Post Office Jobs : ಅಂಚೆ ಇಲಾಖೆಯಲ್ಲಿ ಉದ್ಯೋಗ | ಈ ಕೂಡಲೇ ಅರ್ಜಿ ಸಲ್ಲಿಸಿ! ಅರ್ಜಿ ಸಲ್ಲಿಕೆಗೆ 18/11/2022 ಕೊನೆಯ ದಿನಾಂಕ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(India Post Payments Bank-IPPB) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಒಟ್ಟು 41 ಅಸಿಸ್ಟೆಂಟ್ ಮ್ಯಾನೇಜರ್(Assistant Manager) ಮತ್ತು ಮ್ಯಾನೇಜರ್(Manager) ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಹಾಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022
ಅರ್ಜಿ ಸಲ್ಲಿಸಲು & ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: 18/11/2022

ಸಂಸ್ಥೆ : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್
ಹುದ್ದೆಯ ಹೆಸರು : ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್
ಒಟ್ಟು ಹುದ್ದೆ : 41
ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ ಬಗೆ: ಆನ್​ಲೈನ್​

ಹುದ್ದೆಗಳ ವಿವರ : ಅಸಿಸ್ಟೆಂಟ್ ಮ್ಯಾನೇಜರ್(IT)-18
ಮ್ಯಾನೇಜರ್(IT)-13
ಸೀನಿಯರ್ ಮ್ಯಾನೇಜರ್(IT)-8
ಚೀಫ್​ ಮ್ಯಾನೇಜರ್(IT)-2

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಸಂಸ್ಥೆ/ಬೋರ್ಡ್​​ನಿಂದ ಕಡ್ಡಾಯವಾಗಿ ಇನ್ಫರ್ಮೇಶನ್ ಟೆಕ್ನಾಲಜಿ ವಿಭಾಗದಲ್ಲಿ ಕಡ್ಡಾಯವಾಗಿ ಬಿಸಿಎ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು ಅಥವಾ ಕಂಪ್ಯೂಟರ್​ ಸೈನ್ಸ್​ ವಿಭಾಗದಲ್ಲಿ ಎಂಸಿಎ, ಎಂಎಸ್ಸಿ ಪೂರ್ಣಗೊಳಿಸಿರಬೇಕು.

ಉದ್ಯೋಗದ ಸ್ಥಳ: ಚೆನ್ನೈ, ನವದೆಹಲಿ, ಮುಂಬೈ

ವಯೋಮಿತಿ: ಅಸಿಸ್ಟೆಂಟ್ ಮ್ಯಾನೇಜರ್(IT)- 20 ರಿಂದ 30 ವರ್ಷ
ಮ್ಯಾನೇಜರ್(IT)- 23 ರಿಂದ 35 ವರ್ಷ
ಸೀನಿಯರ್ ಮ್ಯಾನೇಜರ್(IT)-26 ರಿಂದ 35 ವರ್ಷ
ಚೀಫ್​ ಮ್ಯಾನೇಜರ್(IT)- 29 ರಿಂದ 45 ವರ್ಷ

ವಯೋಮಿತಿ ಸಡಿಲಿಕೆ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ:
ಅಸೆಸ್ಮೆಂಟ್ , ಗ್ರೂಪ್ ಡಿಸ್ಕಸನ್, ಆನ್​ಲೈನ್​ ಟೆಸ್ಟ್​,
ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ ippbonline.com ಗೆ ಭೇಟಿ ನೀಡಬಹುದು.

Leave A Reply

Your email address will not be published.