ನಟಿ ರಂಭಾ ಕಾರು ಅಪಘಾತ!!!

ದಕ್ಷಿಣ ಭಾರತದ ತೊಂಬತ್ತರ ದಶಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ರಂಭಾ ಸದ್ಯ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ. 2010ರಲ್ಲಿ ಇಂದ್ರಕುಮಾರ್ ಪದ್ಮನಾಥನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಂಭಾಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ.

 

ಸದ್ಯ ಟೊರೊಂಟೊದಲ್ಲಿರುವ ರಂಭಾ ಹಾಗೂ ಇಂದ್ರಕುಮಾರ್ ಮಕ್ಕಳಿಗೆ ಅಲ್ಲಿಯೇ ಶಿಕ್ಷಣ ಕೊಡಿಸುತ್ತಿದ್ದಾರೆ. ಇತ್ತೀಚೆಗೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ರಂಭಾ ಅವರ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರಿಗೆ ಬಲ ಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ರಂಭಾ ಜೊತೆ ಕಾರಿನಲ್ಲಿ ಅವರ ಮಕ್ಕಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಾಕೆ ಇದ್ದು, ಈ ಪೈಕಿ ಎಲ್ಲರಿಗೂ ಚಿಕ್ಕ ಪುಟ್ಟ ಗಾಯಗಳಾಗಿದೆ. ” ಅಪಾಯದಿಂದ ಪಾರಾಗಿದ್ದೇವೆ, ಆದರೆ ಕಿರಿಯ ಪುತ್ರಿ ಸಾಶಾ ಮಾತ್ರ ಇನ್ನೂ ಸಹ ಆಸ್ಪತ್ರೆಯಲ್ಲಿಯೇ ಇದ್ದಾಳೆ” ಎಂದು ನಟಿ ರಂಭಾ ಸ್ವತಃ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ರಂಭಾ ಅವರ ಟೆಸ್ಲಾ ಕಾರಿನ ಬಲಭಾಗದ ಮುಂದಿನ ಬಾಗಿಲಿಗೆ ಪೆಟ್ಟಾಗಿದ್ದು, ಕಾರು ಡಿಕ್ಕಿಯಾದ ರಭಸಕ್ಕೆ ಏರ್ ಬ್ಯಾಗ್ ತೆರೆದುಕೊಂಡಿರುವುದನ್ನು ನಟಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಾಣಬಹುದಾಗಿದೆ. ಹೀಗೆ ಅಪಘಾತದ ವಿಷಯವನ್ನು ತನ್ನ ಅಧಿಕೃತ ಆಸ್ಪತ್ರೆಯಲ್ಲಿಯೇ ಇದ್ದಾಳೆ ಎಂದು ನಟಿ ರಂಭಾ ಸ್ವತಃ ತನ್ನ ಅಧಿಕೃತ ಇನ್ಸಾ ಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave A Reply

Your email address will not be published.