ಯಾವ ಸಮಯದಲ್ಲಿ ನೀವು ಜಿಮ್​ ವರ್ಕ್​ ಔಟ್​ ಮಾಡಲೇಬಾರದು?

ಜಿಮ್ ವರ್ಕೌಟ್ ಗಳನ್ನು ಯಾವಾಗ ಮಾಡಬಾರದು ಎಂಬ ಅಂಶಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ ಎಂದು ಹೇಳಬಹುದು. ಜಿಮ್ ವರ್ಕ್ಔಟ್ ಗಳು ತೀವ್ರವಾದ ದೈಹಿಕ ಚಟುವಟಿಕೆಗಳಾಗಿದ್ದು, ಅವುಗಳನ್ನು ಮಾಡುವಾಗ ಕೆಲವು ವಿಷಯಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು.

 

ಜ್ವರ ಬಂದಾಗ ವ್ಯಾಯಾಮ ಮಾಡಲೇಬೇಡಿ: ನಿಮಗೆ ಜ್ವರವಿದ್ದಾಗ ಜಿಮ್ ಗೆ ಹೋಗಿ ವರ್ಕ್ಔಟ್ ಮಾಡುವುದು ದೇಹವನ್ನು ಹೆಚ್ಚು ಇನ್ನಷ್ಟು ಹೆಚ್ಚು ನಿರ್ಜಲೀಕರಣಗೊಳಿಸುತ್ತದೆ. ದೇಹದಲ್ಲಿ ನೀರು ಕಡಿಮೆ ಆಗುವುದರಿಂದ ಜ್ವರವು ಇನ್ನಷ್ಟು ಹೆಚ್ಚಾಗಬಹುದು.
ಕೆಮ್ಮು ಇದ್ದಾಗಲೂ ಸಹ ವ್ಯಾಯಾಮ ಮಾಡಬೇಡಿ:  ಕೆಮ್ಮು ಒಬ್ಬರಿಂದ ಇನ್ನೊಬ್ಬರಿಗೆ ರೋಗಕಾರಕಗಳನ್ನು ಹರಡುತ್ತದೆ, ಆದ್ದರಿಂದ ಜಿಮ್ ನಲ್ಲಿರುವ ಇತರರನ್ನು ಸಹ ನಿಮ್ಮ ಕೆಮ್ಮು ಅಪಾಯಕ್ಕೆ ಸಿಲುಕಿಸಬಹುದು. ನಿರಂತರ ಕೆಮ್ಮು ನಿಮಗೆ ಅನಾನುಕೂಲವನ್ನುಂಟು ಮಾಡುತ್ತದೆ ಮತ್ತು ಕೆಲವು ವ್ಯಾಯಾಮಗಳನ್ನು ಮಾಡುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವಾಗ ವ್ಯಾಯಾಮ ಮಾಡಬೇಡಿ: ವಾಕರಿಕೆ, ವಾಂತಿ ಮತ್ತು ಅತಿಸಾರ ರೋಗಿಗಳು ಜಿಮ್ ಗೆ ಹೋಗಬಾರದು. ಹೊಟ್ಟೆಯ ದೋಷಗಳು ದೇಹವನ್ನು ದುರ್ಬಲಗೊಳಿಸುತ್ತವೆ. ಈ ಸಮಯದಲ್ಲಿ ಕಠಿಣವಾದ ವ್ಯಾಯಾಮಗಳನ್ನು ಮಾಡುವುದರಿಂದ ದೇಹವು ಇನ್ನಷ್ಟು ನಿರ್ಜಲೀಕರಣಗೊಳ್ಳುತ್ತದೆ ಮತ್ತು ಆದ್ದರಿಂದ ತೊಡಕುಗಳು ಉಲ್ಬಣಗೊಳ್ಳುತ್ತವೆ.

ಹೆಣ್ಣು ಮಕ್ಕಳು ತಮ್ಮ ಮುಟ್ಟಿನ ಸಂದರ್ಭದಲ್ಲಿ ವ್ಯಾಯಾಮಗಳನ್ನು ಮಾಡಬೇಡಿ. ಆ ಸಮಯದಲ್ಲಿ ದೇಹವು ತುಂಬಾ ಆಯಾಸದಲ್ಲಿರುತ್ತದೆ. ಅಂಗಾಂಗಗಳಿಗೆ ರೆಸ್ಟ್​ ಬೇಕಿರುತ್ತದೆ. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ  ವ್ಯಾಯಾಮಗಳನ್ನು ಮಾಡಬೇಡಿ. ಇದರ ಪರಿಣಾಮ ಆಗ ಗೊತ್ತಾಗಿಲ್ಲವೆಂದರೂ ಮುಂದಿನ ದಿನಗಳಲ್ಲಿ ತಿಳಿಯುತ್ತದೆ.

Leave A Reply

Your email address will not be published.