BIGG NEWS : ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಮಾತಾಡಿಲ್ಲ, ವಿಕಿಪಿಡಿಯಾದಲ್ಲಿ ಇರುವುದನ್ನ ಹೇಳಿದ್ದಾರೆ : ರಾಮಲಿಂಗಾ ರೆಡ್ಡಿ ಸಮರ್ಥನೆ

ಬೆಂಗಳೂರು: ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಕುರಿತು ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಏನೂ ಮಾತಾಡಿಲ್ಲ ವಿಕಿಪಿಡಿಯಾದಲ್ಲಿ ಇರುವುದನ್ನು ಹೇಳಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಸಮರ್ಥಿಸಿಕೊಂಡರು.

 

ಸತೀಶ್ ಜಾರಕಿಹೊಳಿ ನಿಜವಾದ ಹಿಂದೂ ಧರ್ಮ ಪಾಲಿಸುತ್ತಿದ್ದಾರೆ. ಬಿಜೆಪಿಯವರು ಚುನಾವಣೆಗೆ ಹಿಂದೂ ಧರ್ಮ ಬಳಸಿಕೊಳ್ಳುತ್ತಿದ್ದಾರೆ. ನಮಗೆ ಹಿಂದೂ ಧರ್ಮದ ಬಗ್ಗೆ ಗೌರವವಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಮುಂದವರೆದು ನಾವು ಕಟ್ಟಿದಷ್ಟು ದೇವಸ್ಥಾನಗಳನ್ನು ಬಿಜೆಪಿಯವರು ಕಟ್ಟಿಲ್ಲ. ನಾವು ಅಧಿಕಾರದಲ್ಲಿದ್ದಾಗ ದೇವಸ್ಥಾನಗಳಿಗೆ ಹೆಚ್ಚು ಅನುದಾನವನ್ನು ಕೊಟ್ಟಿದ್ದೇವೆ. ಬಿಜೆಪಿಯವರು ಏನೂ ಕೊಡದೆ ಪ್ರಚಾರ ಪಡೆಯುತ್ತಾರೆ. ಬಿಜೆಪಿಯವರು ತಮಗೆ ಬೇಕಾದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

Leave A Reply

Your email address will not be published.