ಮುಖದ ಸುಕ್ಕು ನಿವಾರಣೆಗೆ ಇಷ್ಟು ಉಪಯೋಗಿಸಿ!

ಸೌಂದರ್ಯವೆಂಬುದು ಯಾವ ಸಮಯದಲ್ಲಿ ಕೂಡ ಇರಬೇಕಾದುದು. ಸ್ತ್ರೀಯರು ಮತ್ತು ಪುರುಷರು ಅಂತ ಪ್ರತ್ಯೇಕವಾಗಿ ಹೇಳಲು ಸಾಧ್ಯವಿಲ್ಲ. ಅಂದರೆ ಇಬ್ಬರಿಗೂ ಬ್ಯೂಟಿ ಅನ್ನುವುದು ಕಾಳಜಿ.

 

ಯಾವಾಗ್ಲೂ ತಾನು ಎವರ್ ಗ್ರೀನ್ ಆಗಿ ಕಾಣಬೇಕು ಅಂತ ಅದೆಷ್ಟೋ ಜನರಿಗೆ ಆಸೆ ಇರುತ್ತೆ. ಇದಕ್ಕಾಗಿ ಸ್ವಲ್ಪ ವಯಸ್ಸಾದ ನಂತರವೇ ಮುಖದಲ್ಲಿ ಸುಕ್ಕು ಕಟ್ಟುವುದು , ಡಾರ್ಕ್ ಸರ್ಕಲ್ ಹೀಗೇ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಯಾವುದೇ ವೈದ್ಯರ ಬಳಿ ಹೋಗ್ಬೇಡಿ ಅಂದ್ರೆ ಮನೆಯಲ್ಲೇ ಸಿಂಪಲ್ ರೆಮಿಡಿಗಳನ್ನೂ ಫಾಲೋ ಮಾಡಿ.

ಮೊದಲಿಗೆ ಕೊಬ್ಬರಿ ಎಣ್ಣೆ:- ಉಗುರು ಬೆಚ್ಚಗೆ ಮಾಡಿ ನಮ್ಮ ಮುಖ ಮತ್ತು ಕುತ್ತಿಗೆಯ ಬಳಿ ಮಸಾಜ್ ಮಾಡಿಕೊಳ್ಳಬೇಕು.

ಆಪಲ್ ಸೈಡ್ ವಿನಿಗರ್:- ಕೊಬ್ಬರಿ ಎಣ್ಣೆಯೊಂದಿಗೆ ನೀವು ಈ ಸೈಡ್ ವಿನೀಗರ್ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಮುಖ ತೊಳೆಯುವುದು ತುಂಬಾ ಸೂಕ್ತ.

ರಾತ್ರಿ ಮಲಗುವ ಮುನ್ನ ರೋಸ್ ವಾಟರ್ ಅನ್ನು ಮುಖಕ್ಕೆ ಹಚ್ಚಿ ಮಲಗಬೇಕು. ಚರ್ಮದ ಕೆಟ್ಟ ಅಂಶಗಳನ್ನು ಹೋಗಲಾಡಿಸಿ, ಹೊಳೆಯುವ ರೀತಿ ಮುಖ ಕಾಣುತ್ತದೆ.

ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ಚುಚ್ಚಿ ಅದನ್ನು ಕೊಬ್ಬರಿ ಎಣ್ಣೆ ಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಿದರೆ ಒಳಿತು. ಇಷ್ಟು ಟಿಪ್ಸ್ ಫಾಲೋ ಮಾಡಿ. ಗುಡ್ ರಿಸಲ್ಟ್ ನಿಮ್ಗೆ ತಿಳಿಯುತ್ತೆ.

Leave A Reply

Your email address will not be published.