ಕೋಳಿ ಸಾಕಾಣೆದಾರರೇ ಗಮನಿಸಿ | ನಿಮಗಿದೆ ಇಲ್ಲೊಂದು ಮಹತ್ವದ ಮಾಹಿತಿ

ಉದ್ಯೋಗ ಇದ್ದರೆ ಜೀವನವನ್ನು ನಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನ ಹಲವೆಡೆ ನಿರುದ್ಯೋಗ ಸಮಸ್ಯೆ ತುಂಬಾ ಕಾಡುತ್ತಿದ್ದು ಉದ್ಯೋಗ ಹುಡುಕುವ ಬದಲು ಕೆಲವರು ಸಣ್ಣ ಉದ್ಯಮಗಳನ್ನು ಆರಂಭಿಸಿ ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಅಂದರೆ ಹೈನುಗಾರಿಕೆ ಜೊತೆ ಮಾಡಬಹುದಾದ ಆಡು ಸಾಕಣೆ, ಕುರಿ ಸಾಕಣೆ ಮತ್ತು ಕೋಳಿ ಸಾಕಣೆಯಲ್ಲಿ ಸಾಕಷ್ಟು ಲಾಭವನ್ನು ಗಳಿಸಬಹುದಾಗಿದೆ.

 

ಈ ಮೇಲಿನ ಉದ್ಯಮಗಳು ತುಂಬಾ ಲಾಭಕಾರಿಯೂ ಆಗಿದೆ ಮತ್ತು ವೆಚ್ಚ ಕಡಿಮೆ ಆಗಿರುವುದರಿಂದ ಮತ್ತು ಹೆಚ್ಚು ಆದಾಯವನ್ನು ಹೊಂದಿದ್ದು ಸುಲಭವಾಗಿ ಯಾರು ಬೇಕಾದರೂ ಈ ಉದ್ಯಮಗಳನ್ನು ಪ್ರಾರಂಭಿಸಬಹುದಾಗಿದೆ. ಇವುಗಳಲ್ಲಿ ಈ ಕುರಿತಾಗಿ
ಕೋಳಿ ಸಾಕಾಣೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಕೋಳಿ ಸಾಕಾಣಿಕೆಗೆ ಬಳಕೆ ಮಾಡುವ ಕೃಷಿ ಭೂಮಿಗೆ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಿ ಸುತ್ತೋಲೆ ಹೊರಡಿಸಲಾಗಿದೆ.

ಭೂ ಪರಿವರ್ತನೆ ಮಾಡುವ ಸಂಬಂಧ ಕೋಳಿ ಸಾಕಾಣಿಕೆದಾರರಿಗೆ ಅನಾನುಕೂಲವಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಹೀಗಾಗಿ ಕೋಳಿ ಸಾಕಣೆಯನ್ನು ಕೃಷಿ ಎಂದು ವ್ಯಾಖ್ಯಾನಿಸಲಾಗಿದ್ದು, ಇದಕ್ಕಾಗಿ ಬಳಸುವ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸುವ ಅಗತ್ಯ ಇಲ್ಲ ಎಂದು ಕಂದಾಯ ಇಲಾಖೆ ತನ್ನ ಸುತ್ತೋಲೆಯಲ್ಲಿ ವರದಿ ನೀಡಿದೆ.

Leave A Reply

Your email address will not be published.