ಸಮಂತಾಗೆ ಸ್ಯಾಂಡಲ್ ವುಡ್ ಎಂಟ್ರಿಗೆ ರಕ್ಷಿತ್ ಶೆಟ್ಟಿ ಸಾಥ್!!!

ಸಮಂತಾ ಸೌತ್ ಇಂಡಿಯಾ ಮಾತ್ರವಲ್ಲ ಬಾಲಿವುಡ್ ನಲ್ಲೂ ಮಿಂಚಿ ಸಖತ್ ಪಾಪ್ಯುಲರ್ ಆಗಿರೋ ನಟಿ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಿದ್ದ ಸಮಂತಾ ಇತ್ತೀಚಿಗೆ ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಏನೇ ಇರಲಿ. ಸಮಂತಾ ಸುಳಿವು ಇಲ್ಲದೆ ಹೋದರೂ ಅವರ ಸಿನಿಮಾ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

 

ವಿಚ್ಛೇದನದ ಬಳಿಕ ಸಮಂತಾ ಹಲವಾರು ಸಿನಿಮಾಗಳಲ್ಲಿ ಬಿಜಿ಼ಯಾಗಿದ್ದಾರೆ. ಅದರಲ್ಲೊಂದು ಪ್ಯಾನ್ ಇಂಡಿಯಾ ಸಿನಿಮಾ. ಅದುವೇ ‘ಯಶೋದಾ’. ಸದ್ಯ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಸಮಂತಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋದಾ’ ರಿಲೀಸ್‌ಗೆ ರೆಡಿ!

ಸಮಂತಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋದಾ’. ಒಂದು ತಿಂಗಳಿನಿಂದ ಈ ಸಿನಿಮಾದ ಪ್ರಚಾರ ನಡೆಯಬೇಕಿತ್ತು. ಆದರೆ, ಈ ಸಿನಿಮಾ ರಿಲೀಸ್‌ಗೆ ಹೆಚ್ಚು ಕಡಿಮೆ 15 ದಿನಗಳು ಬಾಕಿ ಉಳಿದಿವೆ. ಈಗ ಸಿನಿಮಾ ಪ್ರಚಾರವನ್ನು ಆರಂಭಿಸಿದೆ.

‘ಯಶೋದಾ’ ಟ್ರೈಲರ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ಇದು ಕನ್ನಡದಲ್ಲಿಯೂ ರಿಲೀಸ್ ಆಗುತ್ತಿರುವುದರಿಂದ ರಕ್ಷಿತ್ ಶೆಟ್ಟಿಯಿಂದ ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿಸಲು ಚಿತ್ರತಂಡ ಮುಂದಾಗಿದೆ.

ರಕ್ಷಿತ್ ಶೆಟ್ಟಿ ಅಕ್ಟೋಬರ್ 27ರಂದು ‘ಯಶೋದಾ’ ಸಿನಿಮಾದ ಕನ್ನಡ ಟ್ರೈಲರ್ ರಿಲೀಸ್ ಮಾಡಲಿದ್ದಾರೆ. ಸಂಜೆ 5.36ಕ್ಕೆ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಕನ್ನಡ ಮಾತ್ರವಲ್ಲ ಐದೂ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಸಮಂತಾ ಅಭಿನಯದ ‘ಯಶೋದಾ’ ಮುಂದಿನ ತಿಂಗಳು ನವೆಂಬರ್ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಏಕಕಾಲಕ್ಕೆ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.

ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ‘ಯಶೋಧಾ’ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಬಿಡುಗಡೆಗೆ 15 ದಿನಗಳು ಇರುವಾಗ ಟ್ರೈಲರ್ ರಿಲೀಸ್ ಮಾಡಲಿದ್ದು, ಪ್ರಚಾರ ಆರಂಭ ಮಾಡುತ್ತಿದ್ದಾರೆ.

ಹರಿ ಹಾಗೂ ಹರೀಶ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ವರಲಕ್ಷ್ಮೀ ಶರತ್ ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಹೊಸ ಶೈಲಿಯ ಆ್ಯಕ್ಷನ್ ಶೈಲಿಯ ಥ್ರಿಲ್ಲರ್ ಕಥೆಯನ್ನು ಹೊಂದಿರುವ ‘ಯಶೋದಾ’ ಸಿನಿಮಾವನ್ನು ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿದ್ದಾರೆ.

Leave A Reply

Your email address will not be published.