ಪ್ರವೀಣ್ ನೆಟ್ಟಾರ್ ಹತ್ಯಾ ಪ್ರಕರಣ | ಬಂಧಿತನ ಬಿಡುಗಡೆ, ಹೂವಿನ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದ PFI ಕಾರ್ಯಕರ್ತರು

Share the Article

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬಂಧಿಸಿದ ಪಿಎಫ್‌ಐ ಕಾರ್ಯದರ್ಶಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ವಿಚಾರಣೆ ಎದುರಿಸಿ ಬಂದ ಪಿಎಫ್‌ಐ ಕಾರ್ಯಕರ್ತನಿಗೆ ಹೂವಿನ ಹಾರ ಹಾಕಿ ಗ್ರಾಂಡ್ ಸ್ವಾಗತ ಮಾಡಲಾಗಿದೆ.

ಪಿಎಫ್‌ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯನ್ನು ನಿನ್ನೆ ಬಂಧಿಸಲಾಗಿತ್ತು. ಸುಲೆಮಾನ್ ಎಂಬುವನನ್ನು ಮೈಸೂರಿಗೆ ಆಗಮಿಸಿದ ಎನ್ಐಎ ತಂಡ ವಶಕ್ಕೆ ಪಡೆದು ಗೌಪ್ಯ ಸ್ಥಳಕ್ಕೆ ಕರೆದೊಯ್ದಿತು. ಅಲ್ಲಿ ನಿನ್ನೆ ದಿನವಿಡೀ ವಿಚಾರಣೆ ನಡೆಸಿತ್ತು.
ವಿಚಾರಣೆ ನಡೆಸಿದ ನಂತರ ಸಂಜೆ ಸುಲೆಮಾನನ್ನು ವಾಪಸ್ ಕಳಿಸಿತ್ತು.

ತನಿಖಾ ದಳ ವಿಚಾರಣೆ ಎದುರಿಸಿ ಬಂದ ಪಿಎಫ್‌ಐ ಕಾರ್ಯಕರ್ತನಿಗೆ ಸ್ವಾಗತ ಕೋರಿದ್ದಾರೆ. ಆತನಿಗೆ ಹೂವಿನ ಹಾರ ಹಾಕಿ ಸ್ವಾಗತ ಮಾಡಲಾಗಿದೆ. ಈ ಘಟನೆ ಮೈಸೂರಿನ ಮಂಡಿ ಮೊಹಲ್ಲಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave A Reply