ಇನ್ನು ಮುಂದೆ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಬೀಳುತ್ತೆ ಭಾರೀ ದಂಡ – ರಾಜ್ಯ ಸರಕಾರ ನಿರ್ಧಾರ

ಭಾರತದಲ್ಲಿ ಜನಸಂಖ್ಯೆಯ ಜೊತೆಗೆ ವಾಹನ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.  ಬೆಂಗಳೂರಿನಲ್ಲಿ ಕೂಡಾ ಜನ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ಜೊತೆ ಜೊತೆಗೆ ವಾಹನಗಳ ಸಂಖ್ಯೆನೂ ಹೆಚ್ಚಿದೆ. ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಒಂದೂವರೆ ಕೋಟಿ ವಾಹನಗಳಿದ್ದು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಹಳ ಹೆಚ್ಚಾಗಿದೆ ಎಂದೇ ಹೇಳಬಹುದು. ಬೆಂಗಳೂರಿನಂತಹ ಮಹಾ ನಗರದಲ್ಲಿ ಒಂದು ಸಿಗ್ನಲ್ ದಾಟಬೇಕು ಅಂದ್ರೆ ಕನಿಷ್ಠ ಪಕ್ಷ ಮೂರು ನಿಮಿಷ ಬೇಕಾಗುತ್ತೆ. ವಾಹನಗಳ ಸಂಖ್ಯೆಗೆ ತಕ್ಕಂತೆ ಬೆಂಗಳೂರಿನ ರೋಡ್ ಇನ್ಫ್ರಾಟ್ಸಕ್ಚರ್ ಇಲ್ಲದೆ, ರಸ್ತೆಗಳ ಅಕ್ಕಪಕ್ಕದಲ್ಲಿ ಪಾರ್ಕಿಂಗ್ ಮಾಡುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.‌ ಜನ ಸರ್ಕಾರದ ಸಾರಿಗೆಯನ್ನು ಬಳಸಲು ಉತ್ತೇಜನ ನೀಡಲು, ಮತ್ತು ಖಾಸಗಿ ವಾಹನಗಳಿಗೆ ಕಡಿವಾಣ ಹಾಕಲು ನಗರ ಭೂ ಸಾರಿಗೆ ಇಲಾಖೆ ಪಾರ್ಕಿಂಗ್ ಪಾಲಿಸಿಯನ್ನು ಜಾರಿಗೆ ತರುತ್ತಿದೆ. ಬೆಂಗಳೂರಿನ 700 ರಸ್ತೆಗಳಲ್ಲಿ ಪಾರ್ಕಿಂಗ್​ಗೆ ಸ್ಥಳ ಗುರುತು ಮಾಡಿದ್ದು, ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವ ವಾಹನಗಳು ಶುಲ್ಕ ಕಟ್ಟಬೇಕಿದೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲ ಎಂಟು ವಲಯಗಳಲ್ಲಿನ 700 ರಸ್ತೆಗಳಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಯಲಹಂಕ ವಲಯದಲ್ಲಿ 60, ಬೊಮ್ಮನಹಳ್ಳಿ 58, ದಾಸರಹಳ್ಳಿ 104, ಮಹದೇವಪುರ 50, ಪೂರ್ವ 59, ರಾಜರಾಜೇಶ್ವರಿನಗರ 58, ದಕ್ಷಿಣ 197 ಮತ್ತು ಪಶ್ಚಿಮ 137 ರಸ್ತೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಎ,ಬಿ,ಸಿ ಎಂದು ಮೂರು ಪಾರ್ಕಿಂಗ್ ವಲಯಗಳನ್ನಾಗಿ ಮಾಡಿದ್ದು ಎ ಜೋನ್​ನಲ್ಲಿ ಪಾರ್ಕ್ ಮಾಡುವ ಕಾರ್ ಹಾಗೂ ಬೈಕ್​ಗೆ ಗಂಟೆಗೆ ಇಂತಿಷ್ಟು ಎಂದು ದರ ನಿಗದಿ ಮಾಡಲಾಗಿದೆ.

ಪೇ ಆ್ಯಂಡ್ ಪಾರ್ಕ್ ಪ್ರತಿ ಗಂಟೆಗೆ ಎಷ್ಟು?

ಎ    15 ( ದ್ವಿಚಕ್ರ ವಾಹನ ) 30 ( ಕಾರುಗಳು)
ಬಿ    10                             20
ಸಿ     5                              15

ಈ ಪಾರ್ಕಿಂಗ್ ಪಾಲಿಸಿ ಮುಂದಿನ ವಾರದಿಂದಲೇ ಬೆಂಗಳೂರಿನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ರಸ್ತೆ ಪಕ್ಕದಲ್ಲಿ‌ ಫ್ರೀಯಾಗಿ ಪಾರ್ಕ್ ಮಾಡುವಂತಿಲ್ಲ. ಪಾರ್ಕಿಂಗ್ ಪಾಲಿಸಿ ಜಾರಿಗೆ ಬಂದರೆ ಜನ ಪಾರ್ಕಿಂಗ್ ಶುಲ್ಕಕ್ಕೆ ಹೆದರಿ ಸಾಮೂಹಿಕ ಸಾರಿಗೆ ಬಳಕೆ ಮಾಡುವ ಸಾಧ್ಯತೆಯಿದೆ. ಇದೆ ಕಾರಣಕ್ಕೆ ಈ ರೂಲ್ಸ್ ಜಾರಿಗೆ ತಂದಿದ್ದ ಮುಂದಿನ ದಿನಗಳಲ್ಲಿ ಮನೆ ಮುಂದೆ ವಾಹನಗಳನ್ನು ಪಾರ್ಕ್ ಮಾಡಬೇಕು ಅಂದ್ರು ಸಹ ಶುಲ್ಕ ಪಾವತಿಸಬೇಕಾದ ಸ್ಥಿತಿ ನಿರ್ಮಾಣ ಆಗಲಿದೆ.

ಮೋಟಾರುರಹಿತ ಸಾರಿಗೆಯನ್ನು ಉತ್ತೇಜಿಸಲು ವಾಹನ ನಿಲುಗಡೆ ತಾಣದಲ್ಲಿ ಬೈಸಿಕಲ್‌ಗಳಿಗೆ ಜಾಗ ಮೀಸಲಿಡಲಾಗುತ್ತದೆ. ಸೈಕಲ್‌ಗಳ ನಿಲುಗಡೆಗೆ ಯಾವುದೇ ಶುಲ್ಕ ಇರುವುದಿಲ್ಲ. ಸೈಕಲ್​​ಗಳಿಗೆ ಪ್ರತ್ಯೇಕ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗುತ್ತಿದೆ.

Leave A Reply

Your email address will not be published.