ರೈತರಿಗೆ ಸಿಹಿಸುದ್ದಿ | ಸಾಲ ಮರುಪಾವತಿಸದಿದ್ದರೆ ಆಸ್ತಿ ಜಪ್ತಿ ಮಾಡದಂತೆ ಶೀಘ್ರ ಕಾನೂನು!
ರೈತರ ಕಷ್ಟ ಪರಿಸ್ಥಿತಿಯಲ್ಲಿ ಸಹಾಯವಾಗಿ ನಿಲ್ಲುವುದೇ ‘ಸಾಲ’. ಆದರೆ, ಕೆಲವೊಂದು ಬಾರಿ ಅಗತ್ಯ ಸಂದರ್ಭದಲ್ಲಿ ಸಾಲ ಸಿಕ್ಕರು, ಮತ್ತೆ ಮರುಪಾವತಿ ಮಾಡಲು ಆಗದೆ ಒದ್ದಾಡುತ್ತಾರೆ. ಈ ವೇಳೆ ಆಸ್ತಿ ಜಪ್ತಿ ಆಗುವ ಸಂದರ್ಭ ಕೂಡ ಇರುತ್ತದೆ. ಈ ತೊಂದರೆಯಿಂದ ನೋವುಂಟಾದ ರೈತರಿಗೆ ಸಿ.ಎಂ ಬೊಮ್ಮಾಯಿಯಿಂದ ಸಿಹಿಸುದ್ದಿ ದೊರಕಿದೆ.
ಹೌದು. ಸಹಕಾರ ಸಂಘಗಳು, ಬ್ಯಾಂಕ್ ಗಳಿಗೆ ರೈತರು ಸಾಲ ಮರುಪಾವತಿಸದಿದ್ದರೆ ಆಸ್ತಿ ಜಪ್ತಿ ಮಾಡದಂತೆ ಶೀಘ್ರವೇ ಕಾನೂನು ಜಾರಿಗೆ ತರಲಾಗುವುದು. ರೈತರಿಗೆ ಸಮಯಾವಕಾಶ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಕೃಷಿ ಮೇಳದಲ್ಲಿ ಮಾತನಾಡಿ, ರೈತರ ಸಾಲ ಮರುಪಾವತಿ ಆಗದಿದ್ದರೆ ಆಸ್ತಿ ಜಪ್ತಿ ಮಾಡದೇ ಸಮಯಾವಕಾಶ ನೀಡಬೇಕು ಎಂದು ಸಹಕಾರ ಮತ್ತು ಇತರೆ ಇಲಾಖೆಗಳಿಗೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಿ ಸಾಲ ಕಟ್ಟದ ರೈತರ ಆಸ್ತಿ ಜಪ್ತಿ ತಡೆಯಲು ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.