ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ | ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | 3 ಸಾವಿರದಿಂ 11 ಸಾವಿರ ವಿದ್ಯಾರ್ಥಿವೇತನ

ಬಡವರ ಜೀವನ ಸುಧಾರಿಸಿಕೊಳ್ಳಲು ಸರ್ಕಾರ ಹೆಚ್ಚಿನ ಪ್ರಯತ್ನ ಮಾಡುತ್ತಿದೆ. ಕೆಲವು ಸೌಲಭ್ಯಗಳನ್ನು ನೀಡಿ ಅವರನ್ನು ಪ್ರೋತ್ಸಾಹಿಸುತ್ತಿದೆ. ಹಾಗಾಗಿ ರಾಜ್ಯದ ಹಳದಿ ಬೋರ್ಡ್‌ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳ ಮೆಟ್ರಿಕ್‌ ನಂತರದ ಉನ್ನತ ವಿದ್ಯಾಭ್ಯಾಸ ಉತ್ತೇಜಿಸಲು ‘ವಿದ್ಯಾನಿಧಿ’ ಯೋಜನೆಯಲ್ಲಿ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

 

ಆರ್ಥಿಕವಾಗಿ ಸಂಕಷ್ಟ ಎದುರಾಗದಂತೆ ರಾಜ್ಯದ ಹಳದಿ ಬೋರ್ಡ್‌ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳ ಮೆಟ್ರಿಕ್‌ ನಂತರದ ಉನ್ನತ ವಿದ್ಯಾಭ್ಯಾಸ ಉತ್ತೇಜಿಸಲು ‘ವಿದ್ಯಾನಿಧಿ’ ಯೋಜನೆ ಮತ್ತು ಆರೋಗ್ಯ ಸೌಲಭ್ಯದ ಅನುಷ್ಠಾನಕ್ಕೆ ಸರಕಾರ ಆದೇಶ ನೀಡಿದೆ.

‘ವಿದ್ಯಾನಿಧಿ’ ಯೋಜನೆ ನಿಯಮಗಳು ಇಂತಿವೆ :
• ಚಾಲಕರು, ಕರ್ನಾಟಕದ ನಿವಾಸಿಯಾಗಿರಬೇಕು. • ರಾಜ್ಯದ ಯಾವುದೇ ಪ್ರಾದೇಶಿಕ, ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮೋಟಾರು ಕ್ಯಾಬ್‌/ ಆಟೋರಿಕ್ಷಾ ಕ್ಯಾಬ್‌ ವರ್ಗಗಳ ವಾಹನಗಳನ್ನು ಚಲಾಯಿಸಲು ಸಾರಥಿ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾಪತ್ರ ಹೊಂದಿರುವ ಯೆಲ್ಲೋ ಬೋರ್ಡ್‌ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರಾಗಿರಬೇಕು.
• ಚಾಲಕರ ಕುಟುಂಬದ ಎಲ್ಲಾ ಮಕ್ಕಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ.
• ಚಾಲಕರ ಕುಟುಂಬದ ವಿದ್ಯಾರ್ಥಿಯು ಇತರ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ.
• ಕರ್ನಾಟಕದಲ್ಲಿಅಧಿಕೃತ ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವಾಗಿ ಪಿಯುಸಿ, ಡಿಪ್ಲೋಮ, ಐಟಿಐ, ಪದವಿ, ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ ಫಾರ್ಮ್, ನರ್ಸಿಂಗ್‌, ಎಂಬಿಬಿಎಸ್‌, ಬಿಇ, ಬಿ.ಟೆಕ್‌ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
• ತಂದೆ- ತಾಯಿ ಇಬ್ಬರೂ ಚಾಲಕರಾಗಿದ್ದು, ‘ಸಾರಥಿ’ ತಂತ್ರಾಂಶದ ದತ್ತಾಂಶದಲ್ಲಿ ದಾಖಲಾಗಿದ್ದಲ್ಲಿ ಈ ಯೋಜನೆಯಲ್ಲಿ, ಒಂದು ವಿದ್ಯಾರ್ಥಿವೇತನಕ್ಕೆ ಮಾತ್ರ ಚಾಲಕರ ಮಕ್ಕಳು ಅರ್ಹರಾಗಿರುತ್ತಾರೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ :
(https://sevasindhu.karnataka.gov.in/), ಈ ಲಿಂಕ್ ಮೂಲಕ, ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ನಲ್ಲಿ ಅಗತ್ಯ ದಾಖಲೆ ಸಲ್ಲಿಸುವ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ತಿಳಿಸಲಾಗಿದೆ.

ವಿದ್ಯಾರ್ಥಿವೇತನ ವಿವರಗಳು :
ಪದವಿ ಪೂರ್ವ: ಪಿಯುಸಿ, ಐಟಿಐ, ಡಿಪ್ಲೋಮ ಹುಡುಗರಿಗೆ 2,500 ಸಾವಿರ ರೂ.,
ಹುಡುಗಿಯರಿಗೆ 3 ಸಾವಿರ ರೂ.

ಎಲ್ಲಾ ಪದವಿ : ಹುಡುಗರಿಗೆ 5 ಸಾವಿರ ರೂ., ಹುಡುಗಿಯರಿಗೆ 5,500 ರೂ.

ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ.ಫಾರ್ಮ್, ನರ್ಸಿಂಗ್‌ :
ಹುಡುಗರಿಗೆ 7,500 ಸಾವಿರ ರೂ., ಹುಡುಗಿಯರಿಗೆ 8 ಸಾವಿರ ರೂ.

ಎಂಬಿಬಿಎಸ್‌, ಬಿಇ, ಬಿಟೆಕ್‌ :
ಹುಡುಗರಿಗೆ 10 ಸಾವಿರ ರೂ., ಹುಡುಗಿಯರಿಗೆ 11 ಸಾವಿರ ರೂ.

ಈ ಮೇಲಿನ ಅರ್ಹ ವಿದ್ಯಾರ್ಥಿಗಳು ವಿದ್ಯಾನಿಧಿ ಯೋಜನೆಯಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಅನುದಾನ ಪಡೆಯಬಹುದಾಗಿದೆ.

Leave A Reply

Your email address will not be published.