ಪುತ್ತೂರು: ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ವೈದ್ಯ – ಆರೋಪ, ದೂರು

Share the Article

ಪುತ್ತೂರು : ಒಂದೂವರೆ ತಿಂಗಳ ಶಿಶುವಿಗೆ ಅವಧಿ ಮೀರಿದ ಚುಚ್ಚು ಮದ್ದು ಎಂದು ಪುತ್ತೂರಿನ ಆಸ್ಪತ್ರೆಯೊಂದರ ವೈದ್ಯರ ವಿರುದ್ಧ ಮಗುವಿನ ತಂದೆ ನಗರ ಠಾಣೆಗೆ ಮಂಗಳವಾರ ದೂರು ನೀಡಿದ ಘಟನೆ ನಡೆದಿದೆ.

ಬಂಟ್ವಾಳದ ಕನ್ಯಾನ ನಿವಾಸಿ ಜೀವನ್‌ ಪ್ರಕಾಶ್‌ ಡಿ’ಸೋಜಾ ಅವರಿಗೆ ದೂರು ನೀಡಿದ ವ್ಯಕ್ತಿ.

ಇವರು ಅ.24ರಂದು ತನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚುಚ್ಚು ಮದ್ದು ಕೊಡಿಸಿದ್ದರು.

ಆದರೆ ಚುಚ್ಚು ಮದ್ದಿನ ಲೇಬಲ್ ‌ನಲ್ಲಿ ಅವಧಿ ಮೀರಿದ ದಿನಾಂಕ ಕಂಡುಬಂದಿದೆ.
ಅವಧಿ ಮೀರಿದ ಚುಚ್ಚು ಮದ್ದು ನೀಡಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

Leave A Reply