ಗ್ಯಾಸ್ಟ್ರಿಕ್ ಸಮಸ್ಯೆ ಇರೋರು ಎಳನೀರು ಕುಡಿದರೆ ಬೆಸ್ಟ್!
ಆಧುನಿಕ ಜಗತ್ತಿನಲ್ಲಿ ತಂತ್ರಜ್ಞನದಿಂದ ಸಂಶೋಧನೆ ಮಾಡಬಹುದು ಆದರೆ ನೈಸರ್ಗಿಕ ಆರೋಗ್ಯವನ್ನು ವೃದ್ಧಿಸಲು ಸಾಧ್ಯವಿಲ್ಲ. ಇತ್ತೀಚಿನ ಆಹಾರಗಳಲ್ಲಿ ಕಲಬೆರಕೆಗಳೇ ತುಂಬಿರುವುದು ನಮಗೆ ಗೊತ್ತಿರುವ ವಿಚಾರ. ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ.
ಸಾಮಾನ್ಯವಾಗಿ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಅದಕ್ಕಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿದಿನ ಈ ಔಷಧಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರ ಅಭಿಪ್ರಾಯ.
ಹಾಗಂತ ಔಷಧ ತೆಗೆದುಕೊಳ್ಳದೆ ಹೋದರೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ಇದರಿಂದ ಹೃದಯಕ್ಕೆ ಕೂಡ ತೊಂದರೆ ಉಂಟಾಗಬಹುದು.
ನಮ್ಮ ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಗೆ ರಾಮಬಾಣವಾಗಿ ಎಳನೀರು ಕೆಲಸ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೌದು ನೈಸರ್ಗಿಕ ವಿಧಾನದಲ್ಲಿ ಅಸಿಡಿಟಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕು ಎಂದರೆ ಅದಕ್ಕೆ ಎಳನೀರು ಒಂದು ಒಳ್ಳೆಯ ಮನೆಮದ್ದು ಆಗಿದೆ.
ಆಹಾರ ತಜ್ಞರಾದ ನೇಹಾ ಚಂದನ ಪ್ರಕಾರ ಎರಡರಿಂದ ಮೂರು ತಿಂಗಳು ಎಳನೀರು ಸೇವನೆಯನ್ನು ಮುಂದುವರಿಸುವುದರಿಂದ ಮತ್ತು ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಆಹಾರ ಸೇವನೆ ಮಾಡುವುದರಿಂದ ನಿಮ್ಮ ಹೊಟ್ಟೆಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಅವು ಸುಲಭವಾಗಿ ಪರಿಹಾರ ಕಾಣುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ನಿಮ್ಮ ದೇಹದ ಪಿಎಚ್ ಯಾವಾಗ ಅಸಿಡಿಕ್ ನಿಂದ ಆಲ್ಕಲೈನ್ ಆಗಿ ಬದಲಾಗುತ್ತದೆ ಆಗ ನಿಮಗೆ ಗ್ಯಾಸ್ಟ್ರಿಕ್ ಕಡಿಮೆಯಾಗಿದೆ ಎಂದರ್ಥ. ಹಾಗಾಗಿ ಈ ಸಮಯದಲ್ಲಿ ಎಳನೀರು ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಹೊಟ್ಟೆಯಲ್ಲಿ ಮ್ಯೂಕಸ್ ಉತ್ಪತ್ತಿ ಹೆಚ್ಚಾಗುತ್ತದೆ.
ಇದರಿಂದ ಆಮ್ಲದ ಹೆಚ್ಚುವರಿ ಉತ್ಪತ್ತಿಯ ಪ್ರಭಾವ ಕಡಿಮೆಯಾಗುತ್ತದೆ.
• ನಾರಿನ ಅಂಶ ಹೆಚ್ಚಾಗಿರುವ ಎಳನೀರು ದೇಹದ ಜೀರ್ಣಶಕ್ತಿ ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತದೆ
• ಎದೆಯುರಿ ಮತ್ತು ಹೊಟ್ಟೆ ಉರಿ ಸಮಸ್ಯೆಗೂ ಕೂಡ ಇದು ಪರಿಹಾರದಾಯಕ.
• ಅಸಿಡಿಟಿ ಸಮಸ್ಯೆಯಿಂದ ಮುಕ್ತವಾಗಲು ನೀವು ಊಟ ಆದ ಅರ್ಧ ಗಂಟೆ ನಂತರದಲ್ಲಿ ಎಳನೀರು ಕುಡಿಯುವುದು ಒಳ್ಳೆಯದು.
• ಅದಲ್ಲದೆ ಗ್ಯಾಸ್ಟ್ರಿಕ್ ಆಸಿಡಿಟಿ ಯಿಂದ ಆಗುವ ತಲೆನೋವನ್ನು ಕೂಡಲೇ ಕಮ್ಮಿ ಮಾಡುತ್ತದೆ.
• ಎಳನೀರನ್ನು ಕುಡಿಯುವುದರಿಂದ ಹೊಟ್ಟೆ ಹುಣ್ಣು ಮತ್ತು ಇನ್ನಿತರ ಮುಂದೆ ಬರಬಹುದಾದ ಆರೋಗ್ಯ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಬಹುದಾಗಿದೆ.
ಒಟ್ಟಿನಲ್ಲಿ ಎಳನೀರನ್ನು ಯಾರು ಬೇಕಾದರೂ ಕುಡಿಯಬಹುದು. ಅದರಿಂದ ಅತ್ಯುತ್ತಮ ಆರೋಗ್ಯ ಪ್ರಯೋಜ ನಗಳನ್ನು ಪಡೆದುಕೊಳ್ಳಬಹುದು. ನಿಮಗೆ ಯಾವುದೇ ಸಂದರ್ಭದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ತೊಂದರೆ ಉಂಟಾಗಿದ್ದರೆ ಮೊದಲು ಎಳನೀರು ಕುಡಿಯುವುದು ಉತ್ತಮ.