ದೈವರಾಧನೆ ಬಗ್ಗೆ ಬಿ.ಟಿ ಲಲಿತಾ ನಾಯ್ಕ್ ವಿವಾದಾತ್ಮಕ ಹೇಳಿಕೆ ಖಂಡನೀಯ| ಒಳ್ಳೆಯ ಕೆಲಸ ಮಾಡಿ.. ಇಲ್ಲ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿ- ಸಚಿವ ಎಸ್. ಅಂಗಾರ
ಕಾಣಿಯೂರು: ತುಳುನಾಡಿನ ಸಂಸ್ಕೃತಿ, ಭೂತಾರಾಧನೆ ಹಾಗೂ ದೈವನರ್ತಕರ ಬಗ್ಗೆ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡನೀಯ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು, ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು “ನಮ್ಮ ಸಂಸ್ಸೃತಿಗೆ ಸಂಬಂಧಪಟ್ಟ ಹಾಗೇ ನಾವೆಲ್ಲರೂ ನಂಬಿಕೆ ಇರುವ ವ್ಯಕ್ತಿಗಳು, ನಾವು ದೇವರನ್ನು ಪೂಜಿಸುತ್ತೇವೆ. ದೈವವನ್ನು ಆರಾಧನೆ ಮಾಡುತ್ತೇವೆ. ಈ ರೀತಿಯ ದೈವಾರಾಧನೆಯನ್ನು ಮಾಡುವಂತಹ ಸಮುದಾಯದವರಿಗೆ ಮಾಸಾಶನ ಕೊಡಬೇಕು ಎಂಬುದಾಗಿ ಸರಕಾರ ಘೋಷಣೆ ಮಾಡಿದೆ. ಆದರೆ ಇದರ ಬಗ್ಗೆ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್ ಟೀಕೆಯನ್ನು ಮಾಡುತ್ತಿದ್ದಾರೆ. ಲಲಿತಾ ನಾಯ್ಕ್ ಅವರು ಕೈಯಿಂದ ಕೊಡುವಂತಹ ಅವಶ್ಯಕತೆಯಿಲ್ಲ. ಮಾಶಾಸನ ಕೊಡುವಂತದ್ದು, ಕರ್ನಾಟಕ ಸರಕಾರ. ಅವರಿಗೆ ನಂಬಿಕೆ ಇಲ್ಲದಿದ್ದರೆ ನಂಬಬೇಕು ಎಂಬುದಾಗಿ ಹೇಳಿವುದಿಲ್ಲ. ಆದರೆ ನಂಬಿಕೆ ಇರುವ ವ್ಯಕ್ತಿಗಳ ಬಗ್ಗೆ ಈ ರೀತಿಯ ಆರೋಪಗಳನ್ನು ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ ಸಚಿವರು, ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗರು ಈ ರೀತಿಯ ಕೆಲಸವನ್ನು ಮಾಡುತ್ತಾರೆ. ಈ ರೀತಿಯ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ದೈವಾರಾಧನೆ ಮಾಡುವಂತಹ ಜನಾಂಗಗಳಿಗೆ ಮಾಶಾಸಾನ ಕೊಡುವ ಸಂದರ್ಭದಲ್ಲಿ ಈ ರೀತಿಯ ಟಿ.ಕೆಗಳನ್ನು ಮಾಡುವುದನ್ನು ಬಿಟ್ಟು, ಅಂತಹ ಜನಾಂಗಳಿಗೆ ನೋವು ಕೊಡುವಂತಹ ಕೆಲಸವನ್ನೂ ಬಿಟ್ಟು, ಒಳ್ಳೆಯ ಕೆಲಸ ಮಾಡಿ, ಅಥವಾ ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿ. ಪ್ರೋತ್ಸಾಹ ಕೊಡದಿದ್ದರೆ ಮಾತನಾಡದೇ ಸುಮ್ಮನೆ ಕುಳಿತು ಕೊಳ್ಳಿ ಎಂದು ಸಚಿವ ಅಂಗಾರ ಹೇಳಿದ್ದಾರೆ.