ಧ್ರುವ ಸರ್ಜಾ ಮುಂದಿನ ಚಿತ್ರ ಯಾವ್ದು? ಇದಕ್ಕೆ ಹೀರೋಯಿನ್ ಯಾರು ಗೊತ್ತಾ?

ಧ್ರುವ ಸರ್ಜಾ  ಕಡಿಮೆ ಸಿನಿಮಾಗಳನ್ನು ಮಾಡಿದ್ರು ಕೂಡಾ ಹಿಟ್ ಗಳ ಸಿನಿಮಾವನ್ನೇ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಅಂತಾನೆ ಫೇಮಸ್ ಆಗಿರೋ ಧ್ರುವ ಸರ್ಜಾ ಇದೀಗ ಹೊಸ ಸಿನಿಮಾದತ್ತ ಕಾಲಿಡ್ತ ಇದ್ದಾರೆ.

 

ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ‘ಕೆಡಿ’ ಸಿನಿಮಾ ಇನ್ನಷ್ಟೇ ಶುರುವಾಗಬೇಕಿದೆ. ಸಿಂಪಲ್ ಆಗಿ ಮುಹೂರ್ತ ಮಾಡಿದೆ ಚಿತ್ರತಂಡ, ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜನೆ ಮಾಡಿದ್ದರು. ಅಲ್ಲದೇ, ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಹಲವು ಅಚ್ಚರಿಯ ನಟರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಡಿ ಸಿನಿಮಾ  ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಇದೆ. ಬಿಸಿ ಬಿಸಿ ಸುದ್ದಿಯೇ ಇದು.

ರಾಧನಾ ರಾಮ್ ಈಗಾಗಲೇ ಒಂದು ಬಿಗ್ ಸಿನಿಮಾ ಒಪ್ಪಿ ಆಗಿದೆ. ಆ ಮೂಲಕ ಕನ್ನಡ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ಅದರ ಹೊರತಾಗಿ ಈಗ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಕೆಡಿ ಚಿತ್ರದಲ್ಲಿ ಅಭಿನಯಿಸ್ತಾರೆ ಅನ್ನೋ ನ್ಯೂಸ್ ದಿನೇ ದಿನೇ ವೈರಲ್ ಆಗುತ್ತಿದೆ. ಜೋಗಿ ಪ್ರೇಮ್ ಈ ಚಿತ್ರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ಒಂದು ಸುದ್ದಿ ಇತ್ತು. ಬಾಲಿವುಡ್ ನಟ ಸಂಜಯ್ ದತ್ ಈ ಚಿತ್ರಕ್ಕೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ ಅನ್ನೋ ಮಾತು ಅದಾಗಿತ್ತು. ಈ ವಿಷಯ ಇನ್ನೂ ಅಧಿಕೃತಗೊಂಡಿಲ್ಲ. ಆದರೆ ಸಂಜಯ್ ದತ್ ಚಿತ್ರದ ಟೈಟಲ್ ಟೀಸರ್​ ರಿಲೀಸ್​​ಗೆ ಬಂದು ಎಲ್ಲರಿಗೂ ಶಾಕ್ ಕೊಟ್ಟರು.  ಇನ್ನು ಕಾದು ನೋಡ ಬೇಕಿದೆ.

Leave A Reply

Your email address will not be published.