ಮುಕ್ಕೂರು : ಕಾನಾವು ತಿರುಮಲೇಶ್ವರ ಭಟ್ ಇವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮುಕ್ಕೂರು : ಕಾನಾವು ತಿರುಮಲೇಶ್ವರ ಭಟ್ ಇವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮುಕ್ಕೂರು: ಬೆಳ್ಳಾರೆ ರೋಟರಿ ಕ್ಲಬ್ ಟೌನ್, ಕಾನಾವು ಪ್ಯಾಮಿಲಿ ಹಾಗೂ ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಹಾಸ್ಪಿಟಲ್ ಸಹಯೋಗದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾನಾವು ತಿರುಮಲೇಶ್ವರ ಭಟ್ ಇವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರವು ನ. 6 ರಂದು ಮುಕ್ಕೂರು ಸ.ಹಿ.ಪ್ರಾ.ಶಾಲೆ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅನಿತಾ ಟಿ ಭಟ್ ಕಾನಾವು ಉದ್ಘಾಟಿಸಿದರು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಕೇಶವ ಮೂರ್ತಿ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದು, ತಿರುಮಲೇಶ್ವರ ಭಟ್ ಅವರು ಸಾಮಾಜಿಕ ಕ್ಷೇತ್ರದಲ್ಲಿ ಕಾಳಜಿಯುಳ್ಳ ವ್ಯಕ್ತಿಯಾಗಿದ್ದು ಅವರ ಹೆಸರಿನಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದರಿಂದ ಜನರಿಗೆ ಪ್ರಯೋಜನ ದೊರೆತಿದೆ ಎಂದರು.
ಪೆರುವಾಜೆ ಗ್ರಾ.ಪಂ ಅಧ್ಯಕ್ಷ ಹಾಗೂ ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯದ ಕಾಲಘಟ್ಟದಲ್ಲಿ ಹಮ್ಮಿಕೊಂಡ ಈ ಶಿಬಿರ ಅರ್ಥಪೂರ್ಣ. ಇಂತಹ ಶಿಬಿರದ ಬಗ್ಗೆ ಯೋಜನೆ ರೂಪಿಸಿದ ಕಾನಾವು ಪ್ಯಾಮಿಲಿ ಹಾಗೂ ಸಂಘ- ಸಂಘಗಳ ಪ್ರಯತ್ನ ಸಮಾಜಕ್ಕೆ ಮಾದರಿ ಎಂದರು.
ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಜೆಸನ್ ಮಾತನಾಡಿ, ಹತ್ತಾರು ಕಡೆಗಳಲ್ಲಿ ಶಿಬಿರ ಆಯೋಜಿಸಿದ್ದು ಇದಕ್ಕೆ ಆಸ್ಪತ್ರೆಯ ವತಿಯಿಂದ ಖರ್ಚು ವೆಚ್ಚ ಭರಿಸುತ್ತಿದೆ. ಔಷಧ ಸೇರಿದಂತೆ ಬೇರೆ ಬೇರೆ ಸವಲತ್ತುಗಳನ್ನು ನೀಡಲಾಗುತ್ತಿದ್ದು ಗ್ರಾಮೀಣ ಪ್ರದೇಶದ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದ ಅವರು ಕ್ಷೇಮ ಹೆಲ್ತ್ ಕಾರ್ಡ್ ಕುರಿತು ವಿವರ ನೀಡಿದರು.
ಮುಕ್ಕೂರು ಸ.ಹಿ.ಪ್ರಾ.ಶಾಲೆಯ ಎಸ್ ಡಿಎಂಸಿ ಅದ್ಯಕ್ಷ ಜಯಂತ ಗೌಡ ಕುಂಡಡ್ಕ ಉಪಸ್ಥಿತರಿದ್ದರು. ನರಸಿಂಹ ತೇಜಸ್ವಿ ಕಾನಾವು ವಂದಿಸಿದರು. ಡಾ.ರಾಮಕಿಶೋರ್, ಡಾ.ನರಸಿಂಹ ಶರ್ಮಾ ಕಾನಾವು ಸಹಕರಿಸಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಸಹಕರಿಸಿದರು.
150 ಕ್ಕೂ ಅಧಿಕ
ಮಂದಿಯ ತಪಾಸಣೆ
ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.00 ರ ತನಕ ನೋಂದಣಿ ನಡೆಯಿತು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ (ಶುಗರ್) ತಪಾಸಣೆ, ಇಸಿಜಿ, ಇತರೆ ಸಾಮಾನ್ಯ ವೈದ್ಯಕೀಯ ವಿಭಾಗ, ಕಿವಿ-ಮೂಗು-ಗಂಟಲು ವಿಭಾಗ, ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ, ಸ್ತ್ರೀರೋಗ ಚಿಕಿತ್ಸಾ ವಿಭಾಗ, ಕಣ್ಣಿನ ವಿಭಾಗದಲ್ಲಿ ತಪಾಸಣೆ ಚಿಕಿತ್ಸೆ ನೀಡಲಾಯಿತು. ಸುಮಾರು 150 ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದುಕೊಂಡರು. ನೋಂದಣಿ ವಿಭಾಗದಲ್ಲಿ ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಹಕಾರ ನೀಡಿದರು.