ಚಳಿಗಾಲದಲ್ಲಿ ಕಾಮಾಸಕ್ತಿ ಕುಂಠಿತಗೊಳ್ಳುತ್ತಾ..! ಕಾರಣವೇನು ಗೊತ್ತಾ? ಇಲ್ಲಿದೆ ಓದಿ

ಹವಮಾನ ವೈಪರಿತ್ಯಗಳಿಂದ ನಮ್ಮ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ, ಈ ಹವಾಮಾನ ಬದಲಾವಣೆ ನಮ್ಮ ಲೈಂಗಿಕ ಜೀವನದ ಮೇಲೆ ಸಹ ಪರಿಣಾಮ ಬೀರಬಹುದು ಎಂದು ಸಂಶೋಧನೆಯು ತೋರಿಸಿದೆ. ಚಳಿಗಾಲದಲ್ಲಿ ಕಾಮಾಸಕ್ತಿ ಕಡಿಮೆಯಾಗುತ್ತದೆ. ಜನರು ತಮ್ಮ ಮನಸ್ಥಿತಿಯಲ್ಲಿ ಕೆಟ್ಟ ಬದಲಾವಣೆಯನ್ನು ಅನುಭವಿಸಬಹುದು ಎಂದು ಸಂಶೋಧನೆ ತಿಳಿಸಿದೆ.

 

ಚಳಿಗಾಲ ರೊಮ್ಯಾನ್ಸ್ ಮಾಡಲು ಬೆಸ್ಟ್ ಕಾಲ ಎಂದು ಹೇಳಿರೋದನ್ನು ನೀವು ಕೇಳಿರಬಹುದು, ಆದರೆ ನಿಜವಾಗಿ ಚಳಿಗಾಲ ಬಂದ ತಕ್ಷಣ, ಲೈಂಗಿಕ ಜೀವನದ ಮೇಲೆ ಅದರ ಪರಿಣಾಮವನ್ನು ಕಾಣಬಹುದು. ದಂಪತಿ ಈ ಸಮಯದಲ್ಲಿ ಹೆಚ್ಚಾಗಿ ತಮ್ಮ ಬೆಡ್ ರೂಮ್ ಮತ್ತು ಹಾಸಿಗೆಯಲ್ಲಿದ್ದರೂ ತಮ್ಮ ಸಂಗಾತಿಯಿಂದ ದೂರವಿರುತ್ತಾರೆ.

ಅನೇಕ ದಂಪತಿ ಚಳಿಗಾಲದಲ್ಲಿ ಅವರು ತುಂಬಾ ಡ್ರೈ ಆಗುತ್ತಾರೆ ಎಂದು ದೂರುತ್ತಾರೆ. ಇದರಿಂದ ಸೆಕ್ಸ್ ಮೇಲೆ ಪರಿಣಾಮ ಬೀರಬಹುದು. ಹವಾಮಾನದಲ್ಲಿನ ಬದಲಾವಣೆಗಳು ವಾಸ್ತವವಾಗಿ ನಮ್ಮ ಲೈಂಗಿಕ ಜೀವನದ  ಮೇಲೆ ಪರಿಣಾಮ ಬೀರುತ್ತವೆ ಎಂಬುದು ನಿಜ.
ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ವಿಟಮಿನ್ ಡಿ  ಮಟ್ಟವು ಕಡಿಮೆ ಇರುತ್ತದೆ, ಇದರಿಂದಾಗಿ ಜನರು ತಮ್ಮ ಮನಸ್ಥಿತಿಯಲ್ಲಿ ಕೆಟ್ಟ ಬದಲಾವಣೆಗಳನ್ನು ಅನುಭವಿಸುತ್ತಾರೆ. ಮೂಡ್ ಸ್ವಿಂಗ್ ಹೆಚ್ಚಾಗಿರೋದರಿಂದ ಸೆಕ್ಸ್ ಲೈಫ್ ಮೇಲೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗೋದಿಲ್ಲ.

ಈ ಚಳಿಗಾಲದಲ್ಲಿ ದಂಪತಿ ತಮ್ಮ ಲೈಂಗಿಕ ಜೀವನವನ್ನು ಹೇಗೆ ಆಳಬಹುದು ಎಂಬುದರ ಬಗ್ಗೆ ಸೆಕ್ಸ್ ಮತ್ತು ರಿಲೇಶನ್ ಶಿಪ್ (Relationship) ಮನಶ್ಶಾಸ್ತ್ರಜ್ಞ ಜೋ ಹೆಮಿಂಗ್ಸ್ ಮಾಹಿತಿ ನೀಡಿದ್ದು, ಚಳಿಗಾಲದಲ್ಲಿ ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ, ಆದರೆ ಈ ಋತುವಿನಲ್ಲಿ ಪುರುಷರು ಹೆಚ್ಚಿನ ಟೆಸ್ಟೋಸ್ಟೆರಾನ್ ಲೆವೆಲ್ (testosterone level) ಹೊಂದಿರುತ್ತಾರೆ ಎಂದು ಹೇಳಿದರು. ಇದರಲ್ಲಿ ವೀರ್ಯಾಣುವಿನ (Sperms) ಸಂಖ್ಯೆ ಹೆಚ್ಚಾಗಿರುತ್ತದೆ. ಅದೇ ಸಮಯದಲ್ಲಿ, ಮಹಿಳೆಯರು ಸಹ ಹೆಚ್ಚು ಫಲವತ್ತತೆಯನ್ನು (Fertility) ಹೊಂದಿರುತ್ತಾರೆ

ಚಳಿಗಾಲದಲ್ಲಿ ಆಹಾರವು (Food) ನಮ್ಮ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ನಮಗೆ ಆಲಸ್ಯ ಉಂಟುಮಾಡುತ್ತದೆ. ನಾವು ಹೆಚ್ಚು ಸಮಯ ತಿನ್ನೋದ್ರಲ್ಲಿ ಅಥವಾ ಟಿವಿ ನೋಡೋದ್ರಲ್ಲೇ ಕಳೆಯುತ್ತೇವೆ. ಇದು ಅಭ್ಯಾಸವಾಗದಂತೆ ನೋಡಿಕೊಳ್ಳಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಚಳಿಗಾಲವನ್ನು ಸ್ಪೈಸ್ ಅಪ್ ಮಾಡೋದು ಹೇಗೆ ನೋಡೋಣ.

ಚಳಿಗಾಲದಲ್ಲಿ, ನೀವು ಸಂಗಾತಿಯೊಂದಿಗೆ ಮನೆಯಿಂದ ಹೊರಗೆ ಸ್ವಲ್ಪ ಸಮಯವನ್ನು ಕಳೆಯಲು ಪ್ಲ್ಯಾನ್ ಮಾಡಬಹುದು. ಅದಕ್ಕಾಗಿ ವಾರಾಂತ್ಯಕ್ಕೆ ಹೊರಗೆ ಹೋಗಿ. ಚಳಿಯಲ್ಲಿ ಸಂಗಾತಿಯ ಹಿಂದೆ ಕುಳಿತು ಬೈಕ್ (bike ride) ಸವಾರಿ ಮಾಡಿ. ಅವನ ಸ್ಪರ್ಶವು ಬೆಚ್ಚನೆಯ ಅನುಭವ ನೀಡುತ್ತದೆ, ಇದರ ಜೊತೆ, ಜೊತೆಗೆ ನಿಮ್ಮ ಮೂಡ್ ಸಹ ಬದಲಾಗುತ್ತೆ..

ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು ಎಷ್ಟು ಸೂಕ್ತ?

ನಿಮ್ಮ ಸಂಬಂಧವು ಬದಲಾಗಿದೆ ಎಂದು ನೀವು ಭಾವಿಸಿದರೆ, ಚಳಿಗಾಲದಲ್ಲಿ ಹೆಚ್ಚಿನ ದಂಪತಿಗಳು ಇದನ್ನೆ ಭಾವಿಸುತ್ತಾರೆ ಎಂಬುದನ್ನು ನೆನಪಿಡಿ. ಚಳಿಗಾಲವು ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕಾಮಾಸಕ್ತಿ ಹೆಚ್ಚಿಸಲು ಸಂಗಾತಿಯೊಂದಿಗೆ ಲೈಂಗಿಕತೆಯ ಬಗ್ಗೆ ಮಾತನಾಡಿ.

ತಮ್ಮ ಸಂಗಾತಿಯೊಂದಿಗೆ ತಮ್ಮ ಸೆಕ್ಸ್ ಡ್ರೈವ್ (sex drive) ಬಗ್ಗೆ ಮಾತನಾಡದ ಮಹಿಳೆಯರು ಕಡಿಮೆ ಸೆಕ್ಸ್ ಡ್ರೈವ್ ಅನ್ನು ಹೊಂದುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಸಂಶೋಧನೆ ತೋರಿಸಿದೆ. ಸೆಕ್ಸ್ ಬಗ್ಗೆ ಮಾತನಾಡಲು ನಿಮಗೆ ಕಷ್ಟವಾದರೂ ಸಹ ನೀವು ನಿಮ್ಮ ಸಂಗಾತಿಯೊಂದಿಗೆ ಈ ಬಗ್ಗೆ ಮಾತನಾಡುವುದು ಉತ್ತಮ. ಇದರಿಂದ ಚಳಿಗಾಲದಲ್ಲೂ ಮೈ ಬೆವರುವಂತಹ ಅನುಭವ ಪಡೆಯಬಹುದು.
ಮಲಗುವ ಕೋಣೆಯಲ್ಲಿ ಬೆಚ್ಚಗಿಡಲು ಏನು ಮಾಡಬೇಕು ?
ಮಲಗುವ ಕೋಣೆಯಲ್ಲಿ ಮೇಣದ ಬತ್ತಿಯನ್ನು ಬೆಳಗಿಸಿ.
ಹಸ್ತಮೈಥುನ (masturbation) ಮಾಡಿಕೊಳ್ಳಿ.
ನಿಮ್ಮ ಕಲ್ಪನೆಗಳು ಅಲೆದಾಡಲಿ.
ಸಂಗಾತಿಯೊಂದಿಗೆ ಸ್ವಲ್ಪ ಡರ್ಟಿ ಸಂಭಾಷಣೆ ನಡೆಸಿ.
ನಿಮಗಾಗಿ ಮತ್ತು ನಿಮ್ಮ ಸಂಗಾತಿಗಾಗಿ ಕೆಲವು ಕ್ಷಣಗಳನ್ನು ನಿಗದಿಪಡಿಸಿ.
ಸಂಗಾತಿಯೊಂದಿಗೆ ಹಾಸಿಗೆಯ ಮೇಲೆ ಆಟಗಳನ್ನು ಆಡಿ.

Leave A Reply

Your email address will not be published.