ಪುತ್ತೂರು ಗ್ರಾಮಾಂತರ ಕ್ರೀಡಾಕೂಟ ;ಬುಶ್ರಾ ಕಾವು ಶಾಲೆಗೆ ಸಮಗ್ರ ಪ್ರಶಸ್ತಿ

ಪೆರ್ಲಂಪಾಡಿ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ಗ್ರಾಮಾಂತರ ಕ್ರೀಡಾಕೂಟ ನವಂಬರ್ 11 ರಂದು ನಡೆಯಿತು. ಈ ಕ್ರೀಡಾಕೂಟದಲ್ಲಿ 29 ಪದಕಗಳನ್ನು ಪಡೆದು ಬುಶ್ರಾ ವಿದ್ಯಾಸಂಸ್ಥೆ ಕಾವು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿರುತ್ತದೆ.ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಚಾಂಪಿಯನ್ 14 ವಯೋಮಾನ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಪಡೆದಿರುತ್ತಾರೆ .

 

ವೈಯುಕ್ತಿಕ ಚಾಂಪಿಯನ್ ಪಡೆದುಕ್ಕೊಂಡ ಸಂಸ್ಥೆಯ ವಿದ್ಯಾರ್ಥಿ ಗಳು : ಪ್ರೌಢ ಶಾಲಾ ವಿಭಾಗದ ಸುಚೇಶ್ ನೆಟ್ಟಾರು , ನಿಹಾಲ್ , ಪ್ರಾಥಮಿಕ ವಿಭಾಗದ ರುಮೈಸ್ ಇವರು ವೈಯುಕ್ತಿಕ ಚಾಂಪಿಯನ್ ಪಡೆದುಕ್ಕೊಂಡವರು .

ತಾಲೂಕು ಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳು :-  ಸುಚೇಶ್ , ಕವನ್ , ಚೇತನ್ , ಬಾಸಿತ್ , ನಿಹಾಲ್ , ಜಿತೇಶ್ , ಅಫ್ಲಾಲ್ , ಫರ್ಹಾನ್ , ಔಫ್ , ಹರ್ಷನ್ , ರುಮೈಸ್ , ಶಮೀಮ್ , ಫಝಲ್ , ಅನ್ಶಿಫ್ , ಅಫ್ರೀನಾ ಇವರುಗಳು ತಾಲೂಕು ಮಟ್ಟಕ್ಕೆ ಆಯ್ಕೆ ಗೊಂಡವರು .

ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ,ಮಾಜಿ ರಾಜ್ಯ ಅಥ್ಲೆಟಿಕ್ ಚಂದ್ರಶೇಖರ್ ನೆಟ್ಟಾರು ತರಬೇತಿಯನ್ನು ನೀಡಿರುತ್ತಾರೆ. ಆಯ್ಕೆ ಗೊಂಡ ವಿದ್ಯಾರ್ಥಿ ಗಳೊಂದಿಗೆ ಬುಶ್ರಾ ವಿದ್ಯಾ  ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಬುಶ್ರಾ , ಶಾಲಾ ಮುಖ್ಯೋಪಾಧ್ಯಯರಾದ ಅಮರನಾಥ ಬಿ ಪಿ , ಸಂಸ್ಥೆಯ ಆಡಳಿತ ನಿರ್ದೇಶಕ ರಾದ ಬದ್ರುದ್ದೀನ್ ಬುಶ್ರಾ ,ಶಾಲಾ ಶಿಕ್ಷಕ ಉಮೇಶ್ ನಾಯ್ಕ್ ಉಪಸ್ಥಿತರಿದ್ದರು.

Leave A Reply

Your email address will not be published.