ತೆಂಗಿನಕಾಯಿ ಚಿಪ್ಪಿನಿಂದ ಕೊಬ್ಬರಿ ಬೇರೆ ಮಾಡುವುದು ಹೇಗೆ? |ಐಎಎಸ್ ಅಧಿಕಾರಿ ನೀಡಿದ ಸಲಹೆ ಇಲ್ಲಿದೆ ನೋಡಿ..
ತೆಂಗಿನಕಾಯಿ ಭಾರತೀಯರ ಅಡುಗೆ ಪದ್ಧತಿಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೆ ಎಲ್ಲಾ ಕಾರ್ಯಕ್ರಮಗಳಲ್ಲೂ ಅಗತ್ಯವಾಗಿದೆ. ಹೀಗಾಗಿ, ಇದರ ಬಳಕೆ ಪ್ರತಿಯೊಂದು ಕಡೆಯಲ್ಲೂ ಮುಖ್ಯ ಎನ್ನಬಹುದು. ಕೇವಲ ತೆಂಗಿನಕಾಯಿ ಮಾತ್ರವಲ್ಲದೇ ಅದರ ಎಣ್ಣೆ ಕೂಡ ಉಪಯುಕ್ತವಾಗಿದೆ.
ಆದ್ರೆ, ತೆಂಗಿನ ಎಣ್ಣೆಯನ್ನು ಮನೆಯಲ್ಲೇ ತಯಾರಿಸುವುದು ಕಷ್ಟದ ಸಂಗತಿ. ಹೀಗಾಗಿ, ಗಿರಣಿ ಅಂಗಡಿಗೆ ಕೊಂಡೋಗಿ ಎಣ್ಣೆ ತೆಗೆಸುವಂತಹ ಅನಿವಾರ್ಯ ಪರಿಸ್ಥಿತಿ. ಹೀಗೆ ವಿವರಿಸುತ್ತಾ ಹೋದ್ರೆ ತೆಂಗಿನಕಾಯಿಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಆಲೋಚನೆ ಬರುವುದು ಖಂಡಿತ. ಈ ತೆಂಗಿನಕಾಯಿಯಿಂದ ಉಂಟಾಗುವ ಕಷ್ಟ ಕೆಲವೊಂದು ಇದೆ. ಅವುಗಳಲ್ಲಿ ಕೊಬ್ಬರಿ ಪ್ರತ್ಯೇಕಿಸುವುದು ಕೂಡ ಒಂದು. ಹೌದು. ಕೆಲವೊಂದಷ್ಟು ಜನ ತೆಂಗಿನಕಾಯಿ ಚಿಪ್ಪಿನಿಂದ ಕೊಬ್ಬರಿ ಬೇರ್ಪಡಿಸಲು ವ್ಯಥೆ ಪಡುವಂತಾಗಿದೆ. ನಿಮ್ಮ ಕಷ್ಟ ಅರಿತುಕೊಂಡೆ, ಐಎಎಸ್ ಅಧಿಕಾರಿಯೋರ್ವರು ನಿಮ್ಮ ಕೆಲಸ ಸುಲಭವಾಗಿಸಿದ್ದಾರೆ. ಹೌದು. ನೀವು ಕೂಡ ಇನ್ಮುಂದೆ ಈ ರೀತಿ ಮಾಡಬಹುದು. ಅವರ ಸಲಹೆಯನ್ನು ನೀವೇ ನೋಡಿ..
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಎನ್ನುವವರು, ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಪ್ರತಿಯೊಬ್ಬ ತೆಂಗಿನಕಾಯಿ ಪ್ರಿಯ ಇಷ್ಟ ಪಡುವ ವಿಡಿಯೋ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ 16 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಆ ವಿಡಿಯೋದಲ್ಲಿ ಯಾವ ರೀತಿ ಎಣ್ಣೆ ತಯಾರಿಸಿದ್ದಾರೆ ಎಂಬುದನ್ನು ನೀವೇ ನೋಡಿ..
ಮೊದಲು ತೆಂಗಿನಕಾಯಿಯನ್ನ ಎರಡು ಭಾಗವಾಗಿ ಒಡೆಯಬೇಕು. ಆ ನಂತರ ಒಂದೊಂದೇ ಭಾಗವನ್ನ ಗ್ಯಾಸ್ ಸ್ಟೌವ್ ಬೆಂಕಿಯಲ್ಲಿ ಇಟ್ಟು ಬಿಸಿ ಮಾಡಬೇಕು. ಆಗ ಆ ಶಾಖದಿಂದ ಅದರೊಳಗೆ ಎಣ್ಣೆ ಅಂಶ ಬಿಡುಗಡೆಯಾಗುತ್ತೆ. ಆ ನಂತರ ಆ ಬಿಸಿ ತೆಂಗಿನಕಾಯಿಯನ್ನು ಕೆಲ ಸಮಯದವರೆಗೆ ನೀರಿನಲ್ಲಿ ಇಡಬೇಕು. ಈ ರೀತಿ ಮಾಡಿದ ನಂತರ ಕೆಲವೇ ಕೆಲ ನಿಮಿಷಗಳಲ್ಲಿ ಕೊಬ್ಬರಿ ಮತ್ತು ತೆಂಗಿನ ಕಾಯಿ ಚಿಪ್ಪು ಸುಲಭವಾಗಿ ಬೇರೆ-ಬೇರೆಯಾಗಿರುತ್ತೆ.