Shocking news : ವಿಶ್ವದಲ್ಲಿಯೇ ಅತಿ ಉದ್ದದ ಮೂಗನ್ನು ಹೊಂದಿದ ವ್ಯಕ್ತಿ | ಇಲ್ಲಿದೆ ನೋಡಿ

Share the Article

ಇದೀಗ ವಿಶ್ವದಲ್ಲೇ ಅತಿ ಉದ್ದದ ಮೂಗನ್ನು ಹೊಂದಿರುವ ವ್ಯಕ್ತಿಯ ಫೋಟೋ ವೈರಲ್ ಆಗುತ್ತಿದ್ದು, ಜನ ಫೋಟೋ ನೋಡಿ ಶಾಕ್ ಆಗಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹೌದು, ಹಿಸ್ಟಾರಿಕ್ ವಿಡ್ಸ್ (Historic Vids) ಎಂಬ ಟ್ವಿಟರ್ ಪೇಜ್‍ನಲ್ಲಿ, ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ (Believe It Or Not Museum) ಇರಿಸಲಾಗಿರುವ ವ್ಯಕ್ತಿಯ ತಲೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಥಾಮಸ್ ವಾಡ್‍ಹೌಸ್ ಅವರ ಮೂಗು 7.5 ಇಂಚು ಉದ್ದವಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‍ಸೈಟ್‍ನ ಪೇಜ್‍ನಲ್ಲಿ ಈ ವ್ಯಕ್ತಿಯ ಹೆಸರಿದೆ. ಅಲ್ಲದೇ ಈತನೊಬ್ಬ “ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯ ಎಂದು ತಿಳಿಸಲಾಗಿದೆ.

18 ನೇ ಶತಮಾನದಲ್ಲಿದ್ದ ಥಾಮಸ್ ವಾಡ್‍ಹೌಸ್ ಒಬ್ಬರು ಇಂಗ್ಲಿಷ್ ಸರ್ಕಸ್ ಕಲಾವಿದರಾಗಿದ್ದರು. 7.5 ಇಂಚುಗಳಷ್ಟು (19 ಸೆಂ) ಉದ್ದದ ಮೂಗನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಜನಪ್ರಿಯರಾಗಿದ್ದರು. ಸದ್ಯ ಈ ಫೋಟೋಗೆ ಸುಮಾರು 1.20 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 7,200ಕ್ಕೂ ಹೆಚ್ಚು ರೀಟ್ವೀಟ್ ಬಂದಿದೆ.

Leave A Reply

Your email address will not be published.