Jio Scholarship : ಸಿಮ್ ಮಾತ್ರ ಅಲ್ಲ ಬರೋಬ್ಬರಿ 55 ಸಾವಿರ ಸ್ಕಾಲರ್ಶಿಪ್ ಕೂಡ ನೀಡುತ್ತೆ ಜಿಯೋ!!!

ಟೆಲಿಕಾಮ್ ದೈತ್ಯ ಕಂಪನಿಯಲ್ಲಿ ಒಂದಾದ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿ ಮೊಬೈಲ್ ಕ್ಷೇತ್ರದಲ್ಲಿ ನವೀನ ವೈಶಿಷ್ಟ್ಯತೆಯೊಂದಿಗೆ ಜನಪ್ರಿಯತೆ ಪಡೆದುಕೊಂಡಿರುವುದು ತಿಳಿದ ವಿಚಾರ.

 

ಈ ನಡುವೆ ಸಾಮಾಜಿಕ ಕಳಕಳಿಯನ್ನು ಕೂಡ ಹೊಂದಿದ್ದು, ರಿಲಯನ್ಸ್ (Reliance)​ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Scholarship) ನೀಡುತ್ತಿದೆ.

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸಲುವಾಗಿ ರಿಲಯನ್ಸ್ ಫೌಂಡೇಶನ್ (Reliance Foundation) ಅರ್ಜಿ ಆಹ್ವಾನಿಸಿದ್ದು, 10 ರಿಂದ ಪದವಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಸಹ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ಬೆಳವಣಿಗೆಯಲ್ಲಿ ಮುನ್ನಡೆಸಲು ಮತ್ತು ಮುಂಚೂಣಿಯಲ್ಲಿರಲು ಬಯಸುವ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು (SKill) ರಿಲಯನ್ಸ್ ಪೋಷಿಸಲು ಸಿದ್ದವಾಗಿದ್ದು, ಹಾಗಾಗಿ, ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಬೆಂಬಲಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ರಿಲಯನ್ಸ್​ ಜಿಯೋ , ಜಿಯೋ ಸ್ಕಾಲರ್‌ಶಿಪ್ 2022ರ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್​ಸೈಟ್​ jio.com ಭೇಟಿ ನೀಡಬೇಕು.ಈ ಸ್ಕಾಲರ್ರ್ಶಿಪ್ ಗೆ ಅರ್ಜಿ ಸಲ್ಲಿಕೆ ಮಾಡಲು ದಿನಾಂಕ 31 ಡಿಸೆಂಬರ್ 2022 ಕೊನೆ ದಿನಾಂಕವಾಗಿದೆ.ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ವಿದ್ಯಾರ್ಹತೆ 10 ಇಲ್ಲವೇ 11ಅಥವಾ 12 ಪದವಿಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳು SSLC: 70% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು. ಹಾಗೂ CBSE/ICSE: 85% ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.

11 ನೇ ತರಗತಿಯ ವಿದ್ಯಾರ್ಥಿಯಾಗಿದ್ದರೆ, 70% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು. ಹಾಗೂ CBSE/ICSE: 85% ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.

12 ನೇ ತರಗತಿಯವರಾಗಿದ್ದರೆ, 65% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು. ಹಾಗೂ CBSE/ICSE: 80% ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.

ಪದವಿಯವರಾದರೆ, ಆಯಾ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಕನಿಷ್ಠ 75% ಅಂಕ ಗಳಿಸಿರಬೇಕು.

ಸ್ನಾತಕೋತ್ತರ ಮಟ್ಟದವರಾದರೆ, ಆಯಾ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಕನಿಷ್ಠ 75% ಅಂಕ ಗಳಿಸಿರಬೇಕು.

ಈ ಮೇಲೆ ನಿಗದಿಪಡಿಸಿದಷ್ಟು ಅಂಕಗಳಿಸಿದ ವಿದ್ಯಾರ್ಥಿಗಳು ಅಪ್ಲೈ ಮಾಡಬಹುದು. ಈ ಮೇಲಿನ ಅಂಶಗಳನ್ನು ಆಧರಿಸಿ ಅಭ್ಯರ್ಥಿಗಳು ಅರ್ಹರಾದವರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಭಾರತದಾದ್ಯಂತ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಿ, ಈ ವಿದ್ಯಾರ್ಥಿ ವೇತನದ ಪ್ರಯೋಜನ ಪಡೆಯಬಹುದಾಗಿದೆ.

ಅಪ್ಲೈ ಮಾಡಲು ಬೇಕಾದ ಅಗತ್ಯ ದಾಖಲೆಗಳು: ಶಿಕ್ಷಣ ಅರ್ಹತಾ ಪ್ರಮಾಣಪತ್ರ, ಆರ್ಥಿಕ ದುರ್ಬಲ ವಿಭಾಗಶಾಲೆಯ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್, ಭಾವಚಿತ್ರಮೊಬೈಲ್ ನಂಬರ್, ಆಧಾರ್ ಕಾರ್ಡ್ ದಾಖಲೆಗಳು ಅವಶ್ಯಕವಾಗಿವೆ.

ತರಗತಿ 10/ 11/ 12/ ಪದವಿ/ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿ ವೇತನದ ಮೊತ್ತ: 10ನೇ ತರಗತಿ/ಪ್ರೌಢಶಾಲೆಗೆ – 35,000/ ರೂ ದೊರೆಯಲಿದೆ.

12ನೇ ತರಗತಿ – 45,000/ರೂ ಸ್ಕಾಲರ್ ಶಿಪ್ ಮೊತ್ತ ಹಾಗೂ 11ನೇ ತರಗತಿ – 38,000/-ರೂ ದೊರೆತರೆ, ಪದವಿ – 52,000/-ರೂ ದೊರೆಯಲಿದೆ. ಹಾಗೂ ಸ್ನಾತಕೋತ್ತರ ಪದವಿ – 55,000/- ರೂ ಮೊತ್ತದ ಸ್ಕಾಲರ್ ಶಿಪ್ ಪಡೆಯಬಹುದು.

ಸಂಪರ್ಕ ಸಂಖ್ಯೆ:ವಿದ್ಯಾರ್ಥಿ ವೇತನದ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 18008909999 ಗೆ ಕರೆಮಾಡಿ ಇನ್ನಿತರ ಮಾಹಿತಿ ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸುವ ಮುನ್ನ ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿದ್ದೀರಾ ಎಂದು ಪರಿಶೀಲಿಸಿಕೊಳ್ಳುವುದು ಉತ್ತಮ. ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ, ಅಪ್ಲಿಕೇಶನ್ ಸಲ್ಲಿಕೆ ಆರಂಭಿಸಿ, ಆನ್​ಲೈನ್​ ಪಾರ್ಮ್​​ ಅನ್ನು ಭರ್ತಿಮಾಡಬಹುದು. ಇಲ್ಲವಾದರೆ ಹತ್ತಿರದ ರಿಲಯನ್ಸ್ ಕಚೇರಿಗೆ ಭೇಟಿ ನೀಡಿ ಕೂಡ ನೀವು ಆಯ್ಕೆ ಮಾಡಬಹುದಾಗಿದೆ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ – www.jio.com ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ನಿಮ್ಮ ವಿವರಗಳೊಂದಿಗೆ ಭರ್ತಿ ಮಾಡಿ ಅಥವಾ ಸಹಾಯವಾಣಿಯನ್ನು ಬಳಸಿ – 1800-890-9999 ರಿಲಯನ್ಸ್ ಜಿಯೋ ಸ್ಕಾಲರ್‌ಶಿಪ್‌ಗಳು 2022 ಕುರಿತು ಇನ್ನಷ್ಟು ಮಾಹಿತಿ ಪಡೆಯಬಹುದು.

ಈ ಅಪ್ಲಿಕೇಶನ್ ಅನ್ನು ಭರ್ತಿ ಮಾಡಲು ಆಯ್ಕೆ ಮಾಡಿ ವಿವರಗಳು ಸರಿ ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸೇವ್ ಬಟನ್ ಕ್ಲಿಕ್ ಮಾಡುವ ಮೊದಲು ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಬೇಕು. ಒಮ್ಮೆ ನೀವು ಫಾರ್ಮ್ ಸಲ್ಲಿಕೆಯನ್ನು ಪೂರ್ಣಗೊಳಿಸಿದ ನಂತರ ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಬೇಕು.

Leave A Reply

Your email address will not be published.