ಗಮನಿಸಿ ಸಾರ್ವಜನಿಕರೇ, ನ.11 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ | ಈ ರಸ್ತೆಗಳು ಬಂದ್ ,ಪರ್ಯಾಯ ವ್ಯವಸ್ಥೆ ಏನು?

ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅವರು ಬೆಂಗಳೂರು ಭೇಟಿ ನೀಡುತ್ತಿರುವ ಹಿನ್ನೆಲೆ ಸಂಚಾರ ಹಾಗೂ ಭದ್ರತಾ ದೃಷ್ಟಿಯಿಂದ ಬೆಳಿಗ್ಗೆ 8ರಿಂದ ಮದ್ಯಾಹ್ನ 2ರವರೆಗೆ ಕೆಳಕಂಡ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಬಂದ್ ಇರಲಿದೆ.

ಬಂದ್ ಇರುವ ರಸ್ತೆಗಳು

  1. ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್‌ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವಿನ್ಸ್ ರಸ್ತೆ, ಬಳ್ಳಾರಿ ರಸ್ತೆ ಮತ್ತು ಏರ್ ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ ಬಂದ್ ಇರಲಿದೆ.
  2. ಶೇಷಾದ್ರಿ ರಸ್ತೆಯಲ್ಲಿ – ಮಹಾರಾಣಿ ಬ್ರಿಡ್ಜ್ ನಿಂದ ರೈಲ್ವೆ
    ಸ್ಟೇಷನ್ ಪ್ರವೇಶ ದ್ವಾರದವರೆಗೆ ಬಂದ್
  3. ಕೆ.ಜಿ ರಸ್ತೆಯಲ್ಲಿ ಶಾಂತಲಾ ಜಂಕ್ಷನ್‌ನಿಂದ – ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬಂದ್
  4. ವಾಟಾಳ್ ನಾಗರಾಜ್ ರಸ್ತೆಯಲ್ಲಿ – ಕೋಡೆ ಅಂಡರ್ ಪಾಸ್‌ನಿಂದ ಪಿ.ಎಫ್ ವರೆಗೆ ಬಂದ್
  5. ಇಂಟರ್‌ನ್ಯಾಷನಲ್ ಏಪೋರ್ಟ್‌ನ ಸುತ್ತ ಮತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಪರ್ಯಾಯ ಮಾರ್ಗ:

  1. ಮೈಸೂರು ಬ್ಯಾಂಕ್ ವೃತ್ತದಿಂದ ಪ್ಯಾಲೇಸ್ ರಸ್ತೆಗೆ ಬರುವ ವಾಹನ ಸವಾರರು ಕೆ.ಜಿ. ರಸ್ತೆಯ ಮೂಲಕ ಎಲ್.ಆರ್.ಡಿ.ಇ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸುವವರು ರಾಜಭವನ ರಸ್ತೆ ಮೂಲಕ ಸಾಗಬೇಕು.
  2. ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಮೂಲಕ ಬರುವವರು ರೇಸ್ ವ್ಯೂವ್ ಸರ್ಕಲ್‌ನಲ್ಲಿ ಎಡತಿರುವು ಪಡೆದು ನೆಹರು ಸರ್ಕಲ್ ಮೂಲಕ ಸಾಹಬಹುದಾಗಿದೆ.
  3. ಕೆಕೆ ರಸ್ತೆ ಮೂಲಕ ವಿಂಡ್ಸ್ ಮ್ಯಾನರ್ ವೃತ್ತಕ್ಕೆ ತೆರಳುವ ವಾಹನ ಸವಾರರು ಶಿವಾನಂದ ಸರ್ಕಲ್‌ನಲ್ಲಿ-ನೆಹರು ಸರ್ಕಲ್ ಮೂಲ ಹೋಗಬಹುದಾಗಿದೆ.
  4. ಬಿಹೆಚ್ ಇಎಲ್ ಸರ್ಕಲ್‌ನಿಂದ ಸರ್ಕಲ್‌ನಿಂದ ಮೇಕ್ರಿ
    ಸರ್ಕಲ್‌ ಕಡೆಗೆ ಬರುವ ವಾಹನ ಸವಾರರು ಸದಾಶಿವನಗರ ಪೊಲೀಸ್ ಠಾಣೆ – ಮಾರಮ್ಮ ಸರ್ಕಲ್ ಮಾರ್ಗೋಸ ರಸ್ತೆ ಮೂಲಕ ಸಂಚರಿಸಬಹುದು.
  5. ಭಾಷ್ಯಂ ಸರ್ಕಲ್‌ನಿಂದ ಕಾವೇರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಮಲ್ಲೇಶ್ವರಂ 18ನೇ ಕ್ರಾಸ್ ಮಾರ್ಗೋಸ ರಸ್ತೆಯ ಮೂಲಕ ಹೋಗಬಹುದು.
  6. ಕ್ಲೀನ್ಸ್ ವೃತ್ತದಿಂದ ಸಿ.ಟಿ.ಓ, ಕಡೆಗೆ ಬರುವ ವಾಹನ ಸವಾರರು ಸಿದ್ದಲಿಂಗಯ್ಯ ವೃತ್ತ – ಆರ್.ಆರ್.ಎಂ.ಆರ್. ರಸ್ತೆಯ ಮೂಲಕ ಸಾಗಬಹುದು.
  7. ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನಗಳು ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ.
Leave A Reply

Your email address will not be published.