Karnataka Government Holiday 2023 : ವಿದ್ಯಾರ್ಥಿಗಳೇ ಗಮನಿಸಿ | ರಾಜ್ಯ ಸರಕಾರಿ ಶಾಲಾ ರಜಾ ದಿನಗಳ ಸಂಭಾವನೀಯ ಪಟ್ಟಿ ಇಲ್ಲಿದೆ!

ಇಂದಿನ ಮಕ್ಕಳು ನಾಳಿನ ಭವಿಷ್ಯ ಆದ್ದರಿಂದ ಮಕ್ಕಳ ಶಿಕ್ಷಣ ಮಟ್ಟ ಸಹ ಪ್ರಮುಖ ಪಾತ್ರ ಹೊಂದಿದ್ದು ಶಿಕ್ಷಣ ಪ್ರವೃತ್ತಿಯನ್ನು ನಿರ್ಧರಿಸಲು ಹಲವಾರು ನಿಯಮಗಳು ಇರುತ್ತವೆ . ಅಲ್ಲದೆ ಸರ್ಕಾರಿ ನೌಕರರು ಸಹ ಸಮಾಜಕ್ಕೆ ಅಘಾದ ಸೇವೆಯನ್ನು ಮಾಡುತ್ತಿದ್ದಾರೆ.

ಈಗಾಗಲೇ ಸರ್ಕಾರವು 2023ರ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಮತ್ತು ಶಾಲಾ ಮಕ್ಕಳಿಗೆ ಸಿಗುವ ರಜಾ ದಿನಗಳ ಸಂಭಾವನೀಯ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ಮುಖ್ಯವಾಗಿ ಭಾನುವಾರ,ಎರಡು ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ಒಟ್ಟು 25 ದಿನಗಳ ರಜೆ ಇರಲಿದೆ ಎನ್ನಲಾಗಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿರುವ ರಜೆಗಳ ವಿವರ:
ಜನವರಿ 14- ಶನಿವಾರ ಮಕರ ಸಂಕ್ರಾಂತಿ
ಜನವರಿ 26- ಗುರುವಾರ ಗಣರಾಜ್ಯೋತ್ಸವ
ಫೆಬ್ರವರಿ 18- ಶನಿವಾರ ಮಹಾ ಶಿವರಾತ್ರಿ
ಮಾರ್ಚ್-22- ಬುಧವಾರ ಯುಗಾದಿ
ಎಪ್ರಿಲ್-4- ಮಂಗಳವಾರ ಮಹಾವೀರ ಜಯಂತಿ
ಏಪ್ರಿಲ್ -7 – ಶುಕ್ರವಾರ ಶುಭ ಶುಕ್ರವಾರ
ಎಪ್ರಿಲ್ -14 – ಶುಕ್ರವಾರ ಡಾ ಅಂಬೇಡ್ಕರ್ ಜಯಂತಿ
ಎಪ್ರಿಲ್ 22 – ಶನಿವಾರ ಈದುಲ್ ಫಿತರ್
ಎಪ್ರಿಲ್ -23 – ಭಾನುವಾರ ಬಸವ ಜಯಂತಿ
ಮೇ -1- ಸೋಮವಾರ ಕಾರ್ಮಿಕರ ದಿನ
ಜೂನ್ -29- ಗುರುವಾರ ಬಕ್ರೀದ್ / ಈದ್ ಅಲ್ ಅಧಾ
ಜುಲೈ 29- ಶನಿವಾರ ಮೊಹರಂ
ಆಗಸ್ಟ್ 15- ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್-19 ಮಂಗಳವಾರ ಗಣೇಶ ಚತುರ್ಥಿ
ಸೆಪ್ಟೆಂಬರ್28- ಗುರುವಾರ ಈದ್ ಮಿಲಾದ್
ಅಕ್ಟೋಬರ್-2- ಸೋಮವಾರ ಗಾಂಧಿ ಜಯಂತಿ
ಅಕ್ಟೋಬರ್-14- ಶನಿವಾರ ಮಹಾಲಯ ಅಮಾವಾಸ್ಯೆ
ಅಕ್ಟೋಬರ್-23- ಸೋಮವಾರ ಮಹಾ ನವಮಿ
ಅಕ್ಟೋಬರ್ 24- ಮಂಗಳವಾರ ವಿಜಯ ದಶಮಿ
ಅಕ್ಟೋಬರ್-25- ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ
ನವೆಂಬರ್-1- ಬುಧವಾರ ಕನ್ನಡ ರಾಜ್ಯೋತ್ಸವ
ನವೆಂಬರ್12- ಭಾನುವಾರ ದೀಪಾವಳಿ
ನವೆಂಬರ್-13- ಸೋಮವಾರ ದೀಪಾವಳಿ ರಜೆ
ನವೆಂಬರ್-30 – ಗುರು ಕನಕದಾಸರ ಜಯಂತಿ
ಡಿಸೆಂಬರ್-25 ಸೋಮವಾರ ಕ್ರಿಸ್ ಮಸ್

ಈ ಮೇಲಿನ ದಿನಾಂಕವು 2023ರ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಮತ್ತು ಶಾಲಾ ಮಕ್ಕಳಿಗೆ ಸಿಗುವ ರಜಾ ದಿನಗಳ ಪಟ್ಟಿ ಬಿಡುಗಡೆಯನ್ನು ವರದಿಯನ್ನು ಸರ್ಕಾರವು ಆದೇಶಿಸಿದೆ.

Leave A Reply

Your email address will not be published.