ನಾಗಲಿಂಗ ವೃಕ್ಷದ ಜೊತೆಗೆ ‘ರುದ್ರಾಕ್ಷಿ ಕೃಷಿ’!! ಮಂಗಳೂರಿನ ಶಿವಭಕ್ತನ ನೆಚ್ಚಿನ ಕೃಷಿಯ ಸಾಧನೆಗೆ ಭಾರೀ ಮೆಚ್ಚುಗೆ!!

ರುದ್ರಾಕ್ಷಿ ಎಂದರೆ ಶಿವನ ಕಣ್ಣೆಂದೇ ಕರೆಲ್ಪಡುವ ಮರದಲ್ಲಿ ಆಗುವ ಕಾಯಿ. ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಭಯ-ಭಕ್ತಿಯ ಸ್ಥಾನವಿದ್ದು, ಹಾಗೂ ಧಾರಣೆಗೆ ಹಲವು ಕ್ರಮಗಳನ್ನೂ ಕಂಡುಕೊಳ್ಳಲಾಗಿದೆ.ಹಲವು ಔಷಧಿಯ ಗುಣಗಳನ್ನು ಹೊಂದಿರುವ ರುದ್ರಾಕ್ಷಿ ಧರಿಸುವುದರಿಂದ ಆರೋಗ್ಯದ ಮೇಲೂ ಹಲವಾರು ಪರಿಣಾಮಗಳು ಬೀರುತ್ತವೆ ಎನ್ನುತ್ತವೆ ಪುರಾತನ ಸಂಸ್ಕೃತಿ.

 

ಇಂತಹ ರುದ್ರಾಕ್ಷಿ ಕೃಷಿಯ ಬಗೆಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ಒಲವು ತೋರಿದ್ದು,ಮಂಗಳೂರು ನಗರದ ಹೊರವಲಯದ ಮುಲ್ಕಿ-ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಎಂಬಲ್ಲಿ ಉತ್ಸಾಹಿ ಯುವಕ ವಿನೇಶ್ ಪೂಜಾರಿ ಅವರ ‘ರುದ್ರಾಕ್ಷಿ ಕೃಷಿ’ಯ ಪ್ರಯತ್ನವು ರಾಜ್ಯಾದ್ಯಂತ ಸುದ್ದಿಯಾಗಿದೆ.ಕಳೆದ ಬಾರಿ ಶಿವನಿಗೆ ಪ್ರಿಯವಾದ ನಾಗಲಿಂಗ ಪುಷ್ಪ ಹಾಗೂ ನಾಗಲಿಂಗ ವೃಕ್ಷದ ಸಸಿ ನಾಟಿ ಮಾಡಿ, ಹಲವಾರು ದೇವಾಲಯಗಳಿಗೆ ಹಾಗೂ ಪರಿಸರ ಪ್ರೇಮಿಗಳಿಗೆ, ಕೃಷಿಕರಿಗೆ ಉಚಿತವಾಗಿ ವಿತರಿಸಿ, ತಾನೇ ಖುದ್ದು ತೆರಳಿ ನೆಟ್ಟು ಸುದ್ದಿಯಾಗಿದ್ದ ವಿನೇಶ್ ಈ ಬಾರಿ ರುದ್ರಾಕ್ಷಿ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.

ಅಪರೂಪದ ಹಾಗೂ ಅಳಿವಿನ ಅಂಚಿನ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವ ವಿನೇಶ್ ಓರ್ವ ಸಕಲಕಲಾವಲ್ಲಭ. ಜೀವನೋಪಾಯಕ್ಕಾಗಿ ಎಲೆಕ್ಟ್ರಿಷಿಯನ್ ಆಗಿ ದುಡಿಯುತ್ತಿರುವ ವಿನೇಶ್, ಬಿಡುವು ಸಿಕ್ಕಾಗ ಕೆಲವೊಂದು ಬರಹಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದು,ಊರ-ಪರವೂರ ಭಜಕರ ತಂಡದೊಂದಿಗೆ ಹಾರ್ಮೋನಿಯಂ ಹಾಗೂ ತಬಲ ನುಡಿಸಲು ತೆರಳುತ್ತಿದ್ದೂ,ಭಜನಾಸಕ್ತಿಗೆ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ರುದ್ರಾಕ್ಷಿ ಕೃಷಿ ಹಾಗೂ ಅವುಗಳ ಮೌಲ್ಯ-ಉಪಯೋಗಗಳ ಬಗೆಗೆ ಅರಿತು ಆ ಕೃಷಿಯನ್ನೊಮ್ಮೆ ಮಾಡಿನೋಡೋಣ ಎನ್ನುವ ಹಂಬಲದಿಂದ ರುದ್ರಾಕ್ಷಿ ಕೃಷಿಗೆ ಕೈ ಹಾಕಿದ ವಿನೇಶ್ ನಿರೀಕ್ಷೆಗೂ ಮೀರಿ ಖುಷಿ ಕಂಡಿದ್ದಾರೆ. ಇವರ ಸಾಧನೆಯನ್ನು ಕಂಡು ಖಾಸಗಿ ವಾಹಿನಿಯೊಂದರ ಕೃಷಿ-ಖುಷಿ ಕಾರ್ಯಕ್ರಮದಲ್ಲಿ ಗುರುತಿಸಲಾಗಿತ್ತು.ಅಲ್ಲದೇ ಉರಗ ಪ್ರೇಮಿಯಾಗಿಯೂ ಚಿರಪರಿಚಿತರಾಗಿರುವ ವಿನೇಶ್ ಹಲವಾರು ಉರಗ ಸಂತತಿಗಳನ್ನು ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಸಂರಕ್ಷಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

ರುದ್ರಾಕ್ಷಿ ಕೃಷಿಯತ್ತ ಒಲವು ತೋರಿದ ಉತ್ಸಾಹಿ ವಿನೇಶ್ ಪೂಜಾರಿ

ರುದ್ರಾಕ್ಷಿ ಕೃಷಿಯ ಬಗೆಗೆ ಮಾಹಿತಿ ಇಲ್ಲಿದೆ.

ರುದ್ರಾಕ್ಷಿ ಮರಗಳಲ್ಲಿ ಅನೇಕ ಪ್ರಭೇದದ ಮರಗಳಿವೆ. ಪ್ರಮುಖವಾಗಿ 3 ಜಾತಿಯಮರಗಳನ್ನು ಕಾಣಬಹುದಾಗಿದೆ
1.ನೇಪಾಳ
2.ಇಂಡೋನೇಷಿಯ
3.ಉತ್ತರಖಂಡ್

ನೇಪಾಳದ ರುದ್ರಾಕ್ಷಿ ಅತ್ಯಂತ ವಿಶೇಷ ಶಕ್ತಿಯನ್ನು ಹೊಂದಿದ್ದು ಒಂದರಿಂದ 18 ಮುಖದ ರುದ್ರಾಕ್ಷಿಯನ್ನು ಈ ಮರದಲ್ಲಿ ಪಡೆಯಬಹುದು ಅಲ್ಲದೆ ಹೆಚ್ಚಾಗಿ ಐದು ಮುಖದ ರುದ್ರಾಕ್ಷಿ ಈ ಮರದಲ್ಲಿ ಕಾಣಬಹುದು ಹಾಗೂ ನೈಸರ್ಗಿಕವಾಗಿ ರಂದ್ರವನ್ನು ಹೊಂದಿದೆ.

ಇಂಡೋನೇಷ್ಯಾ ದ ರುದ್ರಾಕ್ಷಿ ಗಾತ್ರದಲ್ಲಿ ಚಿಕ್ಕದಾಗಿದ್ದು ನೈಸರ್ಗಿಕ ವಾದ ರಂಧ್ರವನ್ನು ಕಾಣಬಹುದು.
ಉತ್ತರಖಂಡ್ ನ ರುದ್ರಾಕ್ಷಿಯಲ್ಲಿ ಮೂರು ಮುಖವನ್ನು ಹೆಚ್ಚಾಗಿ ಕಾಣಬಹುದು ನೈಸರ್ಗಿಕವಾದ ರಂಧ್ರವನ್ನು ಹೊಂದಿರುವುದಿಲ್ಲ.

ಕೃಷಿಯ ಆಸಕ್ತಿ ಇರುವ ಉತ್ಸಾಹಿಗಳಿಗೆ ವಿನೇಶ್ ಪ್ರೋತ್ಸಾಹ ನೀಡುತ್ತಿದ್ದು, ರುದ್ರಾಕ್ಷಿ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ನಾಗಲಿಂಗ ಸಸಿಗಳಿಗಾಗಿ ಇವರನ್ನು ಸಂಪರ್ಕಿಸಿ.

ವಿನೇಶ್ ಪೂಜಾರಿ ನಿಡ್ಡೋಡಿ
ಕಿನ್ನಿಗೋಳಿ-ಮುಲ್ಕಿ ಮಂಗಳೂರು.
8748870759

Leave A Reply

Your email address will not be published.