‘ ನಿಮ್ಮ ಸಂಬಳ ಎಷ್ಟು ‘ ಎಂದು ಕೇಳಿದರೆ, ನಿಮ್ಮಲ್ಲಿ ಸತ್ಯ ಹೇಳೋರು ಎಷ್ಟು ಮಂದಿ ?, ಸಮೀಕ್ಷೆಯಲ್ಲಿ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ

ನಮ್ಮಲ್ಲಿ ಎಷ್ಟು ಜನ ತಮ್ಮ ಸಂಬಳ ವನ್ನು ಸತ್ಯ ಹೇಳ್ತೇವೆ ? ‘ನಿಮ್ಮ ಸಂಬಳ ಎಷ್ಟು ‘ ಎಂದು ಕೇಳಿದಾಗ ಭಾರತೀಯರು ತಮ್ಮ ಸಂಬಳದ ನಿಜವಾದ ಗುಟ್ಟನ್ನು ಬಿಟ್ಟುಕೊಡುತ್ತಾರೆಯೇ, ಇಲ್ಲವೇ ಎಂಬ ಬಗ್ಗೆ ಉದ್ಯೋಗ ಸಂಬಂಧಿ ಜಾಲತಾಣ ‘ ಲಿಂಕ್ಡ್ ಇನ್ ‘ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗ ಆಗಿದೆ. ಆ ಸಮೀಕ್ಷೆಯಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ಮಾಹಿತಿಗಳು ಹೊರಬಿದ್ದಿದೆ.

 

ಇದರ ಪ್ರಕಾರ ಭಾರತದ ಶೇ. 61 ರಷ್ಟು ಮಂದಿ ತಮ್ಮ ಸಹೋದ್ಯೋಗಿಗಳಿಗೇನೇ ಸರಿಯಾದ ಸಂಬಳದ ಮಾಹಿತಿ ನೀಡುವುದಿಲ್ಲ. ತಮ್ಮ ಸಹೋದ್ಯೋಗಿಗಳು ಏನಾದರೂ ತಮ್ಮ ಸಂಬಳ ಕೇಳಿದರೆ ಸತ್ಯ ಹೇಳಲ್ಲ. ಅದಕ್ಕೆ ಕಾರಣ ಕೂಡಾ ಇಲ್ಲದೆ ಇಲ್ಲ. ಭಾರತೀಯರಿಗೆ ತಮ್ಮ ಸಹೋದ್ಯೋಗಿಗಳಿಗಿಂತ ತಮ್ಮ ಕುಟುಂಬಸ್ಥರ ಮೇಲೆನೇ ಹೆಚ್ಚು ನಂಬಿಕೆ ಎನ್ನುತ್ತ್ತದೆ ಈ ಸಮೀಕ್ಷೆ.

ಒಟ್ಟು 10 ಮಂದಿ ವೃತ್ತಿಪರರ ಪೈಕಿ ಒಬ್ಬರು ಮಾತ್ರ ತಮ್ಮ ಸಂಬಳವನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅದೂ ತಾವು ನಂಬುವ ಸಹೋದ್ಯೋಗಿಗಳೊಂದಿಗೆ ಮಾತ್ರ. ಇಂಥವರ ಸಂಖ್ಯೆ ಶೇ.13 ಮಾತ್ರ. ಇನ್ನು ಶೇ.9 ರಷ್ಟು ಮಂದಿ ಮಾತ್ರ ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡುವ ಸ್ನೇಹಿತರ ಜತೆ ತಮ್ಮ ಸಂಬಳದ ವಿಷಯ ಹಂಚಿಕೊಳ್ಳುತ್ತಾರೆ ಎಂದು ಈ ವರದಿಯಲ್ಲಿ ಉಲ್ಲೇಖವಾಗಿದೆ.

ಲಿಂಕ್‌ಇನ್‌ ವರ್ಕ್‌ಫೋರ್ಸ್ ಕಾಡೆನ್ಸ್ ಇಂಡೆಕ್ಸ್ ಪ್ರಕಾರ, ಭಾರತದ ಒಟ್ಟಾರೆ ಉದ್ಯೋಗಿಗಳ ವಿಶ್ವಾಸ ಸ್ವಲ್ಪಮಟ್ಟಿಗೆ ಕ್ಷೀಣಿಸಿದೆ. ಆದ್ದರಿಂದ ಹೆಚ್ಚಿನ ಮಂದಿ ತಮ್ಮ ಸಂಬಳದ ಬಗ್ಗೆ ಎಲ್ಲಿಯೂ ಮಾಹಿತಿ ಹೊರಹಾಕುವುದಿಲ್ಲ. 10 ಮಂದಿ ವೃತ್ತಿಪರರಲ್ಲಿ ಏಳು ಮಂದಿ ತಮ್ಮ ಕ್ಷೇತ್ರದಲ್ಲಿ ಮುಂದಿನ ಹಂತವನ್ನು ತಲುಪುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಉಳಿದವರು, ಇಲ್ಲ, ನನ್ನ ಕೆರಿಯರ್ ಇಲ್ಲೇ ಮುಗೀತು, ಈ ಕಂಪನಿ, ಈ ಪೋಸ್ಟ್ ನಲ್ಲೆ ನಾನು ಸೆಟ್ಲ್ ಆಗ್ಬೇಕಾಗಿದೆ ಅಂದುಕೊಳ್ಳುತ್ತಿದ್ದಾರೆ.

ತಮ್ಮ ಸಂಬಳವನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳದೇ ಇರಲು ಇರುವ ಮುಖ್ಯ ಕಾರಣ ಏನೆಂದರೆ, ಎಲ್ಲಿ ತನ್ನ ಸಂಬಳ ಕೇಳಿ, ತನ್ನ ಪ್ರಗತಿಗೆ ಅವರು ಅಡ್ಡಗಾಲು ಹಾಕ್ಬೋದೋ ಎಂಬ ಭಯ ಹೆಚ್ಚಿನ ಭಾರತೀಯರಲ್ಲಿ ಇದೆಯಂತೆ. ಅದೇ ಕಾರಣಕ್ಕೆ ಸಂಬಳ ಎಷ್ಟು ಅಂದ್ರೆ ಶೇರ್ ಮಾಡಿಕೊಳ್ಳಲು ಭಾರತೀಯರಿಗೆ ಹಿಂಜರಿಕೆ.

Leave A Reply

Your email address will not be published.