ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಪ್ರವೇಶಾತಿ ಆರಂಭ | ಈ ವಿಧಾನದ ಮೂಲಕ ಅರ್ಜಿ ಸಲ್ಲಿಸಿ!!!

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ 2022-23ನೇ ಸಾಲಿಗೆ ವಿವಿಧ ಸ್ನಾತಕೋತ್ತರ ಪ್ರವೇಶಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಸ್ನಾತಕೋತ್ತರ ಪೋಗ್ರಾಂಗಳ ಪ್ರವಶೇಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪ್ರೋಗ್ರಾಮ್‌ಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಂದ
ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ನಾತಕೋತ್ತರ ಪ್ರೋಗ್ರಾಮ್‌ಗಳು
• ಎಂ.ಎ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ನಿರ್ವಹಣೆ.
• ಎಂ.ಎ – ಸಾರ್ವಜನಿಕ ಆಡಳಿತ.
• ಎಂ.ಎ. – ಅರ್ಥಶಾಸ್ತ್ರ (ಅಭಿವೃದ್ಧಿ ಅರ್ಥಶಾಸ್ತ್ರ)
• ಎಂ.ಎಸ್.ಡಬ್ಲೂ. – ಸಮುದಾಯ ಅಭಿವೃದ್ಧಿ / ಸಮುದಾಯ ಆರೋಗ್ಯ,
• ಎಂ.ಕಾಂ. – ಉದ್ಯಮ ಶೀಲತೆ / ಸಹಕಾರ ನಿರ್ವಹಣೆ.
• ಎಂಎಸ್ಸಿ – ಜಿಯೋಇನ್ನಫಾರಮೆಟಿಕ್ಸ್.
• ಎಂ.ಎಸ್ಸಿ – ಕಂಪ್ಯೂಟರ್ ಸೈನ್ಸ್ ( ಡಾಟಾ ಅನೆಲೆಟಿಕ್ಸ್ ).
• ಎಂ.ಪಿ.ಹೆಚ್. – ಸಾರ್ವಜನಿಕ ಆರೋಗ್ಯ.
• ಎಂ.ಬಿ.ಎ. – ಗ್ರಾಮೀಣ ನಿರ್ವಹಣೆ ಅಥವಾ ಕೃಷಿ ವ್ಯವಹಾರ ನಿರ್ವಹಣೆ.

ಅರ್ಜಿ ಶುಲ್ಕ ವಿವರ : ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 200, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1/ ವಿಕಲಚೇತನ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕವನ್ನು “ಹಣಕಾಸು ಅಧಿಕಾರಿಗಳು. ಕೆ.ಎಸ್.ಆರ್. ಡಿ.ಪಿ.ಆರ್.ಯು. ಗದಗ” ಇವರ ಹೆಸರಿಗೆ ಡಿ.ಡಿ. ಪಡೆಯಬೇಕು. ನಂತರ ಡಿ.ಡಿ. ಹಿಂಬಾಗದಲ್ಲಿ ಅಭ್ಯರ್ಥಿಯ ಹೆಸರು, ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು.

ಅಥವಾ ಆನ್‌ಲೈನ್ ಮೂಲಕ ಕರ್ನಾಟಕ ರಾಜ್ಯ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ವಿವಿಯ ಎಸ್‌ಬಿ ಅಕೌಂಟ್ ನಂಬರ್-31400100007777, ಬ್ಯಾಂಕ್ ಆಫ್ ಬರೋಡಾ ಖಾತೆ, ಐಎಫ್‌ಎಸ್‌ ಕೋಡ್ –
BARBOGADAGX ಮುಖಾಂತರ ಸಹ ಅರ್ಜಿ ಶುಲ್ಕ
ಪಾವತಿಸಿ, ಟ್ರ್ಯಾನ್‌ಜ್ಯಾಕ್ಸನ್ ಐಡಿಯನ್ನು ಅರ್ಜಿಯಲ್ಲಿ ನಮೂದಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ : https://ksrdpru.ac.in ವೆಬ್ಸೈಟ್, ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿ ಹಾಗೂ ಅರ್ಜಿ ಶುಲ್ಕದ ದಾಖಲೆಯನ್ನು “ಕುಲಸಚಿವರು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಜನರಲ್ ಕಾರ್ಯಪ್ಪ ವೃತ್ತ, ಗದಗ ” ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18-11-2022.

ಅರ್ಜಿಯನ್ನು ನಿಗದಿಪಡಿಸಿದ ದಿನಾಂಕದೊಳಗೆ ಖುದ್ದಾಗಿ, ತ್ವರಿತ ಅಂಚೆ, ಕೊರಿಯರ್ ಮೂಲಕ ಕಳುಹಿಸಬಹುದು. ಮೇಲಿನ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ನಮೂನೆ, ಅರ್ಹತೆ ಮತ್ತು ಪ್ರೋಗ್ರಾಮ್‌ಗಳ ಶುಲ್ಕದ ಇತರೆ ಹೆಚ್ಚಿನ ಮಾಹಿತಿಗಾಗಿ ವಿವಿಯ ಅಧಿಕೃತ ವೆಬ್‌ಸೈಟ್ https://ksrdpru.ac.in ಗೆ ಭೇಟಿ ನೀಡಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.