ಜೇನು ನೊಣಗಳಿಗೆ ತನ್ನ ಕೈಯಲ್ಲೇ ಆಶ್ರಯ ನೀಡಿದ ಯುವಕ!
ಜೇನುಗಳ ಹಿಂಡು ಕಂಡೊಡನೆ ಒಂದಷ್ಟು ದೂರ ಓಡುವ ಜನರ ನಡುವೆ ಇಲ್ಲೊಬ್ಬ ಯುವಕ ತನ್ನ ಕೈಯಲ್ಲೇ ಜೇನು ನೊಣಗಳಿಗೆ ಆಶ್ರಯ ನೀಡಿದ್ದಾನೆ. ಹೌದು. ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ ವಿಭಿನ್ನವಾದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಅವುಗಳಲ್ಲಿ ಯುವಕನ ಜೇನು ಪ್ರೀತಿಯ ವೀಡಿಯೋ ಕೂಡ ವೈರಲ್ ಆಗಿದೆ. ಜೇನುಗಳಿಗೆ ಸ್ವಲ್ಪ ತೊಂದರೆಯಾದರೂ ಸಾಕು ಅವು ತಮ್ಮ ಕೊಂಡಿಯಿಂದ ಕುಟುಕುತ್ತವೆ. ಅಂತದರಲ್ಲಿ ಈತನ ಧೈರ್ಯಕ್ಕೆ ಮೆಚ್ಚಲೇ ಬೇಕು.
ನಮ್ಮ ದೇಹವನ್ನು ಹೊತ್ತುಕೊಂಡೆ ಜೀವನ ನಡೆಸಲು ಕಷ್ಟ. ಅಂತದರಲ್ಲಿ ಈತ ಜೇನುಗಳನ್ನು ಹೊತ್ತುಕೊಂಡು ಊರಿಡೀ ಸುತ್ತುತ್ತಿದ್ದಾನೆ. ಅಲ್ಲದೆ, ಅದಕ್ಕೆ ಒಂಚೂರು ಹಾನಿ ಮಾಡದೇ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾನೆ. ಈ ಘಟನೆ ಅಮೆರಿಕಾದ ಒಂದು ಪಟ್ಟಣದ್ದಾಗಿದೆ ಎಂದು ತಿಳಿದು ಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ ಈ ಯುವಕ ಜೇನು ನೊಣಗಳ ಅಂಗಡಿ ಹೊಂದಿದ್ದು, ಜೇನುತುಪ್ಪದ ವ್ಯಾಪಾರ ಮಾಡುತ್ತಾನೆ ಎನ್ನಲಾಗಿದೆ. ಮುಷ್ಠಿಯನ್ನು ಬಿಗಿದುಕೊಂಡಿರುವ ಯುವಕನ ಎಡಗೈ ಮೇಲೆ ಜೇನುನೊಣಗಳು ಗೂಡು ಕಟ್ಟಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಯುವಕ ತನ್ನ ಮುಷ್ಠಿಯನ್ನು ಕಟ್ಟಿದ್ದಾನೆ ಮತ್ತು ಅವನು ಜೇನುನೊಣಗಳಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿಲ್ಲ.
ಯುವಕ ರಾಣಿ ಜೇನುನೊಣವನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದಾನೆ. ಹೀಗಾಗಿ ಜೇನು ನೊಣಗಳು ಆತನ ಮೇಲೆ ದಾಳಿ ಇಟ್ಟಿವೆ. ಆದರೆ, ದಾಳಿ ನಡೆಸಿದರೂ ಕೂಡ ಅವು ಯುವಕನಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಒಟ್ಟಾರೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.