ಅಪ್ಪು ಅಭಿಮಾನದ ಪರಾಕಾಷ್ಠೆ, ಆತ್ಮಹತ್ಯೆ ಮಾಡಿಕೊಂಡ ಮೂಢ ಹುಡುಗ

ಸಾಕಷ್ಟು ಅತ್ಯುತ್ತಮ ಕಾರ್ಯಗಳನ್ನು  ಮಾಡಿ ದೇಶದಾದ್ಯಂತ ಜನತೆಯ ಮನದಲ್ಲಿ ಸದಾ ಕಾಲ ನೆನಪಿನಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಗಲಿ ಈಗಾಗಲೇ ಒಂದು ವರ್ಷವಾಗಿದೆ. ಇನ್ನೂ ಅವರನ್ನು ನೆನೆದು ಸಾಕಷ್ಟು ಜನರು ಭಾವುಕರಾಗಿದ್ದು ಉಂಟು, ಆದರೆ ಇಲ್ಲೊಬ್ಬ ಯುವಕ ಅಪ್ಪು ಸ್ಮರಣೆಯಲ್ಲಿ ಪಾಲ್ಗೊಂಡಿದ್ದಾತ , ಆತ್ಮಹತ್ಯೆಗೆ ಶರಣಾಗಿರುವ  ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

 

ನೆನ್ನೆಯ ದಿನ ಜನತೆಗೆ ದುಃಖಕರವಾದ ದಿನವಾಗಿದ್ದು, ಅಪ್ಪು ಅಗಲಿದರೂ ಎಷ್ಟೋ ಅಭಿಮಾನಿಗಳಿಗೆ ಈ ಸತ್ಯ ವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ನೆನ್ನೆಯ ದಿನ ರಾಜ್ಯದ ಪ್ರತೀ ಮೂಲೆ ಮೂಲೆಯಲ್ಲೂ ಅಗಾಧವಾದ ಅಭಿಮಾನಿ ಬಳಗವನ್ನು ಹೊಂದಿರುವ ಅಪ್ಪುವನ್ನು ಅಭಿಮಾನಿಗಳು ಸ್ಮರಿಸಿದ್ದಾರೆ. ಈ ಮಧ್ಯೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆನಂದೂರು ಗ್ರಾಮದಲ್ಲಿ ಅಪ್ಪುವಿನ ಅಪ್ಪಟ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಶನಿವಾರ ನಗರದ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ ನಡೆಯಿತು. ಈ  ಸಂದರ್ಭದಲ್ಲಿ  ರಾಜ್ಯದ ಮೂಲೆ ಮೂಲೆಗಳಿಂದ ಧಾವಿಸಿರುವ ಜನ ಶನಿವಾರ ಅಪ್ಪು ಸಮಾಧಿಗೆ  ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅಪ್ಪು ಹೆಸರಲ್ಲಿ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಅಭಿಮಾನಿಗಳು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹೊಸ ಆನಂದೂರು ಗ್ರಾಮದ ಕಿರಣ್(22) ಮೃತ ಯುವಕ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿ, ಅನ್ನಸಂತರ್ಪಣೆ ಕೂಡ ನಡೆಸಿದ್ದ. ಆದರೆ ಕಾರ್ಯಕ್ರಮದ ಬಳಿಕ ಮನೆಗೆ ಮರಳಿದಾಗ  ರಾತ್ರಿ  ಸುಮಾರು 10 ಗಂಟೆಯ ಹೊತ್ತಿಗೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.