ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ತಯಾರಿಸಲು ಅನುಮತಿ, ಮತ್ತೆ ಮಾತೆಯರ ಮನ ಗೆಲ್ಲುತ್ತಾ ಪೌಡರ್ ?

ಮುಂಬೈ: ಒಂದು ಕಾಲದಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಹೆಸರು ಕೇಳದ ಜನ ಮತ್ತು ಮೈಮೇಲೆ ಆ ಕಂಪನಿಯ ಪೌಡ ಹಾಕಿಸಿಕೊಳ್ಳದೆ ಮಲಗಿದ ಮಗು ಇದ್ದಿರಾಲಾರದು. ಅಂತಹಾ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಬೇಬಿ ತಲ್ಕಮ್ ಪೌಡರ್ ಉತ್ಪಾದನೆ ರದ್ದಾಗಿತ್ತು.
ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಜಾನ್ಸನ್ ಬೇಬಿ ಪೌಡರ್ ಉತ್ಪಾದನಾ ಲೈಸೆನ್ಸ್ ಅನ್ನು ಮಹಾರಾಷ್ಟ್ರ ಲೋಕಲ್ ಎಫ್‌ಡಿಎ ರದ್ದುಗೊಳಿಸಿತ್ತು.

 

ಇದೀಗ ಮಹಾರಾಷ್ಟ್ರ ಸರ್ಕಾರದ ಆದೇಶದಂತೆ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ತಯಾರಿಸಲು ಅನುಮತಿ ನೀಡಿದೆ. ಬೇಬಿ ಪೌಡರ್ ಗಳನ್ನು ತಯಾರು ಮಾಡಬಹುದು, ಆದರೆ ಮಾರಾಟ ಮಾಡುವಂತಿಲ್ಲ ಎನ್ನುವ ಸೂಚನೆ ಮಹಾರಾಷ್ಟ್ರದ ಆಹಾರ ಮತ್ತು ಡ್ರಗ್ ಕಂಟ್ರೋಲರ್ ಹೇಳಿದೆ.

ಮಾರಾಟ ಮಾಡುವಂತಿಲ್ಲ ಅಂದರೆ ಉತ್ಪತ್ತಿ ಮಾಡುವುದು ಯಾಕೆ ? ಎನ್ನುವ ಪ್ರಶ್ನೆ ಬರೋದು ಸಹಜ. ಇದೀಗ ಕಂಪನಿಗೆ ಬೇಬಿ ಪೌಡರ್ ಗಳನ್ನು ತಯಾರಿಸಲು ಅನುಮತಿ ನೀಡಿದ್ದು, ಹಾಗೆ ಉತ್ಪನ್ನಗೊಂಡ ವಸ್ತುಗಳನ್ನು ನಂತರ ಪರೀಕ್ಷಿಸಲಾಗುತ್ತದೆ. ಆ ಉತ್ಪನ್ನಗಳು ಸಿಜಿಎಂಪಿ ಮಾದರಿಯಲ್ಲಿ ತಯಾರಾದೂ ಖಚಿತವಾದರೆ ಮತ್ತು ಗುಣಮಟ್ಟದ ಪರೀಕ್ಷೆಯಲ್ಲಿ ಉತ್ಪನ್ನವು ತೇರ್ಗಡೆ ಹೊಂದಿದರೆ ಆಗ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಮತ್ತೆ ಮಾರುಕಟ್ಟೆಗೆ ಬರಲಿದೆ.

ಈಗ ತಯಾರಾಗುವ ಮಾದರಿಗಳನ್ನು ಹೊಸದಾಗಿ ಪರೀಕ್ಷಿಸಲು ಬಾಂಬೆ ಹೈಕೋರ್ಟ್ ಇಂದು ಆದೇಶಿಸಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪನ್ನವನ್ನು ತಯಾರಿಸಬಹುದು, ಆದರೆ, ಮಾರಾಟ ಮಾಡುವಂತಿಲ್ಲ ಎಂದು ಕಂಪನಿಗೆ ಅನುಮತಿ ನೀಡಿದೆ. ಮತ್ತೆ ಮಾರುಕಟ್ಟೆ ಪ್ರವೇಶಿಸಿದ ನಂತರ ಇನ್ನೊಂದು ಬಾರಿ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ ಮತ್ತೆ ಗ್ರಹಿಣಿಯರ ಮನ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.