ಸವಣೂರು ಆರೇಲ್ತಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಕಡಬ :  ಕಡಬ ತಾಲೂಕಿನ ಸವಣೂರು ಗ್ರಾಮದ ಆರೇಲ್ತಡಿ ರಸ್ತೆಯನ್ನು ದುರಸ್ತಿ ಪಡಿಸಲು ಒತ್ತಾಯಿಸಿ ಹಾಗೂ ಬೇಡಿಕೆ ಈಡೇರಿಸದಿದ್ದರೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.

ಬ್ಯಾನರ್ ‌ನಲ್ಲಿ ಈ ರೀತಿ ಬರೆಯಲಾಗಿದೆ.
30 ವರ್ಷದಿಂದ ಪ್ರತಿನಿಧಿಸಿದ ಶಾಸಕರು, ಸುಳ್ಯ 15ನೇ ವರ್ಷಕ್ಕೆ ಪ್ರತಿನಿಧಿಸುತ್ತಿರುವ ಸಂಸದರು, ಮಂಗಳೂರು ಹಾಗೂ ಜನಪ್ರತಿನಿಧಿಗಳಿಗೆ ಅರೇಲ್ತಡಿ ರಸ್ತೆಯ ಮೂಲಕ ಸಂಚರಿಸುವ ಜನರ ಕಟ್ಟಕಡೆಯ ವಿನಮ್ರ ವಿನಂತಿ.

ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟ ಸವಣೂರು ಗ್ರಾಮ ಪಂಚಾಯತಿಗೊಳಪಟ್ಟ ಚಾಪಳ್ಳದಿಂದ ಅರೇಲ್ತಡಿಗೆ ರಸ್ತೆ ಸಂಪರ್ಕಿಸುವ ಬಗ್ಗೆ ಮತದಾನ ಬಹಿಷ್ಕಾರ

ಅರೇಲ್ತಡಿಯಲ್ಲಿ 1ರಿಂದ 5 ನೇ ತನಕ ಸರಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಮತ್ತು ಸುಮಾರು ಅಂದಾಜು 90 ಮನೆಗಳಿರುತ್ತದೆ.

ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ (ಜಾಪಳದಿಂದ ಆರೇಳ್ತಡಿ) 1.5 ಕೀ. ಮೀ. ದೂರವಿದ್ದು ಈ ರಸ್ತೆಗೆ ಅಲ್ಪ ಸ್ವಲ್ಪ ಕಾಂಕ್ರೀಟ್ ಹಾಕಿದ್ದು ಬಾಕಿ ಉಳಿದ ರಸ್ತೆ ಸಂಪೂರ್ಣ ದುಸ್ಥಿತಿಯಲ್ಲಿರುತ್ತದೆ. ಆದ್ದರಿಂದ ಈ ಭಾಗದ ಜನರು ಇಲ್ಲಿಯ ಜನಪ್ರತಿನಿಧಿಗಳಿಗೆ, ಶಾಸಕರಿಗೆ, ಸಂಸದರಿಗೆ ತಿಳಿಯಪಡಿಸುವುದೇನೆಂದರೆ ಬರುವ ವಿಧಾನ ಸಭೆ ಚುನಾವಣೆಯೊಳಗೆ ಈ ರಸ್ತೆಯನ್ನು ಸಂಪೂರ್ಣವಾಗಿ ಸಲಪಡಿಸದಿದ್ದರೆ ಈ ಭಾಗದ ಬಹುತೇಕ ಜನರು ಮತದಾನ ಬಹಿಷ್ಕಾರ
ಮಾಡುವ ಮೂಲಕ ಪ್ರತಿಭಟನೆ ಮಾಡಲು ನಿರ್ಧರಿಸುತ್ತೇವೆ.
-ರಸ್ತೆಯ ಫಲಾನುಭವಿಗಳು ಈ ರೀತಿ ಅಳವಡಿಸಲಾಗಿದೆ.

Leave A Reply

Your email address will not be published.