Winter Tips : ಚಳಿಗಾಲದಲ್ಲಿ ಕಾಡುವ ಒಣಚರ್ಮದ ಸಮಸ್ಯೆಯನ್ನು ಈ ರೀತಿ ದೂರ ಮಾಡಿ!!!
ಇದೀಗ ಚಳಿಗಾಲ ಆರಂಭವಾಗುತ್ತಿದೆ. ಈ ಚಳಿಯೊಂದಿಗೆ ಬರುವಂತಹ ಶೀತಗಾಳಿ ನಮ್ಮ ಚರ್ಮವನ್ನು ಡ್ರೈ ಆಗುವಂತೆ ಮಾಡುತ್ತದೆ. ಮತ್ತು ಇದರಿಂದ ಹಿಂಸೆ ಎನಿಸುತ್ತದೆ. ಚಳಿಗಾಲದ ಸಮಯದಲ್ಲಿ ಚರ್ಮದ ಆರೈಕೆ ಮಾಡೋದು ಪ್ರತಿಯೊಬ್ಬರಿಗೂ ಒಂದು ಸವಾಲೇ ಸರಿ. ಕೆಲವರು ನಾನಾ ರೀತಿಯಲ್ಲಿ ಚರ್ಮ ಡ್ರೈ ಆಗುವುದನ್ನು ತಡೆಗಟ್ಟಲು ಪ್ರಯತ್ನಿಸಿ ಸೋತು ಹೋದವರಿದ್ದಾರೆ. ಇನ್ನೂ ಕೆಲವರು ಕ್ರೀಮ್ – ಆಯಿಲ್ ಗಳನ್ನು ಬಳಸಿ ತಾತ್ಕಾಲಿಕ ಪರಿಹಾರವನ್ನು ಕಂಡುಕೊಂಡವರಿದ್ದಾರೆ. ಆದರೆ ಶಾಶ್ವತ ಪರಿಹಾರಕ್ಕಾಗಿ ಇಲ್ಲಿದೆ ಸೂಕ್ತ ಸಲಹೆಗಳು.
ಅದೇನೆಂದರೆ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಸಾಕು ಒಣ ಚರ್ಮದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಈ ಆಹಾರಗಳು ನಿಮ್ಮ ಚರ್ಮದ ಶುಷ್ಕತೆಯನ್ನು ಒಳಗಿನಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಕ್ರೀಮ್ ಅಥವಾ ಬೇರೆ ಯಾವುದೇ ಮಾಯಿಶ್ಚರೈಸರ್ ಮೇಲಿನಿಂದ ಮಾತ್ರ ಕೆಲಸ ಮಾಡುತ್ತದೆ. ಚಳಿಗಾಲದ ಸಮಯದಲ್ಲಿ ಒಣ ಚರ್ಮದ ಸಮಸ್ಯೆಯ ಪರಿಹಾರಕ್ಕೆ ಅನೇಕ ಆಹಾರಗಳಿವೆ. ಅವು ಯಾವುದೆಲ್ಲಾ ಎಂದು ತಿಳಿದುಕೊಳ್ಳೋಣ.
ಚಳಿಗಾಲದಲ್ಲಿ ಶುಷ್ಕತೆಯನ್ನು ತಪ್ಪಿಸುವುದು ಹೇಗೆಂದರೆ:
ನೀರು :
ಇದು ಅತಿ ಸುಲಭವಾದ ಟಿಪ್ಸ್. ಆದರೆ ಚಳಿಗಾಲದಲ್ಲಿ ನಾವು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತೇವೆ. ಇದರಿಂದ ಒಣ ಚರ್ಮದ ಸಮಸ್ಯೆ ಎದುರಿಸಬೇಕಾಗುತ್ತದೆ. ದಿನಚರಿ ಮತ್ತು ಆಹಾರದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡು, ಹೆಚ್ಚು ನೀರು ಕುಡಿದರೆ ಒಣ ಚರ್ಮದ ಸಮಸ್ಯೆಯನ್ನು ಬೇಗನೆ ನಿವಾರಿಸಬಹುದು.
ನಟ್ಸ್ :
ವಾಲ್ನಟ್, ಗೋಡಂಬಿ, ಪಿಸ್ತಾ, ಹ್ಯಾಜೆಲ್ನಟ್ಗಳು ಮತ್ತು ಬಾದಾಮಿಗಳಂತಹ ಈ ಎಲ್ಲಾ ನಟ್ಸ್ ಗಳನ್ನು ಚಳಿಗಾಲದಲ್ಲಿ ಸೇವಿಸಬೇಕು. ಯಾಕಂದ್ರೆ ಅವುಗಳಲ್ಲಿ ಒಮೆಗಾ 3, ಒಮೆಗಾ 6 ನಂತಹ ಅಗತ್ಯವಾದ ಕೊಬ್ಬಿನಾಮ್ಲಗಳಿವೆ. ಅವು ಚರ್ಮವನ್ನು ಮಾಯಿಶ್ಚರೈಸರ್ ಆಗಿರುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಇವುಗಳ ಸೇವನೆ ತುಂಬಾ ಪ್ರಯೋಜನಕಾರಿಯಾಗಿದೆ.
ಸೌತೆಕಾಯಿ :
ಸೌತೆಕಾಯಿ ಶುಷ್ಕ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಉಳಿದ ಎಲ್ಲಾ ತರಕಾರಿಗಳಿಗೆ ಹೋಲಿಸಿದರೆ ಇದು ಹೆಚ್ಚು ನೀರಿನ ಮಟ್ಟವನ್ನು ಹೊಂದಿದೆ. ಅಷ್ಟೇ ಅಲ್ಲದೆ ಇದು ವಿಟಮಿನ್ ಎ ಮತ್ತು ವಿಟಮಿನ್ ಸಿ ಹೊಂದಿದೆ. ಇದು ಚರ್ಮಕ್ಕೆ ಇನ್ನೂ ಉತ್ತಮ. ಚಳಿಗಾಲದಲ್ಲಿ ಇದರ ಬಳಕೆ ಮಾಡಿದರೆ ಉತ್ತಮ.
ಹಸಿರು ಸೊಪ್ಪು ತರಕಾರಿಗಳು ಮತ್ತು ಸೀಸನಲ್ ಹಣ್ಣುಗಳು:
ಪಾಲಕ್, ಬ್ರೊಕೋಲಿ, ಎಲೆಕೋಸುಗಳಂತಹ ಹೆಚ್ಚು ಹಸಿರು ಎಲೆ ತರಕಾರಿಗಳು ಬಹಳ ಮುಖ್ಯ. ಯಾಕಂದ್ರೆ ಅವುಗಳು ಅನೇಕ ಆಂಟಿ ಆಕ್ಸಿಡೆಂಟ್ ಹೊಂದಿರುತ್ತದೆ. ಚಳಿಗಾಲದಲ್ಲಿ ಸೀಸನಲ್ ಹಣ್ಣುಗಳನ್ನು ಸೇವಿಸುವ ಮೂಲಕ ನೀವು ಆರೋಗ್ಯಕರವಾಗಿರುತ್ತೀರಿ ಮತ್ತು ಚರ್ಮದ ಶುಷ್ಕತೆಯನ್ನು ದೂರಮಾಡಬಹುದು.
ಕಲ್ಲಂಗಡಿ ಹಣ್ಣು :
ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ನೀರಿನ ಅಂಶ ಇದೆ. ಮತ್ತು ಲೈಕೋಪೀನ್, ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ನಂತಹ ಖನಿಜ ಮತ್ತು ಫೈಟೊಕೆಮಿಕಲ್ ಗಳನ್ನು ಒಳಗೊಂಡಿದೆ . ಇದೆಲ್ಲಾ ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಟೊಮೆಟೊ, ಸ್ಟ್ರಾಬೆರಿ ಅಥವಾ ಪೇರಳೆ ಹಣ್ಣುಗಳಿಗೆ ಹೋಲಿಸಿದರೆ ಕಲ್ಲಂಗಡಿ ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.
ಕಿತ್ತಳೆ :
ಕಿತ್ತಳೆ ಹಣ್ಣು ಸಿಹಿ ಅಥವಾ ಹುಳಿಯಂತಹ ವಿವಿಧ ರುಚಿಗಳಲ್ಲಿ ಬರುತ್ತದೆ. ಇದು ಯಾವಾಗಲೂ ನಿಮ್ಮ ಫ್ರುಟ್ ಬೌಲ್ ನಲ್ಲಿರಲು ಯೋಗ್ಯವಾದ ಹಣ್ಣು ಎಂದೇ ಹೇಳಬಹುದು. ಕಲ್ಲಂಗಡಿ ಹಣ್ಣಿನಂತೆ ಇದರಲ್ಲಿ ಸಾಕಷ್ಟು ನೀರು (80-89 ಪ್ರತಿಶತ) ಮತ್ತು ವಿಟಮಿನ್ ಸಿ ಇರುತ್ತದೆ. ಇದು ಕೂಡ ಚರ್ಮಕ್ಕೆ ಉತ್ತಮವಾಗಿದೆ.
ಹಣ್ಣು ಮತ್ತು ತರಕಾರಿ ಸಲಾಡ್ ಗಳು :
ನೀವು ಹಣ್ಣಿನ ಸಲಾಡ್, ತರಕಾರಿ ಸಲಾಡ್ ಅಥವಾ ಎರಡರ ಕಾಂಬಿನೇಶನ್ ಪ್ರಯತ್ನಿಸಬಹುದು. ನಿಮ್ಮ ಹಸಿವನ್ನು ಸುಧಾರಿಸುವುದರ ಜೊತೆಗೆ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹೊಂದಿರುವ ಸಲಾಡ್ ಗಳು ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಇವುಗಳನ್ನು ಸೇವಿಸೋದು ಉತ್ತಮ.
ತೆಂಗಿನ ಎಣ್ಣೆ :
ಇದು ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ ಮತ್ತು ತೇವಾಂಶವನ್ನು ಉಳಿಸಿ, ಚರ್ಮಕ್ಕೆ ರಕ್ಷಣಾತ್ಮಕ ಪದರವನ್ನು ನೀಡುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೆಂಗಿನ ಎಣ್ಣೆ ಸೇರಿಸಿ, ಅಥವಾ ಇವುಗಳನ್ನು ದೇಹಕ್ಕೆ ಹಚ್ಚಿಕೊಳ್ಳುವುದು ಸಹ ದೇಹದಲ್ಲಿ ಮಾಯಿಸ್ಚರೈಸ್ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಡಾರ್ಕ್ ಚಾಕೊಲೇಟ್ :
ಡಾರ್ಕ್ ಚಾಕೊಲೇಟ್ ವಿಭಿನ್ನ ರುಚಿಯನ್ನು ಹೊಂದಿದೆ ಮತ್ತು ಇದರ ರುಚಿಯೂ ಎಲ್ಲರಿಗೂ ಇಷ್ಟವಾಗುವಂತ್ತದ್ದೆ. ಇದು ಕೊಬ್ಬಿನ ಉತ್ತಮ ಸಂಗ್ರಹವನ್ನು ಹೊಂದಿದೆ. ಮತ್ತು ಇದು ಫೈಬರ್, ಕಬ್ಬಿಣದ ಅಂಶ, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್ ನ ಅದ್ಭುತ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಲ್ಲಿ ಮಾಯಿಶ್ಚರೈಸರ್ ಉಳಿಯುವಂತೆ ಮಾಡುತ್ತದೆ.
ಆವಕಾಡೊ :
ಆವಕಾಡೊ ಇತ್ತೀಚಿನ ದಿನಗಳಲ್ಲಿ ಅನೇಕ ಜನರ ಮೊದಲ ಆಯ್ಕೆಯಾಗಿದೆ. ಇದು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಇದು ಕಾರ್ಬೋಹೈಡ್ರೇಟ್ಗಳು, ಕೊಬ್ಬಿನಾಮ್ಲಗಳು ಮತ್ತು ಪೊಟ್ಯಾಸಿಯಮ್ನ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ.
ಹಾಲು :
ಚಳಿಗಾಲದಲ್ಲಿ ಆರೋಗ್ಯವನ್ನು ಸುಧಾರಿಸಲು ಹೆಚ್ಚಾಗಿ ಹಾಲನ್ನು ಬಳಸಬೇಕು. ಇದು ಆರೋಗ್ಯವನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಕಂಡುಬರುವ ಪ್ರಯೋಜನಕಾರಿ ಗುಣಲಕ್ಷಣಗಳು ಚರ್ಮಕ್ಕೆ ತುಂಬಾ ಉಪಯುಕ್ತ. ಚಳಿಗಾಲದಲ್ಲಿ ಉಗುರುಬೆಚ್ಚಗಿನ ಹಾಲನ್ನು ಸೇವಿಸುವುದರಿಂದ ಆರೋಗ್ಯ ಮತ್ತು ಚರ್ಮಕ್ಕೆ ಒಳ್ಳೆಯದು. ಹೀಗೆ ಒಣ ಚರ್ಮವನ್ನು ಸುಲಭವಾಗಿ ಪರಿಹರಿಸಬಹುದು.