Big Visa Scheme For Indians: ಸುನಕ್ ಮೋದಿ ಭೇಟಿಯ ಬೆನ್ನಲ್ಲೇ ಭಾರತೀಯರಿಗೆ ಸಿಹಿ ಸುದ್ದಿ |  ವಾರ್ಷಿಕ 3000 ಭಾರತೀಯ ವೀಸಾಕ್ಕೆ ಬ್ರಿಟನ್ ಒಪ್ಪಿಗೆ!

Share the Article

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾರತದಿಂದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಚಾಲನೆ ನೀಡಿ ಖುಷಿ ಸುದ್ದಿ ನೀಡಿದ್ದಾರೆ. ಜಿ20 ಶೃಂಗಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ. 17ನೇ ಆವೃತ್ತಿಯ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಡೌನಿಂಗ್ ಸ್ಟ್ರೀಟ್ ರೀಡೌಟ್‍ನಲ್ಲಿ ಈ ಪ್ರಕಟಣೆ ಹೊರಬಿದ್ದಿದೆ.

18-30 ವರ್ಷ ವಯಸ್ಸಿನ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಯುಕೆಗೆ ಬರಲು ಮತ್ತು ಎರಡು ವರ್ಷಗಳವರೆಗೆ ಕೆಲಸ ಮಾಡಲು 3,000 ವೀಸಾಗಳನ್ನು ನೀಡುತ್ತದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

Leave A Reply