ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ
ಜನರಿಗೆ ಅನುಕೂಲ ಆಗುವಂತೆ ಸರ್ಕಾರವು ಸೇವಾ ವಿತರಣಾ ನಿರ್ದೇಶನಾಲಯ ರೂಪಿಸುವ ಅನುಗುಣವಾಗಿ, ರಾಜ್ಯ ಸರ್ಕಾರದ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಜಿಲ್ಲೆಯಲ್ಲಿ ಗ್ರಾಮಒನ್ ಕೇಂದ್ರಗಳಿಗೆ ಫ್ರಾಂಚೈಸಿಗಳನ್ನು ಆಯ್ಕೆ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮುಖ್ಯವಾಗಿ ಅರ್ಜಿ ಸಲ್ಲಿಸಲು ಪಿ.ಯು.ಸಿ., ಐ.ಟಿ.ಐ, ಡಿಪ್ಲೊಮಾ, ಪದವಿ, ಸ್ನಾತ್ತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನವುಳ್ಳ ಆಸಕ್ತರು ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಕನಿಷ್ಟ 100 ಚದರ ಅಡಿ ವಿಸ್ತೀರ್ಣವುಳ್ಳ ಸುಸಜ್ಜಿತ ಕಟ್ಟದೊಂದಿಗೆ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನ್ನರ್, ಬಯೋಮೆಟ್ರಿಕ್ ಡಿವೈಸ್, ಮತ್ತು 8 ಗಂಟೆಗಳ ವಿದ್ಯುತ್ ಪರ್ಯಾಯ ವ್ಯವಸ್ಥೆಯೊಂದಿಗೆ ಇಲಾಖೆ ಕಾಲಕಾಲಕ್ಕೆ ಸೂಚಿಸುವ ಮಾನದಂಡಗಳಿಗೆ ಬದ್ಧರಾಗಿರುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.
ರಾಜ್ಯ ಸರ್ಕಾರದ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಜಿಲ್ಲೆಯಲ್ಲಿ ಗ್ರಾಮಒನ್ ಕೇಂದ್ರಗಳಿಗೆ ಫ್ರಾಂಚೈಸಿ ನೀಡಲಾದ ಜಿಲ್ಲೆಗಳು :
- ಧಾರವಾಡ ತಾಲೂಕಿನ ಹೆಬ್ಬಳ್ಳಿ (1),
- ಕನಕೂರ (1),
- ಮುಮ್ಮಿಗಟ್ಟಿ (1) ಮತ್ತು
- ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ (2),
- ಬಂಡಿವಾಡ (1) ಮತ್ತು
- ಕಲಘಟಗಿ ತಾಲೂಕಿನ ಬೇಗೂರ (1),
- ತಂಬೂರ (1),
- ನವಲಗುಂದ ತಾಲೂಕಿನ ಬೆಳವಟಗಿ (1) ಮತ್ತು
- ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ (1) ಇಷ್ಟು ಫ್ರಾಂಚೈಸಿಗಳನ್ನು ಆರಂಭಿಸಲು ಯೋಜನೆ ಮಾಡಲಾಗಿದೆ.
ಅರ್ಜಿದಾರರು ನವೆಂಬರ್ 24, 2022 ರ ಮೊದಲು ಗ್ರಾಮ್ಒನ್ ಕೇಂದ್ರಗಳಿಗೆ ಫ್ರಾಂಚೈಸಿಗಳನ್ನು ಆರಂಭಿಸಲು ಆನ್ಲೈನ್ ಮೂಲಕ https://www.karnatakaone.gov.in/Public/GramOneFranchiseeTerms ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 24, 2022 ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಂಚೈಸಿ ಆಯ್ಕೆಗಾಗಿ ನಿಗದಿಪಡಿಸಿದ ಅಂಕಗಳು, ಮಾನದಂಡ ಹಾಗೂ ಆಹ್ವಾನಿಸಲಾದ ಕೇಂದ್ರಗಳ ವಿವರಗಳಿಗಾಗಿ ಹೆಲ್ಪ್ಡೆಸ್ಕ್ ಮೊಬೈಲ್ ಸಂಖ್ಯೆ 9019026687, 9019026697, 9019026690, 9019027696 ಗಳಿಗೆ ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಈ ಮೇಲಿನ ನಿಯಮ ಅನುಸಾರ ಅರ್ಜಿ ಸಲ್ಲಿಸಿ ಗ್ರಾಮ್ಒನ್ ಕೇಂದ್ರದ ಫ್ರಾಂಚೈಸಿ ಪಡೆದುಕೊಳ್ಳಬಹುದಾಗಿದೆ.