Shocking News : 3 ತಿಂಗಳು ವಿದ್ಯುತ್ ಬಿಲ್ ಪಾವತಿಸಿಲ್ಲವೆಂದರೆ ನಿಮ್ಮ ಲೈಸೆನ್ಸ್ ರದ್ದು!

ಬೆಸ್ಕಾಂ(BESCOM) ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದು ನೀಡಿದೆ. ಅದೇನೆಂದರೆ, ರಾಜಧಾನಿ ಜನತೆಗೆ ಬಿಗ್ ಶಾಕ್ ಕೊಡಲು ಬೆಸ್ಕಾಂ ಮುಂದಾಗಿದೆ. ಯಾರೇ ಗ್ರಾಹಕರು ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡಿದರೆ ಅವರಿಗೆ ಈ ಸುದ್ದಿ ನಿಜಕ್ಕೂ ಆಘಾತ ತರಬಹುದು.

 

ಅದೇನೆಂದರೆ, ಕೆಲವು ಗ್ರಾಹಕರು 2 ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ವಿದ್ಯುತ್ ಬಿಲ್(Electricity Bill) ಕಟ್ಟುವ ಪದ್ಧತಿಯನ್ನು ರೂಢಿ ಮಾಡಿಕೊಂಡಿರುತ್ತಾರೆ. ಅಥವಾ ಕಾರಣಾಂತರಗಳಿಂದ ಕೆಲ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿರಲ್ಲ. ಈ ವೇಳೆ ಬೆಸ್ಕಾಂ ಅಧಿಕಾರಿಗಳು ಕರೆಂಟ್ ಪ್ಯೂಸ್ ತೆಗೆದು ಹೋಗುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯ, ವಿದ್ಯುತ್ ಬಾಕಿ ಬಿಲ್ ಸಂಗ್ರಹಕ್ಕೆ ಗ್ರಾಹಕರ ಮೇಲೆ ಬೆಸ್ಕಾಂ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈ ಬಾರಿ ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ವಿದ್ಯುತ್ ಸಂಪರ್ಕದ ಲೈಸೆನ್ಸ್ ರದ್ದು ಮಾಡಲು ಬೆಸ್ಕಾಂ ಮುಂದಾಗಿದೆ.

ಹಾಗಾಗಿ, ಇನ್ನು ಮುಂದೆ 3 ತಿಂಗಳು ವಿದ್ಯುತ್ ಬಿಲ್ ಬಾಕಿ ಇಟ್ಟರೆ, ಸಿಬ್ಬಂದಿ ಬಂದು ಕರೆಂಟ್ ಪ್ಯೂಸ್ ತೆಗೆಯಲ್ಲ ಬದಲಾಗಿ ನಿಮ್ಮ ಮನೆಯ ವಿದ್ಯುತ್ ಸಂಪರ್ಕದ ಲೈಸೆನ್ಸ್ ನನ್ನೇ ರದ್ದು ಮಾಡ್ತಾರೆ. ಇನ್ಮೇಲೆ 3 ತಿಂಗಳು ವಿದ್ಯುತ್ ಬಿಲ್ ಬಾಕಿ ಇಟ್ಟರೆ ವಿದ್ಯುತ್ ಸಂಪರ್ಕದ ಒಪ್ಪಂದವೇ ರದ್ದಾಗಲಿದೆ. ವಿದ್ಯುತ್ ಸಂಪರ್ಕ ಬೇಕಾದರೆ, ಮತ್ತೆ, ಪುನಃ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಂಡು ಹಾಕಬೇಕು. ಬೆಸ್ಕಾಂನ ಹೊಸ ಯೋಜನೆಯಿಂದ ಹೊರ ದೇಶಗಳಿಗೆ ಪ್ರಯಾಣ ಬೆಳೆಸುವವರು, ಬಾಕಿ ಬಿಲ್ ಉಳಿಸಿಕೊಂಡವರಿಗೆ ಆತಂಕ ಶುರುವಾಗಿದೆ.

ತಿಂಗಳಿಗೆ ಸರಿಯಾಗಿ ಬಿಲ್ ಪಾವತಿಸದೆ ನಿರ್ಲಕ್ಷ್ಯ
ತೋರುವರರ ವಿರುದ್ಧ ಬೆಸ್ಕಾಂ ಈ ನಿರ್ಧಾರ ನಿಜಕ್ಕೂ ಆತಂಕ ಮೂಡಿದೆ ಎಂದು ಹೇಳಬಹುದು. ಬೆಸ್ಕಾಂ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೂತನ ಪ್ರಯೋಗ ಮಾಡುತ್ತಿದೆ. ಈ ಬಗ್ಗೆ ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಟ್ವಿಟ್ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.