Zomato ವರಸೆ : ಊಟ ಚೆನ್ನಾಗಿಲ್ಲ ಎಂದ ಬೆಂಗಳೂರಿನ ಮಹಿಳೆಗೆ ಜ್ಯೊಮ್ಯಾಟೋ ಹೀಗಾ ಹೇಳೋದು?

ಇಂದಿನ ದಿನಗಳಲ್ಲಿ ಕೆಲಸದ ತರಾತುರಿಯಲ್ಲಿ ಹೆಚ್ಚಿನವರು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಗಳಿಗೆ ಮೊರೆ ಹೋಗುವುದು ಸಾಮಾನ್ಯ. ಹೀಗೆ ಆರ್ಡರ್ ಮಾಡುವಾಗ ಆಹಾರದ ಗುಣಮಟ್ಟ, ಸುಧಾರಣೆಯ ಬಗ್ಗೆ ವಿಮರ್ಶೆ ಇಲ್ಲವೆ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿದೆ.

 

ಪುಡ್ ಡೆಲಿವೆರಿ ಕಂಪನಿ ಬಗ್ಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾಡಿರುವ ಕಮೆಂಟ್ ಅನ್ನು ಸ್ವತಃ ಕಂಪನಿಯೇ ಅಳಿಸಿ ಹಾಕಿದೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.

ಈಗ ಕುಳಿತಲ್ಲೇ ಜನರಿಗೆ ಆಹಾರ ತಲುಪಿಸುವ ನಿಟ್ಟಿನಲ್ಲಿ ಡೆಲಿವೆರಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದೆ. ಅದೇ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಜೊಮ್ಯಾಟೋ ಕಂಪನಿಯು ಮಹಿಳಾ ಗ್ರಾಹಕರು ತಾವು ಸ್ವೀಕರಿಸಿದ ಆಹಾರದ ಕುರಿತು ಬರೆದಿರುವ ವಿಮರ್ಶೆಯನ್ನು ಅಳಿಸಿ ಹಾಕಿದೆ ಎಂದು ಸ್ವತಃ ಮಹಿಳೆಯೇ ಆರೋಪಿಸಿದ್ದಾರೆ.

ಕೋರಮಂಗಲ ರೆಸ್ಟೋರೆಂಟ್ ಆಹಾರದ ಗುಣಮಟ್ಟದ ಬಗ್ಗೆ ಬೆಂಗಳೂರು ಮೂಲದ ದಿಶಾ ಸಾಂಘ್ವಿ, ಕೋರಮಂಗಲದ ಖಾಸಗಿ ರೆಸ್ಟೋರೆಂಟ್ ನಿಂದ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಆರ್ಡರ್ ಅನ್ನು ಜೊಮ್ಯಾಟೋ ಹುಡುಗನೊಬ್ಬ ತಂದು ಕೊಟ್ಟಿದ್ದು, ಆಹಾರದ ಗುಣಮಟ್ಟವು ಸರಿಯಾಗಿರಲಿಲ್ಲ. ಆಹಾರವನ್ನು ಸೇವಿಸಿದ ನಂತರದಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಮಹಿಳೆಯು ಕಾಮೆಂಟ್ ಹಾಕಿದ್ದಾರೆ.

ಅಲ್ಲದೇ ತಮ್ಮ ಸಹದ್ಯೋಗಿಗಳು ಸಹ ಈ ಹಿಂದೆ ಅದೇ ರೆಸ್ಟೋರೆಂಟ್ ಫುಡ್ ಆರ್ಡರ್ ಮಾಡಿದ್ದು, ಅವರಿಗೂ ಕೂಡ ಇದೇ ರೀತಿ ಅನಾರೋಗ್ಯದ ತೊಂದರೆ ಕಾಣಿಸಿಕೊಂಡಿತ್ತು ಎಂದು ಮಹಿಳೆ ಕಮೆಂಟ್ ನಲ್ಲಿ ಹೇಳಿದ್ದಾರೆ. ಆದರೆ , ಈ ಕಮೆಂಟ್ ಅನ್ನು ಜೊಮ್ಯಾಟೋ ಕಂಪನಿಯು ಡಿಲೀಟ್ ಮಾಡಿದೆ.

ಇದಕ್ಕೆ ಪೂರಕ ಸ್ಪಷ್ಟನೆಯ ಸಂದೇಶವನ್ನು ದಿಶಾ ಸಾಂಘ್ವಿರಿಗೆ ಕಳುಹಿಸಿದ್ದು, ಅದೇ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿರುವ ಮಹಿಳೆಯು ಕಂಪನಿಯು ಉಲ್ಲೇಖಿಸಿದ ಅಂಶವನ್ನು ಟ್ವೀಟ್ ಮಾಡಿದ್ದಾರೆ.

ಅನಾರೋಗ್ಯ ಸಮಸ್ಯೆ ಎದುರಿಸಿದ ಬಗ್ಗೆ ಪ್ರಸ್ತಾಪಿಸುವುದಕ್ಕೆ ಇದು ಉತ್ತಮ ವೇದಿಕೆಯಲ್ಲ ಎಂದು ಕಂಪನಿ ತಿಳಿಸಿದ್ದು, ‘ಜೊಮ್ಯಾಟೋದ ವೇದಿಕೆಯಲ್ಲಿ ಗ್ರಾಹಕರು ಮಾಡುವ ವಿಮರ್ಶೆಗಳನ್ನು ನಾವು ಪ್ರತಿನಿತ್ಯ ಪರಿಶೀಲನೆ ಮಾಡುತ್ತೇವೆ. ಈ ವೇಳೆಯಲ್ಲಿ ಮಹಿಳೆಯ ವಿಮರ್ಶೆಯು ಕಂಡು ಬಂದಿದ್ದು, ಅದರಲ್ಲಿ ನಮ್ಮ ಮಾರ್ಗಸೂಚಿಗಳ ಉಲ್ಲಂಘನೆ ಆಗಿದೆ. ಹಾಗಾಗಿ, ಅದೊಂದು ವಿಮರ್ಶೆಯನ್ನು ಆರೋಗ್ಯ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ತೆಗೆದು ಹಾಕಲಾಗಿದೆ,’ ಎಂದು ಜೊಮ್ಯಾಟೋ ತಿಳಿಸಿದೆ.

ಇದರ ಜೊತೆಗೆ ಜೊಮ್ಯಾಟೋ ಮಹಿಳೆಗೆ ಮೇಲ್ ಕಳುಹಿಸಿದ್ದು, ಎಲ್ಲ ರೀತಿಯ ಅಭಿಪ್ರಾಯಗಳನ್ನು ನಾವು ಸ್ವಾಗತಿಸುತ್ತೇವೆ. ಅದು ಆಹಾರದ ಗುಣಮಟ್ಟವು ಉತ್ತಮವಾಗಿದೆಯೇ, ಕೆಟ್ಟದಾಗಿದೆಯೇ ಅಥವಾ ಕೊಳಕಾಗಿದೆಯೇ ಎಂಬುದನ್ನು ಗುರುತಿಸಿಕೊಳ್ಳುವುದಕ್ಕೆ ನಮಗೆ ಸಹಾಯವಾಗುತ್ತದೆ. ಇದರಿಂದ ನಿಮ್ಮ ಮತ್ತು ನಮ್ಮ ನಡುವಿನ ವಹಿವಾಟು ಮತ್ತಷ್ಟು ಉಪಯೋಗಕರವಾಗಿ ಇರುತ್ತದೆ.

ಆದರೆ ಈ ಹಂತದಲ್ಲಿ ಜೊಮ್ಯಾಟೋ ನೀಡುವ ಆಹಾರದ ಬಗ್ಗೆ ಕಮೆಂಟ್ ಮಾಡುವಾಗ ಕೆಲವು ನಿಬಂಧನೆಗಳನ್ನು ಹೊಂದಿರುತ್ತೇವೆ. ನಮ್ಮ ವಿಮರ್ಶೆ ಮಾರ್ಗಸೂಚಿಯ ಪ್ರಕಾರ, ಆರೋಗ್ಯ ಕಾಯ್ದೆಯ ಉಲ್ಲಂಘನೆಗಳನ್ನು ವರದಿ ಮಾಡಲು ಜೊಮ್ಯಾಟೋ ಸೂಕ್ತ ವೇದಿಕೆಯಲ್ಲ. ಈ ವಿಷಯವನ್ನು ತನಿಖೆ ಮಾಡುವ ಸಂಬಂಧಿತ ಅಧಿಕಾರಿಗಳಿಗೆ ಈ ನಿರ್ದಿಷ್ಟ ವಿಷಯವನ್ನು ಉತ್ತಮವಾಗಿ ವರದಿ ಮಾಡಲಾಗಿದೆ ಎಂದು ನಾವು ನಂಬುತ್ತೇವೆ. ಈ ಕಾರಣದಿಂದ, ನಿಮ್ಮ ವಿಮರ್ಶೆಯನ್ನು ಅಳಿಸಲಾಗಿದೆ,’ ಎಂದು ಜೊಮ್ಯಾಟೋ ಹೇಳಿದೆ.

ಇದಿಷ್ಟೇ ಅಲ್ಲದೆ, ದಿಶಾ ಸಾಂಘ್ವಿರಿಗೆ ಪ್ರತ್ಯೇಕವಾದ ಸಂದೇಶವೊಂದನ್ನು ಕಳುಹಿಸಿದ್ದು, ಜೊಮ್ಯಾಟೋ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆರ್ಡರ್ ಐಡಿ ಅನ್ನು ನಮಗೆ ಕಳುಹಿಸಿ, ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಪ್ರಯತ್ನಿಸುತ್ತೇವೆ ಎಂದು ಹೇಳಿದೆ.

ಈ ಸಂದೇಶದ ಬಗ್ಗೆಯೂ ಮಹಿಳೆಯು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜೊಮ್ಯಾಟೋ ವಿರುದ್ಧ ಗ್ರಾಹಕರು ಛೀಮಾರಿ ಹಾಕಿದ್ದಾರೆ.

ಜೊಮ್ಯಾಟೋದ ನಡೆಗೆ ತೀವ್ರ ಆಕ್ರೋಶ ವ್ಯಕ್ರವಾಗಿದ್ದು, ‘ಸಾರ್ವಜನಿಕರು ತಮಗೆ ಆಗಿರುವ ಅನುಭವಗಳ ಬಗ್ಗೆ ಕಾಮೆಂಟ್ ಮಾಡಬಾರದು, ಅದು ನಿಮ್ಮ ಮಾರ್ಗಸೂಚಿಗಳಿಗೆ ವಿರುದ್ಧವಾಗಿರುತ್ತದೆ ಎಂದರೆ ನಿಮಗೆ ಯಾವ ರೀತಿಯ ಕಾಮೆಂಟ್ ಹಾಕಬೇಕು,’ ಎಂದು ಗ್ರಾಹಕರೊಬ್ಬರು ಖಾರವಾಗಿ ಪ್ರಶ್ನಿಸಿ ಪ್ರತಿಕ್ರಿಯೆ ನೀಡಿದ್ದಾರೆ.

Leave A Reply

Your email address will not be published.