ಸುಳ್ಯ : ತನ್ನ ಕಂದನನ್ನೇ ಕೊಂದ ಕ್ರೂರಿ ತಾಯಿ !!!

Share the Article

ಸುಳ್ಯ : ಹಸುಗೂಸನ್ನು ತಾಯಿಯೊಬ್ಬಳು ಬಾವಿಗೆಸೆದು ಕೊಂದ ಕ್ರೂರ ಘಟನೆ ಸುಳ್ಯ ತಾಲೂಕಿನಿಂದ ಅ.29 ಸಂಜೆ
ವರದಿಯಾಗಿದೆ.

ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಬಸ್ತಿ ಕಾಡು ಎಂಬಲ್ಲಿ ತಾಯಿ ಹತ್ತು ದಿನದ ಮಗುವನ್ನು ಬಾವಿಗೆ ಎಸೆದಿದ್ದು ಮಗು ಮೃತಪಟ್ಟಿದೆ.ಮಗುವನ್ನು ಬಾವಿಗೆ ಎಸೆದ ತಾಯಿ ಪವಿತ್ರ ಎಂದು ಗುರುತಿಸಲಾಗಿದೆ.

ಪವಿತ್ರಾ ಕೆಲ ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಮನೆ ಮಂದಿ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave A Reply