ಗೋವಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ‘ಓಲ್ಡ್ ಮಾಂಕ್ ಚಹಾ’!

ಗೋವಾ ಪ್ರವಾಸ ಪ್ರಿಯರ ನೆಚ್ಚಿನ ತಾಣ. ಗೋವಾಕ್ಕೆ ವರ್ಷದ ಯಾವ ಕಾಲದಲ್ಲೂ ಹೋಗಬಹುದು. ಪ್ರತಿ ಋತುವಿನಲ್ಲೂ ಗೋವಾ ತನ್ನದೇ ಆದ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ. ಗೋವಾ ಸುಂದರ ಪ್ರವಾಸದ ಅನುಭವವನ್ನು ನೀಡುತ್ತದೆ. ಹೀಗಾಗಿ, ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಮಾನ್ಯವಾಗಿ ಗೋವಾ ಎಂದರೆ ಎಲ್ಲರೂ ಬೀಚ್ ಎನ್ನುತ್ತಾರೆ. ಆದರೆ ಗೋವಾದಲ್ಲಿ ಬೀಚ್ ಬಿಟ್ಟು ಬೇರೆ ಬೆರೆ ಸ್ಥಳಗಳಿವೆ, ಫಾಲ್ಸ್ ,ಕೋಟೆಗಳು ಹೀಗೆ ಇಲ್ಲಿ ನೋಡಲು ಬಹಳಷ್ಟು ಪ್ರವಾಸಿ ತಾಣಗಳಿವೆ.

ಹೌದು. ಕೇವಲ ಪ್ರವಾಸಿ ತಾಣವಷ್ಟೇ ಅಲ್ಲದೆ, ಹಲವು ವಿಭಿನ್ನ ಅನುಭವವನ್ನು ಪಡೆಯಬಹುದು. ಇಲ್ಲಿ ಮದ್ಯಕ್ಕೆ ವಿಶೇಷ ಆದ್ಯತೆ ಇದ್ದು, ಅದನ್ನು ಸವಿಯುವುದಕ್ಕಾಗಿಯೇ ದೇಶ-ವಿದೇಶಗಳಿಂದ ಜನರು ಬರುತ್ತಾರೆ. ಆದರೀಗ ವಿಡಿಯೋ ಒಂದು ವೈರಲ್ ಆಗಿದ್ದು, ಇದು ಜನರನ್ನು ಗೋವಾದತ್ತ ಕೈ ಬೀಸಿ ಕರೆಯುತ್ತಿದೆ. ಅಷ್ಟಕ್ಕೂ ಏನದು ಎಂಬುದನ್ನ ನೀವೇ ನೋಡಿ..

ಮದ್ಯವೊಂದನ್ನು ತಯಾರಿಸುವ ವಿಡಿಯೋ ಇದೀಗ ವೈರಲ್​ ಆಗಿದ್ದು, ಇದು ಚಹಾ ಮತ್ತು ಓಲ್ಡ್ ಮಾಂಕ್ ರಮ್‌ ಎರಡನ್ನೂ ಮಿಶ್ರಣ ಮಾಡಿ ಮಾರಾಟ ಮಾಡುವ ವಿಡಿಯೋ ಆಗಿದೆ. ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸಿಂಕ್ವೆರಿಮ್ ಬೀಚ್‌ನಲ್ಲಿ ಕಂಡುಬಂದಿದೆ.

ವ್ಯಾಪಾರಿಯೊಬ್ಬ ಮಣ್ಣಿನ ಮಡಕೆಯನ್ನು ಬಿಸಿಮಾಡುವ ಮೂಲಕ ಮತ್ತು ಅದನ್ನು ಇಕ್ಕಳದಿಂದ ಎತ್ತಿಕೊಳ್ಳುತ್ತಾರೆ. ನಂತರ ಆತ ಮಡಕೆಗೆ ಬೆಂಕಿ ಹಚ್ಚುತ್ತಾನೆ ಮತ್ತು ಬಾಟಲಿಯಿಂದ ಓಲ್ಡ್ ಮಾಂಕ್ ರಮ್ ಅನ್ನು ಸೇರಿಸುತ್ತಾನೆ. ನಂತರ ಟೀ ಪಾಟ್​ನಿಂದ ಚಹಾವನ್ನು ಮಿಶ್ರಣಕ್ಕೆ ಸುರಿಯಲಾಗುತ್ತದೆ. ಈ ರೀತಿ ಪಾನೀಯ ಸಿದ್ಧವಾಗುತ್ತದೆ.

ಇದನ್ನು ನೋಡಿದ ಮದ್ಯ ಪ್ರಿಯರು ಬಾಯಲ್ಲಿ ನೀರು ಸುರಿಸುತ್ತಿದ್ದು, ಹಲವಾರು ರೀತಿಯ ಕಮೆಂಟ್​ ಹಾಕುತ್ತಿದ್ದಾರೆ. ಇದನ್ನು ಒಮ್ಮೆಯಾದರೂ ಸೇವಿಸಲೇಬೇಕು ಎಂದು ಹಲವರು ಹೇಳುತ್ತಿದ್ದಾರೆ. ರಸ್ತೆ ಬದಿ ವ್ಯಾಪಾರಿಯೊಬ್ಬರು ಈ ಮಿಶ್ರಣವನ್ನು ತಯಾರಿಸುತ್ತಿದ್ದು, ನೆಟ್ಟಿಗರ ಬಾಯಲ್ಲಿ ನೀರು ತರಿಸಿದೆ.

https://twitter.com/DrVW30/status/1588171508362665984?s=20&t=KXo6GZ0FMXzB_RvRwVRVUg

Leave A Reply

Your email address will not be published.