ಅಂತೂ ಇಂತೂ ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ವಿಜಯ್ ಜೋಡಿ!!!

ಟಾಲಿವುಡ್ ನ ಬೆಸ್ಟ್ ಜೋಡಿಯಾಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ( Vijay Devarakonda) ಅವರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಹೌದು, `ಗೀತಾ ಗೋವಿಂದಂ’ ಸಿನಿಮಾದ ಹಿಟ್ ಜೋಡಿ ತಮ್ಮ ಕರಾಮತ್ತನ್ನು ಮತ್ತೆ ತೆರೆಯ ಮೇಲೆ ನೀಡಲು ಮುಂದಾಗಿದ್ದಾರೆ. ಇದು ನಿಜಕ್ಕೂ ರಶ್ಮಿಕಾ ವಿಜಯ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು.

 

ಗೀತಾ ಗೋವಿಂದಂ' ಸಿನಿಮಾ ಮೂಲಕ ಟಿಟೌನ್‌ನಲ್ಲಿ ಸಖತ್ ಹೆಸರು ಮಾಡಿದ್ದ ಈ ಜೋಡಿ ವಿಜಯ್, ರಶ್ಮಿಕಾ, ಈಗ ಮತ್ತೆ ತೆರೆಯ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ.ಲೈಗರ್’ (Liger) ಸೋಲಿನಿಂದ ಭಾರೀ ಹೀನಾಯ ಸೋಲು ಕಂಡಿರುವ ವಿಜಯ್ ದೇವರಕೊಂಡಗೆ ಆತನ ಪ್ರೀತಿ ( ?) ರಶ್ಮಿಕಾ ಮುಂದಿನ ಸಿನಿಮಾದಲ್ಲಿ ಜೊತೆ ನೀಡುತ್ತಿದ್ದಾರೆ.

ಈ ಹಿಂದೆ `ಗೀತಾ ಗೋವಿಂದಂ’ ನಿರ್ದೇಶನ ಮಾಡಿರುವ ಪರಶುರಾಮ್ ಈ ಹೊಸ ಚಿತ್ರಕ್ಕೆ ಡೈರೆಕ್ಷನ್ ಮಾಡಲಿದ್ದಾರೆ. ಮತ್ತೆ ರೊಮ್ಯಾಂಟಿಕ್ ಕಥೆಯ ಮೂಲಕ ಮೋಡಿ ಮಾಡಲು ವಿಜಯ್, ರಶ್ಮಿಕಾ ರೆಡಿಯಾಗಿದ್ದಾರೆ.

ಅಂದ ಹಾಗೇ ಇತ್ತೀಚೆಗೆ ಭಾರೀ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದ ತಾನು ನಟಿಸಿದ ಸಿನಿಮಾ ‘ಲೈಗರ್’ ನಲ್ಲಿ ಭಾಗವಹಿಸಿದ್ದ ವಿಜಯ್ ಹಾಗೂ ಇತ್ತ ಕಡೆ ರಶ್ಮಿಕಾ ಅಭಿನಯದ ಗುಡ್ ಬೈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತ್ತು. ಹಾಗಾಗಿ ಇಬ್ಬರೂ ತಮ್ಮ ತಮ್ಮ ಸಿನಿಮಾದ ಸೋಲಿನ ಬೇಜಾರಿನಲ್ಲಿದ್ದು, ಇತ್ತೀಚೆಗಷ್ಟೇ ಮಾಲ್ಡೀವ್ಸ್ ಗೆ ಕೂಡ ತೆರಳಿದ್ದರು. ಅದು ಕೂಡಾ ಬೇರೆ ಬೇರೆ ರೀತಿಯಾಗಿ. ಇವರಿಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರ ಒಂದ್ ಕಡೆ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಹೊಸ ಪ್ರಾಜೆಕ್ಟ್ ವಿಷಯ ಕೂಡಾ ಚರ್ಚೆ ನಡೆಯುತ್ತಿದೆ. ಅಂದ ಹಾಗೇ ಈ ಜೋಡಿನಾ ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅಂತೂ ಕಾತುರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.