ನದಿಗೆ ಹಾರಿ ಯುವಕ ಆತ್ಮಹತ್ಯೆ

Share the Article

ಮಂಗಳೂರು :ವ್ಯಕ್ತಿಯೊರ್ವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುಪುರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿಯನ್ನು ವಾಮಂಜೂರು ಮೂಡುಶೆಡ್ಡೆ ನಿವಾಸಿ ಅರುಣ್ ಪೂಜಾರಿ(38) ಎಂದು ಗುರುತಿಸಲಾಗಿದೆ.

ಪೈಂಟರ್ ಕೆಲಸ ಮಾಡುತ್ತಿರುವ ಆ ಅರುಣ್  ಗುರುವಾರ ರಾತ್ರಿ 8:30 ರ ಸುಮಾರಿಗೆ ಗುರುಪುರ ಸೇತುವೆಯ ಮೇಲೆ ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ನದಿಗೆ ಹಾರಿದ್ದರು.

ಮದುವೆಯಾಗಿ ಪತ್ನಿಯಿಂದ ವಿಚ್ಚೇದನ ಪಡೆದಿರುವ ಅರುಣ್  ಮಗಳನ್ನು ಅಗಲಿದ್ದಾರೆ.

ಅರುಣ್ ನದಿಗೆ ಹಾರುವುದನ್ನು ಕಂಡ ಸ್ಥಳೀಯರು ತಕ್ಷಣ ಪೋಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಧಾವಿಸಿದ ಬಜಪೆ ಪೊಲೀಸರು ಮೃತದೇಹದ ಹುಡುಕಾಟದ ಕಾರ್ಯಾಚರಣೆ ನಡೆಸಿದ್ದರು.

Leave A Reply