ಮಂಗಳೂರು : ನಾಳೆ ಸಿವಿಲ್ ನ್ಯಾಯಾಲಯದಿಂದ ಮಳಲಿ ಮಸೀದಿ ವಿವಾದ ಕುರಿತು ತೀರ್ಪು

ಮಂಗಳೂರು: ಮಳಲಿ ಮಸೀದಿ ಕಟ್ಟಡದಲ್ಲಿ ದೇವಾಲಯ ಹೋಲುವ ರಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ತೀರ್ಪನ್ನು ಮಂಗಳೂರಿನ ನ್ಯಾಯಾಲಯ ಬುಧವಾರ (ನ.9 ರಂದು) ನೀಡಲಿದೆ.

 

ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವಂತೆ ವಿಎಚ್‌ಪಿ ಮನವಿ ಮಾಡಿತ್ತು. ಆ ಬಳಿಕ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ವಕ್ಫ್ ಮತ್ತು ಸಿವಿಲ್ ನ್ಯಾಯಾಲಯದ ಅಧಿಕಾರದ ಬಗ್ಗೆ ವಾದ ವಿವಾದ ನಡೆದು ಕಳೆದ ಅಕ್ಟೋಬರ್ 17ರಂದು ಆದೇಶವನ್ನು ಮತ್ತೆ ನವೆಂಬರ್ 9ಕ್ಕೆ ಮುಂದೂಡಿತ್ತು.

ಅದರಂತೆ ನಾಳೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಲಿದೆಯೇ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.