ಚಿತ್ರನಟಿಯೋರ್ವಳಿಗೆ ಚಾಲಕನಿಂದ ಲೈಂಗಿಕ ಕಿರುಕುಳ | ಎದೆ ಮುಟ್ಟಿ ವಿಕೃತಿ ಮೆರೆದ ಕಿರಾತಕ!

ಚಿತ್ರನಟಿಗೆ ಚಾಲಕನೋರ್ವ ಲೈಂಗಿಕ ಕಿರುಕುಳವನ್ನು ನೀಡಿದ್ದು, ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ Rapido ಕಂಪನಿ ಮತ್ತು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ಚಾಲಕನ ಮೇಲೆ ಎಫ್ ಐಆರ್ ಕೂಡ ದಾಖಲಾಗಿದೆ.

 

ಲೈಂಗಿಕ ಕಿರುಕುಳಕ್ಕೆ ಒಳಗಾದ ನಟಿ ಬೆಂಗಳೂರಿನ ಕೆಆರ್ ಪುರಂ ಹೂಡಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದು, ಜಕ್ಕೂರಿನಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ದಿನಾಂಕ 30/10/2022 ರಂದು ರಾತ್ರಿ 10.30ಕ್ಕೆ ಹೆಣ್ಣೂರು ಸರ್ವಿಸ್ ರಸ್ತೆಯ ಗಣೇಶ ದೇವಸ್ಥಾನದ ಹತ್ತಿರದ ಬಿಬಿಎಂಪಿ ಸಾರ್ವಜನಿಕ ಶೌಚಾಲಯದ ಮುಂದೆ ನಿಂತುಕೊಂಡು ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಹೋಗಲು rapido ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ.

ಕೆಎ 51 ಹೆಚ್ 5965 ಸಂಖ್ಯೆಯ ಬೈಕ್ ಬುಕ್ ಆಗಿದ್ದು, ಮಂಜುನಾಥ್ ತಿಪ್ಪೇಸ್ವಾಮಿ ಎಂಬ ಚಾಲಕ ಬಂದು ನಟಿಯನ್ನು ಪಿಕ್ ಮಾಡಿದ್ದಾನೆ. ನಂತರ ಬೈಕ್ ಚಾಲಕ ಮಾರ್ಗ ಮಧ್ಯೆ ತನ್ನ ಕರಾಳ ಮುಖವನ್ನು ತೋರಿಸಿದ್ದಾನೆ. ನಟಿಯ ಎದೆಯ ಹತ್ತಿರ ಮತ್ತು ತೊಡೆ ಸಮೀಪ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.

ವಿಕೃತಿ ಮೆರೆದ ಬೈಕ್‌ ಚಾಲಕ ಮಂಜುನಾಥ್ ತಿಪ್ಪೇಸ್ವಾಮಿ ಮತ್ತು Rapido ಟ್ಯಾಕ್ಸಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವ ಕಾರಣ ಪೊಲೀಸರು ಇನ್ನು ಯಾವುದೇ ಮಾಹಿತಿಯನ್ನು ನೀಡಿಲ್ಲ.

Leave A Reply

Your email address will not be published.