KVS : ಕೆವಿಎಸ್ ನಿಂದ 4 ಸಾವಿರಕ್ಕಿಂತ ಹೆಚ್ಚು ಉದ್ಯೋಗ| ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆ ದಿನ.
ಕೇಂದ್ರಿಯ ವಿದ್ಯಾಲಯ ಸಂಘಟನೆಯು (ಕೆವಿಎಸ್) 4000 ಕ್ಕೂ ಅಧಿಕ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತರು ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದು
ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09-11-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-11-2022
ಅರ್ಜಿ ಶುಲ್ಕ ಎಷ್ಟು?
ಪ್ರಾಂಶುಪಾಲ, ಉಪ-ಪ್ರಾಂಶುಪಾಲ ಹುದ್ದೆಗಳಿಗೆ ರೂ.1500, ಇತರೆ ಹುದ್ದೆಗಳಿಗೆ ರೂ.1000 ಅರ್ಜಿ ಶುಲ್ಕ ಪಾವತಿಸಬೇಕು.
ಹುದ್ದೆಗಳ ವಿವರ
ಪ್ರಾಂಶುಪಾಲ : 278
ಉಪ-ಪ್ರಾಂಶುಪಾಲ: 176
ಹಣಕಾಸು ಅಧಿಕಾರಿ : 07
ಸೆಕ್ಷನ್ ಆಫೀಸರ್ : 22
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) : 1200
ತರಬೇತಿ ಪದವಿ ಉಪನ್ಯಾಸಕರು(ಟಿಜಿಟಿ) : 2154
ಮುಖ್ಯೋಪಾಧ್ಯಾಯರು : 237
ಒಟ್ಟು ಹುದ್ದೆಗಳು : 4014
ವಿದ್ಯಾರ್ಹತೆ :
ಪ್ರಾಂಶುಪಾಲ : ಪಿಜಿ, ಬಿ.ಇಡಿ ಜತೆಗೆ 8 ವರ್ಷ ಕಾರ್ಯಾನುಭವ.
ಉಪ-ಪ್ರಾಂಶುಪಾಲ: ಪಿಜಿ, ಬಿ.ಇಡಿ ಜತೆಗೆ 5 ವರ್ಷ ಕಾರ್ಯಾನುಭವ.
ಹಣಕಾಸು ಅಧಿಕಾರಿ : ಪದವಿ ಜತೆಗೆ 4 ವರ್ಷ ಕಾರ್ಯಾನುಭವ.
ಸೆಕ್ಷನ್ ಆಫೀಸರ್ : ಪದವಿ ಜತೆಗೆ 4 ವರ್ಷ ಕಾರ್ಯಾನುಭವ.
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) : ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ಶಿಕ್ಷಣ.
ಟ್ರೈನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ) : ಪದವಿ ಜತೆಗೆ ಬಿ.ಇಡಿ ಶಿಕ್ಷಣ ಪಡೆದಿರಬೇಕು.
ಮುಖ್ಯೋಪಾಧ್ಯಾಯರು : ಪಿಆರ್‌ಟಿ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ.
ಅಪ್ಲಿಕೇಶನ್ ಸಲ್ಲಿಸಲು ಗರಿಷ್ಠ ವಯೋಮಿತಿ
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) – 40 ವರ್ಷ.
ತರಬೇತಿ ಪದವಿ ಉಪನ್ಯಾಸಕರು(ಟಿಜಿಟಿ) – 35 ವರ್ಷ.
ಪ್ರಾಥಮಿಕ ಶಿಕ್ಷಕರು (ಪಿಆರ್‌ಟಿ) – 30 ವರ್ಷ.
ಪ್ರಾಂಶುಪಾಲರು – 50 ವರ್ಷ.
ಉಪ-ಪ್ರಾಂಶುಪಾಲರು – 45 ವರ್ಷ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ ವಿಳಾಸ : www.kvsangathan.nic.in
ಅರ್ಜಿ ಸಲ್ಲಿಸಲು ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.