply

Your email address will not be published.