ಇನ್ನು ಮುಂದೆ ಮಹಿಳೆಯರಿಗೆ ಈ ರೀತಿ ಬಯ್ಯಬಾರದು | ಈ ಪದ ಬಳಸಿದರೆ ಲೈಂಗಿಕ ದೌರ್ಜನ್ಯಕ್ಕೆ ಸಮ- ಕೋರ್ಟ್ ಹೇಳಿಕೆ

Share the Article

ಮಹಿಳೆಗೆ ಬಯ್ಯುವ ಸಂದರ್ಭದಲ್ಲಿ F**k off ಶಬ್ದ ಬಳಕೆ ಮಾಡಿದರೆ ಅದು ಲೈಂಗಿಕ ದೌರ್ಜನ್ಯಕ್ಕೆ ಸಮ ಎಂದು ದೆಹಲಿ ಕೋರ್ಟ್ ಹೇಳಿದೆ. ಈ ಮೂಲಕ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾದ ಎಫ್‌ಐಆ‌ರ್ ರದ್ಧತಿಗೆ ನಿರಾಕರಿಸಿದೆ.

‘ಈ ಶಬ್ದವನ್ನು ವಿದೇಶಗಳಲ್ಲಿ ಬಳಸುತ್ತಾರೆ. ಇದು ಭಾರತೀಯ ಸಮಾಜದಲ್ಲಿ ಬಳಕೆಯಾಗದ ಪದ. ಇದು ಅಶ್ಲೀಲ ಪದವಾಗಿದೆ. ಇದನ್ನು ಬಳಸುವುದು ಅಕ್ಷಮ್ಯ’ ಎಂದು ಕೋರ್ಟ್ ಹೇಳಿದೆ.

2019ರಲ್ಲಿ ತಮ್ಮ ವಿರುದ್ಧ ಈ ಪದ ಬಳಸಿದ್ದಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ಮಹಿಳೆ ಸಲ್ಲಿಸಿದ್ದ ದೂರು ಸರಿಯಾಗಿದೆ ಎಂದು ಕೋರ್ಟ್ ಹೇಳಿದೆ. ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ಧತಿಗೆ ಕೋರಿದ್ದ ವ್ಯಕ್ತಿಯ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.

ಆರೋಪಿಯು ಇದೇ ಮಹಿಳೆಗೆ “ಬಜಾರು ಔರತ್’ ಎಂದು ನಿಂದಿಸಿದ್ದು, ನಂತರ ಈ ಪದವನ್ನೂ ಬಳಸಿದ್ದ. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲು ಮಾಡಲಾಗಿತ್ತು.

‘ಈ ಪದವು ಲೈಂಗಿಕ ಶೋಷಣೆಯಾಗುವುದಿಲ್ಲ. ಕೇಂಬ್ರಿಡ್ಜ್ ನಿಘಂಟಿನಲ್ಲಿ ಈ ಪದಕ್ಕೆ ತೊರೆಯುವುದು ಅಥವಾ ದೂರ ಹೋಗುವುದು ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ ಇದು ಅಸಭ್ಯ ಪದ ಎನ್ನುವುದು ಸರಿಯಲ್ಲ’ ಎಂದು ವಕೀಲರು ವಾದಿಸಿದ್ದರು. ಆದರೆ ಇದು ಭಾರತೀಯ ಸಂಸ್ಕೃತಿಯಲ್ಲ, ಭಾರತದ ಸಮಾಜದಲ್ಲಿ ಇದೊಂದು ಕೆಟ್ಟ ಪದ ಎಂದಿರುವ ಕೋರ್ಟ್, ಎಫ್‌ಐಆರ್ ರದ್ದು ಮಾಡಲು ಒಪ್ಪಲಿಲ್ಲ.

Leave A Reply