Kantara Movie: ಕಾಂತಾರಕ್ಕೆ ಮತ್ತೆ ಶಾಕ್ ಕೊಟ್ಟ ಕೋರ್ಟ್; ವರಾಹ ರೂಪಂ ಹಾಡು ಬಳಸದಂತೆ ವಾರ್ನಿಂಗ್!

ಕಾಂತಾರ (Kantara) ಸಿನಿಮಾದ ಅಬ್ಬರ ಎಲ್ಲೆಡೆ ಇನ್ನೂ ಹೆಚ್ಚಾಗಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್ ಆಫೀಸ್‌ನಲ್ಲಿ (Box Office) ಕಾಂತಾರ ತನ್ನ ಹವಾ ಹೆಚ್ಚೇ ಮಾಡಿದೆ ಎಂದೇ ಹೇಳಬಹುದು. ಈ ಎಲ್ಲಾ ಸಕ್ಸಸ್ ಮಧ್ಯೆ ಕಪ್ಪು ಚುಕ್ಕೆ ಅನ್ನೋ ರೀತಿಯಲ್ಲಿ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡಿಗೆ (Varaha roopam) ವಿವಾದ ಸುತ್ತಿಕೊಂಡಿತ್ತು.

ಅಂದ ಹಾಗೇ ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ (Ajaneesh Loknath) ಅವರು ಮಲಯಾಳಂ ಭಾಷೆಯ (Malayalam) ‘ನವರಸಂ..’ ಹಾಡಿನಿಂದ (Navarasam Somb) ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಸಿನಿಮಾ ಬಿಡುಗಡೆಯಾದಾಗಿನಿಂದ ಕೇಳಿ ಬಂದಿತ್ತು. ಅನಂತರ ಇತ್ತೀಚೆಗೆ ಈ ಸಂಬಂಧ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ (Thaikkudam Bridge) ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ಇಂದು ವಿಚಾರಣೆ ನಡೆಸಿದ ಕೇರಳದ ಪಾಲಕ್ಕಾಡ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ವರಹಾ ರೂಪಂ ಹಾಡಿಗೆ ತಡೆಯಾಜ್ಞೆಯನ್ನು ಕೂಡಾ ನೀಡಿತು.

ಮುಂದಿನ ಆದೇಶದವರೆಗೆ ಹಾಡನ್ನು ಪ್ಲೇ ಮಾಡದಂತೆ, ಸ್ಟ್ರೀಮಿಂಗ್ ಮಾಡದಂತೆ ಅಥವಾ ಸಾರ್ವಜನಿಕರಿಗೆ ವಿತರಿಸದಂತೆ ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕ ಮತ್ತು ಸ್ಟೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

ಈ ಹಿಂದೆ ಇದೇ ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ (Kozhikode Court in Kerala), ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿತ್ತು. ಈ ವಿಚಾರವನ್ನು ‘ತೈಕ್ಕುಡಂ ಬ್ರಿಡ್ಜ್’ ಚಿತ್ರತಂಡವೇ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿತ್ತು.

Leave A Reply

Your email address will not be published.