“ಗ್ರಾಜುವೇಟ್ ಚಾಯಿವಾಲಿ” ಚಹಾದಂಗಡಿ ಬಂದ್ | ಕಣ್ಣೀರಿಟ್ಟ ಪದವೀಧರೆ!
ಪದವೀಧರೆಯಾದರೂ ನಂತರ ಹಲವು ಹುದ್ದೆಗಳಿಗೆ ಅಲೆದಾಡಿ ಕೆಲಸ ಸಿಗದ ಸಂದರ್ಭದಲ್ಲಿ ತನ್ನದೇ ಆದ ಸ್ವಂತ ಚಹಾದ ಅಂಗಡಿ ತೆರೆದು ದಿನದೂಡುತ್ತಿದ್ದ ಯುವತಿಯ ಟೀ ಸ್ಟಾಲ್ ಈಗ ಕೊನೆಯಾಗಿದೆ.
ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಟೀ ಸ್ಟಾಲ್ ವೊಂದನ್ನು ತೆರೆದರೂ ಅಡತಡೆಗಳ ಕಾರಣ ಈಗ ಟೀ ಸ್ಟಾಲ್ ಬಂದ್ ಆಗಿದೆ.
ಲೈಸೆನ್ಸ್ ಹಾಗೂ ಇತರ ದಾಖಲೆ ಎಲ್ಲವನ್ನು ಹೊಂದಿದ್ದ ಟೀ ಸ್ಟಾಲ್ ಗೆ ಪ್ರಿಯಾಂಕ “ಗ್ರಾಜುವೇಟ್ ಚಾಯಿವಾಲಿ” ಎಂದು ಹೆಸರು ಇಡುತ್ತಾರೆ.
“ಗ್ರಾಜುವೇಟ್ ಚಾಯಿವಾಲಿ” ಯುವ ಜನರನ್ನು ಸೆಳೆಯುವಲ್ಲಿ ಸಫಲರಾಗುತ್ತಾರೆ. ಉತ್ತಮವಾಗಿ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದ ಟೀಸ್ಟಾಲ್ ನ್ನು ಒಂದು ದಿನ ರಾತ್ರೋರಾತ್ರಿ ಅಧಿಕಾರಿಗಳು ತೆರೆವು ಮಾಡುತ್ತಾರೆ. ಅನಂತರ ಪ್ರಿಯಾಂಕ ಅವರ ಟೇಸ್ಟಾಲ್ ಗೆ ಅನೇಕ ತೊಂದರೆ ಶುರುವಾಗುತ್ತದೆ. ಇದರಿಂದ ಬೇಸತ್ತು ಹೋದ ಪ್ರಿಯಾಂಕ ಸ್ಥಳೀಯ ರಾಜಕೀಯ ಮುಖಂಡರ ಬಳಿ ಮನವಿ ಮಾಡಿ ಟೀಸ್ಟಾಲನ್ನು ಮತ್ತೆ ಅದೇ ಜಾಗದಲ್ಲಿ ಇಡುತ್ತಾರೆ.
ಆದರೆ ಇತ್ತೀಚೆಗೆ ಮತ್ತೊಮ್ಮೆ “ಗ್ರಾಜುವೇಟ್ ಚಾಯಿವಾಲಿ” ಸ್ಟಾಲ್ ತೆರವಿಗೆ ಬಿಹಾರದ ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನೋಟಿಸ್ ನೀಡಿದ್ದು, ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವ ಕಾರಣ ಕೊಟ್ಟಿದ್ದಾರೆ. ಇದರಿಂದ ಪ್ರಿಯಾಂಕ ಭಾವುಕರಾಗಿ ಅಧಿಕಾರಿಗಳ ವಿರುದ್ಧ, ವ್ಯವಸ್ಥೆಯ ವಿರುದ್ಧ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಕಮಿಷನರ್ ಬಳಿ ಅನುಮತಿ ಪಡೆದ ಬಳಿಕವೂ ನನ್ನ ಕಾರ್ಟನ್ನು ಹೇಗೆ ತೆರವು ಮಾಡುತ್ತಾರೆ. ನಾನು ವ್ಯವಸ್ಥೆ ಮುಂದೆ ವಿಫಲಳಾದೆ. ನನ್ನ ಚಹಾದ ಶಾಖೆಯನ್ನು ಆರಂಭಿಸಲು ಅನುಮತಿ ಪಡೆದ ಎಲ್ಲರ ಹಣವನ್ನು ನಾನು ವಾಪಸ್ ಕೊಡುತ್ತೇನೆ. ನಾನು ನನ್ನ ಚಹಾದಂಗಡಿ ಮುಚ್ಚಿ ಮನೆಗೆ ಹೋಗುತ್ತೇನೆ’ ಎಂದು ಅಳುತ್ತಲೇ ಪ್ರಿಯಾಂಕ ಮಾತಾನಾಡಿದ್ದಾರೆ.