Super Star Krishna : ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ನಟ ಮಹೇಶ್‌ಬಾಬು (Mahesh Babu) ಅವರ ತಂದೆ, ಸೂಪರ್‌ಸ್ಟಾರ್ ಕೃಷ್ಣ (Krishna Ghattamaneni) ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ( ಇಂದು) ನಸುಕಿನ 4 ಗಂಟೆಗೆ ನಿಧನರಾಗಿದ್ದಾರೆ.

 

ನವೆಂಬರ್ 13ರಂದು ಮಹೇಶ್ ಬಾಬು ತಂದೆ ಕೃಷ್ಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಸೇರಿಸಲಾಗಿತ್ತು.
ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವೇ ದಿನಗಳ ಹಿಂದೆ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನರಾದ ಸುದ್ದಿ ಇಡೀ ತೆಲುಗು ಚಿತ್ರರಂಗಕ್ಕೆ ಬೇಸರ ಮೂಡಿಸಿತ್ತು. ಆ ನೋವು ಮಾಸುವ ಮುನ್ನವೇ ‘ಪ್ರಿನ್ಸ್’ ತಂದೆ ಸೂಪರ್ ಸ್ಟಾರ್ ಕೃಷ್ಣ ಘಟ್ಟಮನೇನಿ (Krishna Ghattamaneni) ಅವರ ನಿಧನ ನಿಜಕ್ಕೂ ಎಲ್ಲರಿಗೂ ಆಘಾತ ಮೂಡಿಸಿದೆ.

ಬಾಂಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಅವಿಭಜಿತ ಆಂಧ್ರಪ್ರದೇಶದ ಜನರು ‘ಬಾಂಡ್ ಕೃಷ್ಣ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕೃಷ್ಣ ಅವರ ತೇನೆಮನಸಲು, ಸಾಕ್ಷಿ, ಅಲ್ಲೂರಿ ಸೀತಾರಾಮರಾಜು ಚಿತ್ರಗಳು ಜನಪ್ರಿಯವಾಗಿದ್ದವು.

Leave A Reply

Your email address will not be published.